This is the title of the web page
This is the title of the web page

archive#manvi

Local News

ವಕೀಲರ ಸಂರಕ್ಷಣಾ ಕಾಯ್ದೆಗೆ ಒತ್ತಾಯ.

ಮಾನ್ವಿ : ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕಿರುಕುಳ, ಸುಳ್ಳು ಕೇಸ್ ದಾಖಲಿಸುವುದರಿಂದ ಘನತೆಗೆ ದಕ್ಕೆ ಬರುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಶೀಘ್ರವೇ ವಕೀಲರ...
Local News

ಝೀಕಾ ವೈರಸ್ ಕುರಿತು ಜಾಗೃತಿ ಜಾಥ

ಮಾನ್ವಿ : ಪಟ್ಟಣದ ಕಲ್ಮಠ ಶಿಕ್ಷಣ ಸಂಸ್ಥೆವತಿಯಿಂದ ಝೀಕಾ ವೈರಸ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ನಡೆದ ಜಾಗೃತಿ ಜಾಥಕ್ಕೆ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್...
Local News

ಗಾಂಧೀ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ ದಿ.ಬಿ.ಕೆ.ಎಸ್.ಅಯ್ಯಂಗಾರ್ ಅವರ ಜನ್ಮದಿನಾಚರಣೆ

ಮಾನ್ವಿ : ಪಟ್ಟಣದ ಗಾಂಧೀ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ ನಾಡಿನ ಪ್ರಸಿದ್ದ ಯೋಗ ಗುರು ದಿ.ಬಿ.ಕೆ.ಎಸ್.ಅಯ್ಯಂಗಾರ್ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ದಿ.ಬಿ.ಕೆ.ಎಸ್.ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಯೋಗ ಗುರು ಅನ್ನದಾನಯ್ಯ ಚಾಲನೆ ನೀಡಿ ಮಾತನಾಡಿ ಅಯ್ಯಂಗಾರ್ ಹೆಸರಿನಲ್ಲಿ ಯೋಗ ಸಾಧನೆಯ ಸಂಸ್ಥೆಯನ್ನು ಸ್ಥಾಪಿಸಿ ಆನೇಕ ಯೋಗ ಸಾಧಕರನ್ನು ನಾಡಿನಾಧ್ಯಂತ ಹುಟ್ಟುಹಾಕಿ ಯೋಗವನ್ನು ವಿಶ್ವಪ್ರಸಿದ್ದಿಯಾಗಿಸಿದ್ದಾರೆ ಎಂದು ತಿಳಿಸಿದರು. ಯೋಗದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಾದ ಶಶಿಕುಮಾರ್, ಶ್ರೀದೇವಿಯವರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ರಾಮಲಿಂಗಪ್ಪ, ಫ್ರೌಡಶಾಲೆಯ ಮುಖ್ಯಗುರು ಜಾತಪ್ಪ ತಳಕಲ್ಲು,ಪ್ರಾಥಮಿಕ ವಿಭಾಗದ ಮುಖ್ಯಗುರು ಹೋನ್ನಪ್ಪ ಕುರುಡಿ, ಶಿಕ್ಷಕರಾದ ಭೀಮಬಾಯಿ, ಅಂಜಾರೆಡ್ಡಿ, ಗೋನಿಚಂದ್ ರಾಥೋಡ್, ಮೌನೇಶ, ರಾಘವೇಂದ್ರ, ಶಾಂತ, ಬಸವರಾಜ, ವಸಂತ, ಸೋಮಶೇಖರ, ಆಶೋಕರೆಡ್ಡಿ, ವಿರುಪಾಕ್ಷಿ, ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು....
Local News

11 ತಿಂಗಳ ಸಂಬಳ ಬಾಕಿ: ಬಿಸಿಎಂ ಹಾಸ್ಟೆಲ್ ನೌಕರರಿಂದ ಪ್ರತಿಭಟನೆ

ಮಾನ್ವಿ : ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರಿ ಹಾಸ್ಟೆಲ್ ನಲ್ಲಿ ಅಡಿಗೆಯವರು, ಅಡುಗೆ ಸಹಾಯಕರು, ಮತ್ತು ರಾತ್ರಿ ಕಾವಲುಗಾರ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ನೀಡುತ್ತಿದ್ದೇವೆ ಎಂದು ಹೇಳುತ್ತೆ. ಆದರೆ ಮಾನ್ವಿ ತಾಲೂಕಿನ ಬಿಸಿಎಂ ಇಲಾಖೆಯಲ್ಲಿ 11 ತಿಂಗಳಿಂದ ಸಂಬಳ ನೀಡದಿರುವುದಕ್ಕೆ ಕಾರ್ಮಿಕರು ನಮಗೆ ನ್ಯಾಯಬೇಕು ಎಂದು ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾನ್ವಿ ತಾಲೂಕಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಅಂಬವ್ವ ಕಾರ್ಮಿಕರನ್ನು ದುಡಿಸಿಕೊಂಡು ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸ್ಟೆಲ್ ನಲ್ಲಿ ಅಡುಗೆ ಮಾಡಿ ನಾವು ಬದುಕು ಸಾಗಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನಮಗೆ ಬೇರೆ ಏನು ಗೊತ್ತಿಲ್ಲ. 11 ತಿಂಗಳಿಂದ ನಮಗೆ ಸಂಬಳ ಆಗಿರುವುದಿಲ್ಲ. ನಮ್ಮ ಕುಟುಂಬ ಹೇಗೆ ಜೀವನ ಸಾಗಿಸುವುದು? ನಮ್ಮ ಮಕ್ಕಳ ಶಿಕ್ಷಣಕ್ಕೆ...
Local News

ಭಾವೈಕ್ಯತೆ ಬೆಸೆಯುವ ಬಿಜಲಿ ವಸ್ತಾದಿ ತತ್ವಪದಗಳು : ರಮೇಶಬಾಬು ಯಾಳಗಿ

ಮಾನ್ವಿ :  ರಾಯಚೂರು ಜಿಲ್ಲೆಯ ಪ್ರಥಮ ಮುಸ್ಲಿಂ ತತ್ವಪದಕಾರ ಅರೋಲಿಯ ಬಿಜಲಿ ವಸ್ತಾದಿ ಅವರ ತತ್ವಪದಗಳು ಭಾವೈಕ್ಯತೆಯ ಸಂಕೇತಗಳಾಗಿವೆ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು. ಅವರು ತಾಲೂಕಿನ ಹರನಹಳ್ಳಿ ಗ್ರಾಮದಲ್ಲಿ ಕಲ್ಮಠ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕ ಆಯೋಜಿಸಿರುವ ವಿಶೇಷ ಶಿಬಿರದಲ್ಲಿ "ತತ್ವಪದಗಳಲ್ಲಿ ನಿಜ ಜೀವನದ ಸಾರ" ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಧರ್ಮ ಸಮನ್ವಯಕ್ಕೆ ಪ್ರಮುಖ ಉದಾಹರಣೆಯಾಗಿರುವ ವಸ್ತಾದಿ ಅವರು ಸೂಗೂರೇಶ್ವರನ ಕುರಿತು, ಮಟಮಾರಿ ವೀರಭದ್ರೇಶ್ವರನ ಕುರಿತು ಭಾವೈಕ್ಯತೆ ಬೆಸೆಯುವ ಪದಗಳನ್ನು ರಚಿಸಿದ್ದಾರೆ.ಇವರ ತತ್ವಪದಗಳು ಹೆಚ್ಚು ಹೆಚ್ಚು ಪ್ರಚುರ ಪಡಿಸಬೇಕಾದ ಅಗತ್ಯವಿದೆ. "ಸಿಟ್ಟು ಬಂದರೆ ನಿಧಾನ ಮಾಡು, ಹಸಿದು ಬಂದವರಿಗೆ ಅನ್ನವ ನೀಡು, ಪರ ನಿಂದೆಯ ಬಿಟ್ಟು ಪ್ರೀತಿ ಮಾಡು" ಎಂಬ ಬಿಜಲಿ ಅವರ ತತ್ವಪದದ ಸಾಲುಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದ ಯಾಳಗಿ ಅವರು ಮಾನ್ವಿ...
Local News

ನೀರಮಾನವಿಯ ಕೋಳಿ ಕ್ಯಾಂಪ್ ಗೆ ತಾ. ಪಂ. ಇ. ಓ ಬೇಟಿ ಪರಿಶೀಲನೆ.

ಮಾನ್ವಿ : ಮಾನ್ವಿ ತಾಲೂಕಿನ ನೀರಮಾನವಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕೋಳಿ ಕ್ಯಾಂಪಿನ ಸಂಶಯಾಸ್ಪದ ಜಿಕಾ ವೈರಸ್ ಪ್ರಕರಣ ಹಿನ್ನೆಲೆಯಲ್ಲಿ ನಾಗರಾಜ ಮನೆಗೆ ಬೇಟಿ ನೀಡಿ ವಿಚಾರಣೆ ಮಾಡಿದರು, ಕುಟುಂಬಕ್ಕೆ ದೈರ್ಯ ತುಂಬಿದರು. ಮನೆಯ ಮುಂದೆ ಇರುವ ಕುಡಿಯುವ ನೀರಿನ ಗುಮ್ಮಿಯನ್ನು ಸ್ವಚ್ಛ ಗೊಳಿಸಿ, ಬಿಲಿಚಿಂಗ್ ಪೌಡರ್ ಹಾಕಲು ಶಿವಕುಮಾರ್ ಪಿಡಿಓ ರವರಿಗೆ ಮತ್ತು ಪಂಚಾಯತಿ ಸಿಬ್ಬಂದಿಗಳಿಗೆ ತಿಳಿಸಿದರು. ನಂತರ ಅರೋಗ್ಯ ಇಲಾಖೆಯರವರು ನಾವು ಈಗಾಗಲೇ ಪಾಗಿಂಗ್ ಮಾಡಲಾಗಿದೆ, ಹರವಿ ಮತ್ತು ನೀರಮಾನವಿ ಗ್ರಾಮದ ಎಲ್ಲಾ ಕಡೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಅಶಾ ಕಾರ್ಯಕರ್ತರು ಬೆಳಗ್ಗೆ 8 ಗಂಟೆ ಯಿಂದ ಲಾರ್ವ ಸಮೀಕ್ಷೆ ಮಾಡಿದ್ದಾರೆ ಮತ್ತು ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಎಲ್ಲಾ ಸಿಬ್ಬಂದಿಗಳು ಸಹಾಯಕರದಿಂದ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು. ಯಾವುದೇ ರೀತಿ ತೊಂದರೆ ಇದ್ದಾರೆ ನಮಗೆ ತಿಳಿಸಿ ಎಂದು...
Local News

ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಎನ್ ಎಸ್ ಎಸ್ ಕಾರ್ಯ ಶ್ಲಾಘನೀಯ

ಮಾನ್ವಿ : ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳ ಕಾರ್ಯ ಶ್ಲಾಘನೀಯ ಎಂದು ಹರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಲಿಂಗಣ್ಣ ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ ಅವರು ನೇರವೇರಿಸಿದರು. ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಾಜಪ್ಪಗೌಡ ಅವರು ಎನ್ ಎಸ್ ಎಸ್ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಪಾಟೀಲ ಅವರು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ನರಸಣ್ಣ ಸುಂಕೇಶ್ವರ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು....
Local News

ಝೀಕಾ ವೈರಸ್ ಸೋಂಕಿನ ಕುರಿತು ಜನರಲ್ಲಿ ಜಾಗೃತಿ

ಮಾನ್ವಿ : ರಾಜ್ಯದಲ್ಲಿಯೇ ಮೊದಲ ಬಾರಿಗೆ ಝೀಕಾ ವೈರಸ್ ಕಂಡು ಬಂದಿರುವುದರಿಂದ ಜನರು ಅನಗತ್ಯವಾಗಿ ಭಯ ಬೀಳದೆ ಆರೋಗ್ಯ ಇಲಾಖೆಯವರು ನೀಡುವ ಜಾಗೃತೆಗಳನ್ನು ಪಾಲಿಸುವುದರಿಂದ ಝೀಕಾ ವೈರಸ್ ಸೋಂಕು ಹರಡದಂತೆ ತಡೆಯಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿ ಮುಂಡಾಸ್ ತಿಳಿಸಿದರು. ತಾಲೂಕಿನ ನೀರಮಾನವಿ ಗ್ರಾಮದ ಹತ್ತಿರದ ಕೋಳಿ ಕ್ಯಾಂಪ್‌ನ ನಿವಾಸಿ 5ವರ್ಷದ ಬಾಲಕಿಯಲ್ಲಿ ರಾಜ್ಯದಲ್ಲಿಯೇ ಮೊದಲ ಝೀಕಾ ವೈರಸ್ ಸೋಂಕು ದೃಢ ಪಟ್ಟಿರುವುದರಿಂದ ಜಿಲ್ಲಾ ಆರೋಗ್ಯ ಶಿಕ್ಷಣ ವಿಭಾಗ ಸಂಯುಕ್ತ ಆಶ್ರಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು . ಝೀಕಾ ವೈರಸ್ ಸೋಂಕಿನ ಲಕ್ಷಣಗಳಾದ ತೀವ್ರ ಜ್ವರ, ಮೈ, ಕೈ ನೋವು, ಕೀಲು ನೋವು, ಮೈ ಮೇಲೆ ಗುಳ್ಳೆಗಳು ಏಳುವುದು, ಕಣ್ಣು ಕೆಂಪಾಗುವುದು ಕಂಡುಬಂದಲ್ಲಿ ಆರೋಗ್ಯ ಇಲಾಖೆಯ ಆಸ್ಪತ್ರೇಗಳಲ್ಲಿ ತಕ್ಷಣವೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಝೀಕಾ ವೈರಸ್ ಸೋಂಕು ಈಡೀಸ್ ಸೊಳ್ಳೆಗಳ ಕಡಿತದಿಂದ ಹರಡುವುದರಿಂದ. ಗರ್ಭಿಣಿ ಮಹಿಳೆಯರ ಗರ್ಭದಲ್ಲಿನ...
Local News

ಕುರ್ಡಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಮಾನ್ವಿ : 3 ಕೋಟಿ 86ಲಕ್ಷ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಸರಬರಾಜು ನಳಗಳನ್ನು ಆಳವಾಡಿಸುವ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಗ್ರಾಮೀಣ ಶಾಸಕ ಬಸವನಗೌಡ ದದ್ದಾಲ್ ಶಂಕು ಸ್ಥಾಪನೆ ನೆರವೇರಿಸಿದರು. ಕುರ್ಡಿ ಗ್ರಾಮದಲ್ಲಿನ ಜನರಿಗೆ ಶುದ್ದಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಗ್ರಾಮದ ಪ್ರತಿ ಮನೆಗೆ ಶುಧ್ದ ನೀರು ಪೂರೈಕೆಗಾಗಿ ಬಹುಕೋಟಿ ವೆಚ್ಚದಲ್ಲಿ ಕಾಮಾಗಾರಿಯನ್ನು ಕೈಗೊಳ್ಳಲಾಗಿದ್ದು ಕುಡಿಯು ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಶಿಘ್ರವೇ ಕಾಮಾಗಾರಿ ಪೂರ್ಣಗೊಳ್ಳಿಸಿ ಶುದ್ದನೀರು ಪೂರೈಕೆ ಮಾಡುವಂತೆ ಸೂಚಿಸಿದರು. ಕುರ್ಡಿ ಹೋಬಳಿಯ ಸಂಪೂರ್ಣವಾಗಿ ಅಭಿವೃದ್ದಿ ಗೊಳ್ಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. ಕುರ್ಡಿ ಕ್ರಾಸ್‌ನಲ್ಲಿನ ಸರಕಾರಿ ಶಾಲೆಯಲ್ಲಿ 18ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಶಾಲಾ ಕೋಠಡಿ ಹಾಗೂ 8 ಶೌಚಾಲಯಗಳನ್ನು ಉದ್ಘಾಟಿಸಿ. ಕುರ್ಡಿಯಿಂದ ಗಾರಲದಿನ್ನಿಗೆ ಸಂಪರ್ಕ ಕಲ್ಪಿಸುವ 20ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಪೂಜೆ...
Local News

ಗುರಿ ತಲುಪಲು ಸತತ ಅಧ್ಯಯನ ಅವಶ್ಯಕ

ಮಾನ್ವಿ : ನಿದಿ೯ಷ್ಟ ಗುರಿ ತಲುಪಲು ಜ್ಞಾನದಾಹಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸತತ ಅಧ್ಯಯನಶೀಲತೆ ಗುಣ ಹೋಂದಿರಬೇಕು ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಹೇಳಿದರು. ಮಾನ್ವಿ ಪಟ್ಟಣದ ಏಕಲವ್ಯ ಕರಿಯರ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ 'ಮಾದರಿ ಪರೀಕ್ಷೆ ಹಾಗೂ ಸಾಧಕರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸ್ಪರ್ಧಾರ್ಥಿಗಳು ಅಧ್ಯಯನ ಅವಧಿಯನ್ನು ತಪಸ್ಸೆಂದು, ಓದುವಾಗ ಏಕಾಗ್ರತೆ ಪ್ರಮುಖ ಪಾತ್ರ ವಹಿಸುತ್ತದೆ ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರತೆ ರೂಡಿಸಿಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ದಿನಪತ್ರಿಕೆ ಓದುಬೇಕು. ಸ್ಪರ್ಧಾರ್ಥಿಗಳು ಉತ್ತಮವಾದ ಹವ್ಯಾಸಗಳನ್ನು ಹೊಂದಿರಬೇಕು.ಮಾದರಿ ಪರೀಕ್ಷೆಗಳನ್ನು ಬರೆಯುವುದರಿಂದ ಸ್ಪರ್ಧಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು. ಮಾರ್ಗದರ್ಶಕ ಹಾಗೂ ಶಿಕ್ಷಕ ಗೋಪಾಲ ನಾಯಕ ಜೂಕೂರು ಮಾತನಾಡಿ ಅಧ್ಯಯನದಿಂದ ಮಾತ್ರ ಉನ್ನತ ಹುದ್ದೆ ಪಡೆಯಬಹುದು.ಚಂದ್ರ ತಾರಾ ಬಲಕ್ಕಿಂತ ತಮ್ಮ ಜ್ಞಾನ ಬಲ ಹಾಗೂ ಬುದ್ಧಿ ಬಲದ ಮೇಲೆ ನಂಬಿಕೆಯಿಟ್ಟು...
1 3 4 5 6
Page 5 of 6