ವಕೀಲರ ಸಂರಕ್ಷಣಾ ಕಾಯ್ದೆಗೆ ಒತ್ತಾಯ.
![]() |
![]() |
![]() |
![]() |
![]() |
ಮಾನ್ವಿ : ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕಿರುಕುಳ, ಸುಳ್ಳು ಕೇಸ್ ದಾಖಲಿಸುವುದರಿಂದ ಘನತೆಗೆ ದಕ್ಕೆ ಬರುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಶೀಘ್ರವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಮಾನವಿ ವಕೀಲರ ಸಂಘ ಇಂದು ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಒತ್ತಾಯದ ಮನವಿ ಸಲ್ಲಿಸಿತು.
ತಾಲೂಕ ಆಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮಾನವಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ ರಾಜ್ಯದಲ್ಲಿ ವಕೀಲರ ಮೇಲೆ ಒಂದಿಲ್ಲೊಂದು ಕಾರಣದಿಂದ ನಿರಂತರವಾಗಿ ಪೊಲೀಸರು, ಸರ್ಕಾರಿ ಅಧಿಕಾರಿಗಳು ನಡೆಸುತ್ತಿರುವ ಹಲ್ಲೆ ಕಿರುಕುಳ ಹಾಗೂ ಸುಳ್ಳು ಕೇಸ್ ದಾಖಲಿಸಿ ವಕೀಲರ ಘನತೆ ಹಾಳುಮಾಡುತ್ತಿದ್ದು ಭಯದ ವಾತಾವರಣದಲ್ಲಿ ವಕೀಲರು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಮುಂಬರುವ ಅಧಿವೇಶನದಲ್ಲಿ ಶೀಘ್ರವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವ ಮೂಲಕ ವಕೀಲರ ಘನತೆ ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
![]() |
![]() |
![]() |
![]() |
![]() |