ಮಾನ್ವಿ : ಪಟ್ಟಣದ ಗಾಂಧೀ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ ನಾಡಿನ ಪ್ರಸಿದ್ದ ಯೋಗ ಗುರು ದಿ.ಬಿ.ಕೆ.ಎಸ್.ಅಯ್ಯಂಗಾರ್ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ದಿ.ಬಿ.ಕೆ.ಎಸ್.ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಯೋಗ ಗುರು ಅನ್ನದಾನಯ್ಯ ಚಾಲನೆ ನೀಡಿ ಮಾತನಾಡಿ ಅಯ್ಯಂಗಾರ್ ಹೆಸರಿನಲ್ಲಿ ಯೋಗ ಸಾಧನೆಯ ಸಂಸ್ಥೆಯನ್ನು ಸ್ಥಾಪಿಸಿ ಆನೇಕ ಯೋಗ ಸಾಧಕರನ್ನು ನಾಡಿನಾಧ್ಯಂತ ಹುಟ್ಟುಹಾಕಿ ಯೋಗವನ್ನು ವಿಶ್ವಪ್ರಸಿದ್ದಿಯಾಗಿಸಿದ್ದಾರೆ ಎಂದು ತಿಳಿಸಿದರು.
ಯೋಗದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಾದ ಶಶಿಕುಮಾರ್, ಶ್ರೀದೇವಿಯವರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ರಾಮಲಿಂಗಪ್ಪ, ಫ್ರೌಡಶಾಲೆಯ ಮುಖ್ಯಗುರು ಜಾತಪ್ಪ ತಳಕಲ್ಲು,ಪ್ರಾಥಮಿಕ ವಿಭಾಗದ ಮುಖ್ಯಗುರು ಹೋನ್ನಪ್ಪ ಕುರುಡಿ, ಶಿಕ್ಷಕರಾದ ಭೀಮಬಾಯಿ, ಅಂಜಾರೆಡ್ಡಿ, ಗೋನಿಚಂದ್ ರಾಥೋಡ್, ಮೌನೇಶ, ರಾಘವೇಂದ್ರ, ಶಾಂತ, ಬಸವರಾಜ, ವಸಂತ, ಸೋಮಶೇಖರ, ಆಶೋಕರೆಡ್ಡಿ, ವಿರುಪಾಕ್ಷಿ, ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.
![]() |
![]() |
![]() |
![]() |
![]() |
[ays_poll id=3]