This is the title of the web page
This is the title of the web page
Local News

ಭಾವೈಕ್ಯತೆ ಬೆಸೆಯುವ ಬಿಜಲಿ ವಸ್ತಾದಿ ತತ್ವಪದಗಳು : ರಮೇಶಬಾಬು ಯಾಳಗಿ


ಮಾನ್ವಿ :  ರಾಯಚೂರು ಜಿಲ್ಲೆಯ ಪ್ರಥಮ ಮುಸ್ಲಿಂ ತತ್ವಪದಕಾರ ಅರೋಲಿಯ ಬಿಜಲಿ ವಸ್ತಾದಿ ಅವರ ತತ್ವಪದಗಳು ಭಾವೈಕ್ಯತೆಯ ಸಂಕೇತಗಳಾಗಿವೆ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.

ಅವರು ತಾಲೂಕಿನ ಹರನಹಳ್ಳಿ ಗ್ರಾಮದಲ್ಲಿ ಕಲ್ಮಠ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕ ಆಯೋಜಿಸಿರುವ ವಿಶೇಷ ಶಿಬಿರದಲ್ಲಿ “ತತ್ವಪದಗಳಲ್ಲಿ ನಿಜ ಜೀವನದ ಸಾರ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಧರ್ಮ ಸಮನ್ವಯಕ್ಕೆ ಪ್ರಮುಖ ಉದಾಹರಣೆಯಾಗಿರುವ ವಸ್ತಾದಿ ಅವರು ಸೂಗೂರೇಶ್ವರನ ಕುರಿತು, ಮಟಮಾರಿ ವೀರಭದ್ರೇಶ್ವರನ ಕುರಿತು ಭಾವೈಕ್ಯತೆ ಬೆಸೆಯುವ ಪದಗಳನ್ನು ರಚಿಸಿದ್ದಾರೆ.ಇವರ ತತ್ವಪದಗಳು ಹೆಚ್ಚು ಹೆಚ್ಚು ಪ್ರಚುರ ಪಡಿಸಬೇಕಾದ ಅಗತ್ಯವಿದೆ. “ಸಿಟ್ಟು ಬಂದರೆ ನಿಧಾನ ಮಾಡು, ಹಸಿದು ಬಂದವರಿಗೆ ಅನ್ನವ ನೀಡು, ಪರ ನಿಂದೆಯ ಬಿಟ್ಟು ಪ್ರೀತಿ ಮಾಡು” ಎಂಬ ಬಿಜಲಿ ಅವರ ತತ್ವಪದದ ಸಾಲುಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದ ಯಾಳಗಿ ಅವರು ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಸನಗೌಡ ಬುರನಾಪುರ ಅವರ ತತ್ವಪದವನ್ನು ಹಾಡಿ ಅದರಲ್ಲಡಗಿದ ಸಾರವನ್ನು ಸಾದರಪಡಿಸಿದರು. ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಮಠ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಪಾಟೀಲ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಲ್ಮಠ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಕಮತರ,ಹರನಹಳ್ಳಿ ಗ್ರಾಮದ ಮುಖಂಡರಾದ ನಾಗರಾಜ ಪೋಲಿಸ್ ಪಾಟೀಲ, ರಾಜಪ್ಪಗೌಡ, ರಮೇಶಪ್ಪಗೌಡ, ಅಮರಯ್ಯ ಸ್ವಾಮಿ, ಚಾಂದಪಾಷ, ವೀರಯ್ಯಸ್ವಾಮಿ,ಶಿಕ್ಷಕ ಹನುಮಂತಪ್ಪ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ನರಸಣ್ಣ, ಉಪನ್ಯಾಸಕ ಮಾರ್ಟಿನ್ ಇನ್ನಿತರರಿದ್ದರು. ಉಪನ್ಯಾಸಕ ಆನಂದಕುಮಾರ ನಿರೂಪಿಸಿದರು.ವಿದ್ಯಾರ್ಥಿ ಕಿರಿಲಿಂಗ ಸ್ವಾಗತಿಸಿದರು, ರಮೇಶ ವಂದಿಸಿದರು.


[ays_poll id=3]