ಮಾನ್ವಿ : 3 ಕೋಟಿ 86ಲಕ್ಷ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಸರಬರಾಜು ನಳಗಳನ್ನು ಆಳವಾಡಿಸುವ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಗ್ರಾಮೀಣ ಶಾಸಕ ಬಸವನಗೌಡ ದದ್ದಾಲ್ ಶಂಕು ಸ್ಥಾಪನೆ ನೆರವೇರಿಸಿದರು.
ಕುರ್ಡಿ ಗ್ರಾಮದಲ್ಲಿನ ಜನರಿಗೆ ಶುದ್ದಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಗ್ರಾಮದ ಪ್ರತಿ ಮನೆಗೆ ಶುಧ್ದ ನೀರು ಪೂರೈಕೆಗಾಗಿ ಬಹುಕೋಟಿ ವೆಚ್ಚದಲ್ಲಿ ಕಾಮಾಗಾರಿಯನ್ನು ಕೈಗೊಳ್ಳಲಾಗಿದ್ದು ಕುಡಿಯು ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಶಿಘ್ರವೇ ಕಾಮಾಗಾರಿ ಪೂರ್ಣಗೊಳ್ಳಿಸಿ ಶುದ್ದನೀರು ಪೂರೈಕೆ ಮಾಡುವಂತೆ ಸೂಚಿಸಿದರು. ಕುರ್ಡಿ ಹೋಬಳಿಯ ಸಂಪೂರ್ಣವಾಗಿ ಅಭಿವೃದ್ದಿ ಗೊಳ್ಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಕುರ್ಡಿ ಕ್ರಾಸ್‌ನಲ್ಲಿನ ಸರಕಾರಿ ಶಾಲೆಯಲ್ಲಿ 18ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಶಾಲಾ ಕೋಠಡಿ ಹಾಗೂ 8 ಶೌಚಾಲಯಗಳನ್ನು ಉದ್ಘಾಟಿಸಿ. ಕುರ್ಡಿಯಿಂದ ಗಾರಲದಿನ್ನಿಗೆ ಸಂಪರ್ಕ ಕಲ್ಪಿಸುವ 20ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಮದ ಚರ್ಚ್ ಆವರಣದಲ್ಲಿ ಶಾಸಕರ ಅನುದಾನದಡಿಯಲ್ಲಿ 5ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೈಮಾಸ್ ವಿದ್ಯುತ್ ದೀಪಕ್ಕೆ ಚಾಲನೆ ನೀಡಿದರು.
![]() |
![]() |
![]() |
![]() |
![]() |
[ays_poll id=3]