
ಮಾನ್ವಿ : ಪಟ್ಟಣದ ಕಲ್ಮಠ ಶಿಕ್ಷಣ ಸಂಸ್ಥೆವತಿಯಿಂದ ಝೀಕಾ ವೈರಸ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ನಡೆದ ಜಾಗೃತಿ ಜಾಥಕ್ಕೆ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ ಅವರು ಡೆಂಗ್ಯೂ ಕಾಯಿಲೆಯನ್ನು ಈಡಿಸ್‌ಜಾತಿಯ
ಸೊಳ್ಳೆಗಳು ಮನುಷ್ಯರನ್ನು ಹಗಲಿನಲ್ಲಿ ಕಚ್ಚುವ ಮೂಲಕ ಝೀಕಾ ವೈರಸ್ ಅನ್ನು ಹರಡುತ್ತವೆ ಆದರಿಂದ ಪ್ರತಿಯೋಬ್ಬರು ತಮ್ಮ ಮನೆಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ
ನೋಡಿಕೊಳ್ಳಬೇಕು ಹಾಗೂ ಸೊಳ್ಳೆಗಳನ್ನು
ನಿಯಂತ್ರಿಸುವುದರಿಂದ ಝೀಕಾ ವೈರಸ್ ಹರಡದಂತೆ ತಡೆಯಬಹುದು ಎಂದು ತಿಳಿಸಿದರು.
ಈ ಒಂದು ಜಾಗೃತಿ ಜಾಥದಲ್ಲಿ ಶಾಲೆಯ ವಿದ್ಯಾರ್ಥಿಗಳು, ಮುಖ್ಯಗುರು ಮಂಜುನಾಥ
ಕಮತಾರ, ಸಿಬ್ಬಂದಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಝಿಕಾ ವೈರಸ್ ತಡೆಗಟ್ಟುವ ಬಗ್ಗೆ ಘೊಷಣೆ ಕೂಗುತ್ತಾ ಜಾಗೃತಿ ಮೂಡಿಸಿದರು.
![]() |
![]() |
![]() |
![]() |
![]() |
[ays_poll id=3]