This is the title of the web page
This is the title of the web page

archive#manvi

Local News

ಭಾರತವು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಟವಾದ ದೇಶವಾಗಿ ಬೆಳೆಯುತ್ತಿದೆ

ಮಾನ್ವಿ : ಸೈನಿಕ ತನ್ನ ಪ್ರಾಣವನ್ನು ದೇಶಕ್ಕಾಗಿ ಸಮರ್ಪಣೆಮಾಡುವ ಯೋಧರನ್ನು ಇಂದು ಮೋದಿಯವರು ಕಳೆದುಕೊಳ್ಳದಂತೆ ಭಾರತೀಯ ಸೈನಿಕರಿಗಾಗಿ ಅತ್ಯಂತ ಆಧುನಿಕವಾದ ಶಸ್ತಾçಸ್ತçಗಳನ್ನು ಆತ್ಯಧುನಿಕ ಯುಧ್ದವಿಮಾನಗಳನ್ನು ಒದಾಗಿಸುವ ಮೂಲಕ ದೇಶವನ್ನು ಬಲಿಷ್ಠವಾಗಿಸಿದ್ದಾರೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪಟ್ಟಣದ ಟಿ.ಎ.ಪಿ.ಸಿ.ಎಂ.ಸಿ ಆವರಣದಲ್ಲಿ ಯುವಾ ಬ್ರಿಗೇಡ್ ತಾ.ಘಟಕವತಿಯಿಂದ ನಡೆದ ಪರಮ್ ವೀರ್ ನಮ್ಮನ್ನು ಕಾಯ್ದವನ ಕಥೆ ಕಾರ್ಯಕ್ರಮವನ್ನು, ಯುವಾ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ, ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದು ವರ್ಷದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ, ಸ್ವಾತಂತ್ರ್ಯ ಬಂದಿದ್ದು 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಯುವಾ ಬ್ರಿಗೇಡ್ ವತಿಯಿಂದ ಉಗೆ ಕಲ್ಯಾಣ ಕರ್ನಾಟಕ ಹೆಸರಿನಲ್ಲಿ ನಮ್ಮ ಊರು ನಮ್ಮ ಕನಸು ಎನ್ನುವ ಕಾರ್ಯಕ್ರಮದ ಮೂಲಕ, ಈ ಭಾಗದ ಅಭಿವೃದ್ದಿಗೆ ಪಣತೊಟ್ಟಿದ್ದು...
Local News

ಕಂಬಳತ್ತಿ ಶಾಲೆಯ ನೂತನ ಎಸ್.ಡಿ.ಎಂ.ಸಿ ಸದಸ್ಯರಿಗೆ ಸನ್ಮಾನ

ಮಾನ್ವಿ :  ತಾಲೂಕಿನ ಕಂಬಳತ್ತಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಸುಧಾರಣ ಸಮಿತಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹುಸೇನ್ ಭಾಷಾ, ಉಪಾಧ್ಯಕ್ಷರಾಗಿ ಆಯ್ಕೆಯಾದ ತರಸಾಲಪ್ಪರನ್ನು ರಾಯಚೂರು ಭಾ.ಜ.ಪಾ. ಮೈನಾರಿಟಿ ಮುಖಂಡರಾದ ಜಾವಿದ್ ಖಾನ್ ಸನ್ಮಾನಿಸಿ ಗೌರವಿಸಿ ಮಾತನಾಡಿ ನೂತನ ಪದಾಧಿಕಾರಿಗಳು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಕೊಂಡು ಶಾಲೆಯ ಅಭಿವೃದ್ದಿ ಹಾಗೂ ಶಾಲಾ ಮಕ್ಕಳಿಗೆ ಅಗತ್ಯವಾದ ಕಲಿಕಾ ವಾತವರಣ ಅಗತ್ಯ ಮೂಲಭೂತಸೌಲಭ್ಯಗಳನ್ನು ಒದಗಿಸಲು ಶ್ರಮಿಸುವಂತೆ ಕರೆ ನೀಡಿದರು ಗ್ರಾ.ಪಂ. ಸದಸ್ಯ ಗುರುಸ್ವಾಮಿ, ಮುಖಂಡರಾದ ಇಮಾಮ್ ಸಾಬ್, ವಿಶ್ವನಾಥ ಮತ್ತು ಶಾಲೆಯ ಪ್ರಧಾನಮುಖ್ಯಪಾಧ್ಯಾಯರು ಮತ್ತು ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು....
Local News

ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ: ಪಾಟೀಲ್

ಮಾನ್ವಿ : ಪಟ್ಟಣದ ಬಾಷುಮಿಯಾ ಸಾಹುಕಾರ ಸರಕಾರಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ಘಟಕ ಹಾಗೂ ಆಂತರಿಕಗುಣಮಟ್ಟ ಭರವಸೆ ಕೋಶ ವತಿಯಿಂದ ಲಿಂಗ ಸಮಾನತೆ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ಶರಣಪ್ಪ ಪಾಟೀಲ್ ಮಾತನಾಡಿ ನಮ್ಮ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ತೃತೀಯ ಲಿಂಗಿಗಳಿಗು ಕೂಡ ಯಾವುದೇ ತಾರತಮ್ಯವಿಲ್ಲದೆ ಉತ್ತಮ ಕಲಿಕಾ ವಾತವರಣವನ್ನು, ಗುಣಮಟ್ಟದ ಶಿಕ್ಷಣವನ್ನು ನೀಡುವ ಸೇವಾ ಮನೋಭಾವವುಳ್ಳ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಾಲ ಗೊಳ್ಳುವುದಕ್ಕೆ ಸಾಧ್ಯ ಎನ್ನುವುದಕ್ಕೆ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಅಶ್ವಥಾಮ ಪೂಜಾ ಶಿಕ್ಷಕಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ಜೀವನವನ್ನು ಭವಿಷ್ಯವನ್ನು ಉನ್ನತಗೊಳಿಸಿಕೊಳ್ಳುವುದರೊಂದಿಗೆ ರಾಜ್ಯದ ತೃತೀಯ ಲಿಂಗಿಗಳಿಗೂ ಸ್ಪೂರ್ತಿಯಾಗಿ ಸಮಾಜದಲ್ಲಿ ಲಿಂಗ ಸಮಾನತೆ ಮೂಡಲು ಕಾರಣರಾಗಿದ್ದು ವಿದ್ಯಾರ್ಥಿಗಳು ಇವರ ಜೀವನ ಹಾಗೂ ಸಾಧನೆಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ಜೀವನದಲ್ಲಿ...
Local News

ಡಿ.2ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಮಾನ್ವಿ : ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ರಥೋತ್ಸವ ಡಿ.2ರಂದು ಅದ್ದೂರಿಯಾಗಿ ಜರುಗಲಿದೆ. ಶ್ರೀ ವೀರಭದ್ರೇಶ್ವರ ಜಾತ್ರೆಯ ಬೆಳ್ಳಿಗೆ 5 ಗಂಟೆಗೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರನಿಗೆ ಮಹಾರುದ್ರಭಿಷೇಕ ಪೂಜೆ , ಹಾಗೂ ಸಹಸ್ರ ಬಿಲ್ವಾರ್ಚನೆ ,ರುದ್ರಭಿಷೇಕ ಪೂಜೆ , ಮಹಾಮಂಗಳರತಿ ಜರುಗಲಿವೆ. ಬೆಳ್ಳಿಗೆ 9 ಗಂಟೆಗೆ ಗೋಪುರಕ್ಕೆ ಮತ್ತು ರಥೋತ್ಸವಕ್ಕೆ ಕಳಸರೋಹಣ ಹಾಗೂ ಹೂವಿನ ಅಲಂಕಾರ ಜರುಗಲಿವೆ. ಸಾಯಂಕಾಲ 3 ಗಂಟೆಗೆ ಶ್ರೀ ಭದ್ರಕಾಳಿ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ನಂದಿ ದ್ವಜದೂಡನೆ ಕಳಸ ಸಮೂಹದೂಂದಿಗೆ ಹೊರಡಿಸುವುದರ ಮೂಲಕ ಸಾಯಂಕಾಲ 5 ಗಂಟೆಗೆ ವೀರಭದ್ರರೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ನಂತರ ಸಾಯಂಕಾಲ 7ಗಂಟೆಗೆ ಅಗ್ನಿಕುಂಡ ಪ್ರವೇಶ ಮಹೋತ್ಸವ ಜರುಗಲಿದೆ. ಯಮನೂರು ಗ್ರಾಮದ ಶ್ರೀ ರುದ್ರಮುನಿ‌ಸ್ವಾಮಿ ಹಾಗೂ ಗುರು ಶಾಂತಯ್ಯ ಸ್ವಾಮಿ ಇವರಿಂದ ಪುರವಂತಿಕೆ ಮತ್ತು...
Local News

ಫೇ.13 ಸಾಮೂಹಿಕ ವಿವಾಹಗಳಿಗೆ ನೊಂದಾಯಿಸಿ ಕೊಳ್ಳಿ : ಮಂಜುನಾಥ್ ನಾಯಕ

ಮಾನ್ವಿ : ಕವಿ ಹಾಗೂ ಸಾಹಿತಿ ಸುರೇಶ್ ಗೌಡ ಮುಂದಿನ ಮನಿಯವರ 41 ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ವಿರಕ್ತಮಠದಲ್ಲಿ ಫೆ.14 ರಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್ ನಾಯಕ ಹೇಳಿದರು. ಅಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕವಿ ಗೋಷ್ಠಿ, ಸಾಹಿತಿಗಳಿಗೆ ಸನ್ಮಾನ, ಪುಸ್ತಕ ಬಿಡುಗಡೆ, ತಾಲೂಕಿನ ಆರ್ಥಿಕವಾಗಿ ದುರ್ಬಲರಾಗಿರುವ ಬಡ ಕುಟುಂಬಗಳ ವಧುವರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೊಜಿಸಲಾಗಿದ್ದು. ಆಸಕ್ತರು ಸುರೇಶ್ ಗೌಡ ಮುಂದಿನ ಮನಿ ದೂ. 8050900133, ಸೈಯದ್ ಆರಿಫ್ 8095385018 ಇವರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬೇಕು ಎಂದು ತಿಳಿಸಿದರು....
Local News

ಹಣ ದುರ್ಬಳಕೆ, ಉಟಕನೂರು ಗ್ರಾ.ಪಂ ಪಿಡಿಓ ಅಮಾನತು

ಮಾನ್ವಿ : 15 ನೇ ಹಣಕಾಸು ಯೋಜನೆಯ ಅನುದಾನ ಹಣದುರ್ಬಳಕೆ ಮಾಡಿರುವ ಉಟಕನೂರು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಇವರನ್ನು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹೈದ್ರಾಬಾದ್ -ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಎಂ.ಬಿ.ನಾಯಕ ಮಾನ್ವಿ ತಾಲೂಕಿನ ಉಟ ಕನೂರು ಗ್ರಾಮ ಪಂಚಾಯತಿಯಲ್ಲಿ ಪ್ರಸಕ್ತ ಸಾಲಿನ 15 ಪಂಚವಾರ್ಷಿಕ ಹಣಕಾಸು ಯೋಜನೆಯಲ್ಲಿ ಅಂದಾಜು 40 ಲಕ್ಷ ರೂ.ಹಣ ದುರ್ಬಳಕೆಯಾಗಲು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಕಾರಣೀಕರ್ತನಾಗಿದ್ದಾನೆ. 15 ನೇ ಹಣಕಾಸು ಯೋಜನೆಗೆ ಸಂಬಂಧಪಟ್ಟಂತೆ ಪಿಡಿಓ ರಾಮಪ್ಪ, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷ ರಾಗಿ ಹಾಗೂ ಸದಸ್ಯರು ಯಾವುದೇ ಕ್ರಿಯಾ ಯೋಜನೆ ರೂಪಿಸದೇ ಅಂದಾಜು 40 ಲಕ್ಷ ರೂ.ಹಣ ವಿವಿಧ ಏಜೇನ್ಸಿ ಹಾಗೂ ವೆಂಡರುಗಳ ಹೆಸರಿಗೆ ವರ್ಗಾವಣೆ ಮಾಡಿರುವ ದಾಖಲೆಗಳನ್ನು ಮಾಹಿತಿ ಹಕ್ಕು ಮೂಲಕ ಪಡೆದು ಪರಿಶೀಲಿಸಿದಾಗ ಯಾವುದೇ ಕಾಮಗಾರಿ ಮಾಡದೇ ಹಣ ಕ೦ಡುಬಂದಿದೆ....
1 4 5 6
Page 6 of 6