This is the title of the web page
This is the title of the web page
Local NewsVideo News

ಬಿಸಿಲಲ್ಲಿ ಬೆಂಕಿ ಇಲ್ಲದೇ ಆಮ್ಲೇಟ್ ಮಾಡಿದ ಯುವಕರು..


K2kannadanews.in

Heat wave ಲಿಂಗಸುಗೂರು : ಇನ್ಮೇಲೆ ಆಮ್ಲೆಟ್ ಮಾಡ್ಬಕು ಅಂದ್ರೆ ನಿಮಗೆ ಬೆಂಕಿನೆ ಬೇಕಿಲ್ಲ, ಬಿಸಿಲಲ್ಲೆ ಹಂಚು ಇಟ್ಟು ಮೊಟ್ಟೆ ಹೊಡೆದು ಹಾಕಿದ್ರೆ ಸಾಕು ಬಿಸಿ ಬಿಸಿ ಆಮ್ಲೇಟ್ ತಿನ್ಬಹುದು.

ಹೌದು ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಸ್ವಾಮಿ ವಿವೇಕಾನಂದ ಬಡಾವಣೆಯ ಯುವಕರ ಗುಂಪೊಂದು ಬಿಸಿಲಿನಲ್ಲಿ ಕಬ್ಬಿಣದ ತವಾ ಇಟ್ಟು ಆಮ್ಲೆಟ್ ತಯಾರಿಸಿ ತಿನ್ನುವ ಮೂಲಕ ಬಿಸಿಲಿನ ಪ್ರಖರತೆ ಜನರಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ‌. ಕುತೂಹಲಕ್ಕಾಗಿ ಬಿಸಿಲಿನಲ್ಲಿ ಆಮ್ಲೆಟ್ ಮಾಡುವ ಪ್ರಯೋಗ ಮಾಡಿದೆವು. ಒಂದೂವರೆ ಗಂಟೆಯಲ್ಲಿ ತವಾ ಕಾದಿದ್ದು ಬಳಿಕ ಆಮ್ಲೆಟ್ ಮಾಡಿ ತಿಂದೆವು ಎಂದು ಪ್ರಭುಗಸ್ತಿ ತಿಳಿಸಿದರು.

ಜಿಲ್ಲೆಯಾದ್ಯಂತ ಒಂದು ವಾರದಿಂದ ಪ್ರತಿದಿನ 46 ಡಿಗ್ರಿ ಸೆಲ್ಸಿಯಸ್‍ ಗರಿಷ್ಠ ಉಷ್ಠಾಂಶ ದಾಖಲಾಗುತ್ತಿದೆ. ಈಗಾಗಲೆ ಜಿಲ್ಲಾಡಳಿತ ಸಾರ್ವಜನಿಕರು ಅನಾವಶ್ಯಕ ರಸ್ತೆಗಿಳಿಯದಂತೆ ಸೂಚನೆ ನೀಡಿದೆ. ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ತಂಪು ಪಾನಿಯ ಮೊರೆ ಹೋಗಿದ್ದಾರೆ. ಅಲ್ಲದೆ ರಸ್ತೆಗಿಳಿಯೋದಕ್ಕೂ ಭಯ ಪಡೋ ಪರಿಸ್ಥಿತಿ ನಿರ್ಮಾಣವಾಗಿದೆ.


[ays_poll id=3]