This is the title of the web page
This is the title of the web page
Crime NewsLocal News

ಸಿಂಧನೂರು ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು : ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಪರದಾಟ..


K2kannadanews.in

students food passion ಸಿಂಧನೂರು : ಅಂಬೇಡ್ಕರ್ (Ambedkar) ವಿದ್ಯಾರ್ಥಿನಿಯರ ವಸತಿ (Students hostel) ನಿಲಯದ ಊಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ (Sick) ಗೊಂಡಿದ್ದು, ತಾಲೂಕು ಆಸ್ಪತ್ರೆಗೆ (Hospital) ಚಿಕಿತ್ಸೆಗೆ ರವಾನಿಸಿದಾಗಲೂ ಕೂಡ ಸರಿಯಾದ ಸ್ಪಂದನೆ ಸಿಗದೇ ವಿದ್ಯಾರ್ಥಿನಿಯರು ಪರದಾಡಿದ ಘಟನೆ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದಲ್ಲಿ ಅಂಬೇಡ್ಕರ್ ಬಿಸಿಎಂ (Bcm) ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಘಟನೆ ಜರುಗಿದೆ. ಮಧ್ಯಾಹ್ನ ಊಟ ಸೇವಿಸಿದ ಹಿನ್ನೆಲೆ ಸಂಜೆ ವೇಳೆಗೆ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಹೊಟ್ಟೆ ನೋವಿನಿಂದ ನೆರಳಲು ಆರಂಭಿಸಿದ್ದಾರೆ. ಕೂಡಲೇ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕರೆ ತಂದರು ವೈದ್ಯರಿಲ್ಲದೆ ಸುಮಾರು 2 ಗಂಟೆಗಳ ಕಾಲ ವಿದ್ಯಾರ್ಥಿನಿಯರು ಹೊಟ್ಟೆನೋವಿನಿಂದ ನೆರಳಾಡಿದ್ದಾರೆ.

ಸಹಾಯಕ ನಿರ್ದೇಶಕ ಪೋತೇದಾರ್ ಅವರು ಸ್ಥಳಕ್ಕೆ ಆಗಮಿಸಿದರು ವೈದ್ಯರಲ್ಲದೆ ವಿದ್ಯಾರ್ಥಿನಿಯರು ನರಳಾಡುವುದನ್ನ ನೋಡಿ ಸ್ಥಳಕ್ಕೆ ಟಿಹೆಚ್ಓ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ತದನಂತರ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಲಾಯಿತು. ವಸತಿ ನಿಲಯದಲ್ಲಿ ನೀಡುವ ಊಟದಲ್ಲಿ ಹುಳುಗಳು ಸಿಗುತ್ತವೆ ಮತ್ತು ನೀರಿನ ವ್ಯವಸ್ಥೆ ಸರಿಇಲ್ಲ, ಮೂಲಭೂತ ವ್ಯವಸ್ಥೆಗಳನ್ನು ಕೂಡ ಸರಿಯಾಗಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


[ays_poll id=3]