This is the title of the web page
This is the title of the web page
Education NewsState News

ಎಸ್ ಡಿ ಎಂ ಸಿ 2023-24 ಟಿ.ಎಲ್.ಎಂ ಅನುದಾನ ಹಂಚಿಕೆಯಲ್ಲಿ ಅಕ್ರಮದ ವಾಸನೆ..?


K2kannadanews.in

grant allocation ರಾಯಚೂರು : ಸರಕಾರಿ ಶಾಲೆಗಳಿಗೆ (governament school) ಪ್ರತಿ ವರ್ಷವು ಎಸ್.ಡಿ.ಎಂ.ಸಿ. (SDMC Account) ಖಾತೆಗೆ ಟಿ.ಎಲ್.ಎಂ (TLM) ಅನುದಾನ ಜಮ ಮಾಡಲಾಗುತ್ತದೆ. ಆದ್ರೆ 2023-24 ಸಾಲಿನ ಅನುದಾನ ಜಮೆ ಆಗಿಲ್ಲ, ಮುಂಗಡವಾಗಿ (Advance) ರಶೀದಿ ಪಡೆದಿದ್ದರು ಜಮೆ ಮಾಡುವಲ್ಲಿ ಹಿಂದೇಟು ಹಾಕಲಾಗುತ್ತಿದ್ದು, ಅಕ್ರಮದ (illegal) ವಾಸನೆ ಕಂಡುಬಂದಿದೆ ಎನ್ನಲಾಗುತ್ತಿದೆ.

ರಾಯಚೂರು (Raichur) ಜಿಲ್ಲೆಯ ಎಲ್ಲಾ ತಾಲ್ಲೂಕು ಶಾಲೆಗಳಿಗೆ (school) ಸಾದಿಲ್ವಾರು ಅನುದಾನ ನೀಡಲಾಗಿದೆ. ಆದರೇ ರಾಯಚೂರು ತಾಲ್ಲೂಕು ಶಾಲೆಗಳಿಗೆ ಮಾತ್ರ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಸಾದಿಲ್ವಾರು ಅನುದಾನವನ್ನು ಎಸ್.ಡಿ.ಎಂ.ಸಿ. ಖಾತೆಗೆ ಜಮಾ ಮಾಡಲಾಗಿದೆ. ಆದರೆ ರಾಯಚೂರು ತಾಲ್ಲೂಕಿನಲ್ಲಿನ ಎಲ್ಲಾ ಶಾಲೆಗಳು ಈಗಾಗಲೇ ಸಿ.ಆರ್.ಪಿ.ಗಳು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ 2023-24 ಸಾದಿಲ್ವಾರು ಹಣವನ್ನು ಪಡೆಯಲು ಮುಖ್ಯೋಪಾಧ್ಯಾಯರಿಂದ ಮುಂಗಡ ರಶೀದಿಯನ್ನು ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಲಾಗಿದ್ದರು ಇದುವರೆಗೂ ಅನುದಾನ ಜಮೆಯಾಗಿಲ್ಲ.

ಆದರೆ ಸಂದೀಪ್ ಬುಕ್ ಸ್ಟಾಲ್ ಹೆಸರಿಗೆ ಈಗಾಗಲೆ ಎಲ್ಲಾ ಬಿಲ್ಲುಗಳನ್ನು ನೀಡಲಾಗಿದ್ದು, K2 ಚಾನಲ್ ಮೂಲಕ ಹಣ ಕೂಡ ಮಂಜೂರು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವ ಕಾರಣಕ್ಕೆ ಈ ಒಂದು ಮುಂಗಡ ಸಾದಿಲ್ವಾರು ಅನುದಾನವನ್ನ ಖಾತೆಗೆ ಜಮಾ ಮಾಡುತ್ತಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಮುಂಗಡ ಹಣ ಪಾವತಿ ಮಾಡುವಂತೆ ಈಗಾಗಲೇ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಣ ಪಾವತಿ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು ಯಾವುದೇ ಕ್ರಮ ಆಗಿಲ್ಲ ಎಂಬುದು ಮುಖ್ಯ ಶಿಕ್ಷಕರ ಮನವಿಯಾಗಿದೆ.


[ays_poll id=3]