This is the title of the web page
This is the title of the web page
Politics NewsVideo News

ಸಿಎಂ ಸಮಾವೇಶದಲ್ಲಿ ಅಕ್ಕಿ ಪ್ಯಾಕೇಟ್ ಗಾಗಿ ಜನ ಕಿತ್ತಾಟ : ಚೀಲದಲ್ಲಿ ಅಕ್ಕಿಯೇ ಇರಲಿಲ್ಲ..?


K2kannadanews

Political News ಸಿಂಧನೂರು : ಕೊಪ್ಪಳ ಲೋಕಸಭೆ ಕ್ಷೇತ್ರದ (Koppala lok sabha election) ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಿಎಂ (CM) ಸಿದ್ದರಾಮಯ್ಯ ಅವರು ಪ್ರಚಾರ ಅಂಗವಾಗಿ ಸಿಂಧನೂರಿನಲ್ಲಿ ಪ್ರಜಾ ಧ್ವನಿ (Praja dhwani) ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನು ಸಮಾವೇಶದಲ್ಲಿ ಅಕ್ಕಿ ಪ್ಯಾಕೇಟ್ (Rice packet)ಗಾಗಿ ಕಿತ್ತಾಟ ನಡೆದ ಘಟನೆ ಜರುಗಿದೆ.

ರಾಯಚೂರು (raichur) ಜಿಲ್ಲೆಯ ಸಿಂಧನೂರು (Sindhanur) ಪಟ್ಟಣದ ಸರಕಾರಿ ಪಿಯು ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪ್ರಜಾ ಧ್ವನಿ ಸಮಾವೇಶ ಆರಂಭಕ್ಕೂ ಮುನ್ನ ಜನ ಚೀಲಗಳನ್ನ ಎತ್ತಿಕೊಂಡು ಓಡಿದ ಪ್ರಸಂಗ ನಡೆದಿದೆ. ಆದ್ರೆ ಇಲ್ಲಿ ಕಾಂಗ್ರೆಸ್ (congress) ಕಾರ್ಯಕರ್ತರ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಮಜ್ಜಿಗೆ ಪ್ಯಾಕೆಟ್ (Buttermilk packet) ನೀಡಲು ಅಕ್ಕಿ ಪ್ಯಾಕೇಟ್ ಗಳಲ್ಲಿ ತುಂಬಿಕೊಂಡು ತಂದಿದ್ದರು. ಜನ ಪ್ಯಾಕೆಟ್ ನಲ್ಲಿ ಅಕ್ಕಿ ಇದೆ ಎಂದು ಭಾವಿಸಿ ಚೀಲಗಳಿಗಾಗಿ ಕಿತ್ತಾಡಿ ಚೀಲ ಎತ್ತಿಕೊಂಡು ಹೋಗಿದ್ದಾರೆ.


[ays_poll id=3]