ಝೀಕಾ ವೈರಸ್ ಸೋಂಕಿನ ಕುರಿತು ಜನರಲ್ಲಿ ಜಾಗೃತಿ
![]() |
![]() |
![]() |
![]() |
![]() |
ಮಾನ್ವಿ : ರಾಜ್ಯದಲ್ಲಿಯೇ ಮೊದಲ ಬಾರಿಗೆ ಝೀಕಾ ವೈರಸ್ ಕಂಡು ಬಂದಿರುವುದರಿಂದ ಜನರು ಅನಗತ್ಯವಾಗಿ ಭಯ ಬೀಳದೆ ಆರೋಗ್ಯ ಇಲಾಖೆಯವರು ನೀಡುವ ಜಾಗೃತೆಗಳನ್ನು ಪಾಲಿಸುವುದರಿಂದ ಝೀಕಾ ವೈರಸ್ ಸೋಂಕು ಹರಡದಂತೆ ತಡೆಯಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿ ಮುಂಡಾಸ್ ತಿಳಿಸಿದರು.
ತಾಲೂಕಿನ ನೀರಮಾನವಿ ಗ್ರಾಮದ ಹತ್ತಿರದ ಕೋಳಿ ಕ್ಯಾಂಪ್‌ನ ನಿವಾಸಿ 5ವರ್ಷದ ಬಾಲಕಿಯಲ್ಲಿ ರಾಜ್ಯದಲ್ಲಿಯೇ ಮೊದಲ ಝೀಕಾ ವೈರಸ್ ಸೋಂಕು ದೃಢ ಪಟ್ಟಿರುವುದರಿಂದ ಜಿಲ್ಲಾ ಆರೋಗ್ಯ ಶಿಕ್ಷಣ ವಿಭಾಗ ಸಂಯುಕ್ತ ಆಶ್ರಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು . ಝೀಕಾ ವೈರಸ್ ಸೋಂಕಿನ ಲಕ್ಷಣಗಳಾದ ತೀವ್ರ ಜ್ವರ, ಮೈ, ಕೈ ನೋವು, ಕೀಲು ನೋವು, ಮೈ ಮೇಲೆ ಗುಳ್ಳೆಗಳು ಏಳುವುದು, ಕಣ್ಣು ಕೆಂಪಾಗುವುದು ಕಂಡುಬಂದಲ್ಲಿ ಆರೋಗ್ಯ ಇಲಾಖೆಯ ಆಸ್ಪತ್ರೇಗಳಲ್ಲಿ ತಕ್ಷಣವೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಝೀಕಾ ವೈರಸ್ ಸೋಂಕು ಈಡೀಸ್ ಸೊಳ್ಳೆಗಳ ಕಡಿತದಿಂದ ಹರಡುವುದರಿಂದ. ಗರ್ಭಿಣಿ ಮಹಿಳೆಯರ ಗರ್ಭದಲ್ಲಿನ ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಗರ್ಭಿಣಿ ಮಹಿಳೆಯರು ಹೆಚ್ಚಿನ ಜಾಗೃತಿ ವಹಿಸಬೇಕು.ಈ ಸೋಂಕು ಹರಡದಂತೆ ಮನೆಗಳಲ್ಲಿ ಸೊಳ್ಳೆ ನಿಯಂತ್ರಕಗಳನ್ನು ಬಳಕೆ ಮಾಡಬೇಕು. ಹಾಗೂ ಸೊಳ್ಳೆಗಳ ಲಾರ್ವಗಳು ಬೆಳೆಯಂದಂತೆ ತಡೆಯಬೇಕು ಎಂದು ತಿಳಿಸಿದರು.
ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು. ಜ್ವರ ಕೆಮ್ಮು ನೆಗಡಿ ಇನ್ನಿತರ ಸಾಮಾನ್ಯ ಕಾಯಿಲೆಗಳಿಗೆ ವೈದ್ಯರಿಂದ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಮಾನ್ವಿ ತಾಲೂಕ ಆರೋಗ್ಯ ಇಲಾಖೆ ವತಿಯಿಂದ ಕೋಳಿ ಕ್ಯಾಂಪ್ ಸುತ್ತಮುತ್ತಲಿನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಲವು ತಂಡಗಳನ್ನು ರಚಿಸಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ಪರಿಶೀಲನೆ ನಡೆಸಿ ಜಾಗೃತಿ ಮೂಡಿಸಲಾಯಿತು.
![]() |
![]() |
![]() |
![]() |
![]() |