This is the title of the web page
This is the title of the web page

archive#k2 kannada news

Crime News

ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ..

K2 ಕ್ರೈಂ ನ್ಯೂಸ್ : ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಕಾಲವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣ ಜನಕ ಘಟನೆ ಎಂದು ನಡೆದಿದೆ. ಹೌದು ಕೌಟುಂಬಿಕ ಕಲಹ ಹಿನ್ನಲೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಶರಣಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದ್ದು, ತಾಯಿ ರೇಣುಕಾ ಅಮೀನಪ್ಪ ಕೋನಿನ್ (26 ), ಯಲ್ಲವ್ವ (2) ಅಮೃತಾ (1) ಮೃತಪಟ್ಟಿದ್ದಾರೆ. ಕಾಲುವೆಯಲ್ಲಿ ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಶವ ಪತ್ತೆ ಆಗಿದೆ. ಮತ್ತೋರ್ವ ಹೆಣ್ಣು ಮಗುವಿನ ಶವಕ್ಕಾಗಿ ಸ್ಥಳೀಯರು ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ಘಟನೆಯು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾರಿ ಸಾವನ್ನಪ್ಪಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ....
Crime News

ಹೆತ್ತ ತಂದೆಯನ್ನೇ ಕೊಂದು ನಿರೂಪಯುಕ್ತ ಬೋರ್ವೆಲ್ ಗೆ ಹಾಕಿದ ಮಗ

K2 ಕ್ರೈಂ ನ್ಯೂಸ್ : ಹೆತ್ತ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಕಬ್ಬಿನ ತೋಟದ ಬೋರ್ವೆಲ್ ಗೆ ಹಾಕಿದ ಮಗನ ನೀಚ ಕೃತ್ಯ ಬಯಲು. ಪರಶುರಾಮ(54) ಕೊಲೆಯಾದ ತಂದೆ. ಇನ್ನೂ ಪಾಪಿ ಮಗ ವಿಠ್ಠಲ ಆರೋಪಿಯಾಗಿದ್ದು, ನಿತ್ಯ ಕುಡಿತದಿಂದ ಜಗಳವಾಡುತ್ತಿದ್ದನೆಂಬ ಹಿನ್ನೆಲೆಯಲ್ಲಿ ತಂದೆಯನ್ನೇ ಕೊಡಲಿಯಿಂದ ಹೊಡೆದು ತುಂಡು ತುಂಡಾಗಿ ಕತ್ತಿರಿಸಿ ನಿರೂಪಯುಕ್ತ ಬೋರ್‌ವೆಲ್‌ನಲ್ಲಿ ಕಳೆದ ಡಿಸೆಂಬರ್ 7ರಂದು ಹಾಕಿದ್ದಾನೆ. ಘಟನೆಯು ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಜಂಜರಕೊಪ್ಪ ಗಲ್ಲಿಯಲ್ಲಿ ನಡೆದಿದೆ. ಮುಧೋಳ ಪೋಲಿಸರಿಂದ ತನಿಖೆ ಮುಂದುವರೆದಿದ್ದು, ಕಬ್ಬಿನ ತೋಟದಲ್ಲಿ ನಿರುಪಯುಕ್ತ ಕೊಳವಿ ಬಾವಿಯನ್ನು ಜೆಸಿಬಿಯಿಂದ ಬೋರ್ವೆಲ್ ಕೊರೆಯುವ ಕೆಲಸ ನಡೆದಿದೆ. ಇನ್ನು ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಸಗಿದೆ....
Local News

ಮಾರಕ ರೋಗ ಎಚ್‌ಐವಿ ಜನ ಎಚ್ಚರಿಕೆಯಿಂದ ಇರಬೇಕು

ಸಿಂಧನೂರು : ಎಚ್‌ಐವಿ ಮಾರಕ ರೋಗವಾಗಿದ್ದು ಅದರಿಂದ ಜನ ಎಚ್ಚರಿಕೆಯಿಂದ ಇರಬೇಕು ಸ್ವಲ್ಪ ಯಾಮಾರಿದರೆ ಅಪಾಯ ಗ್ಯಾರಂಟಿ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಬಸಯ್ಯ ಜನರಿಗೆ ತಿಳಿವಳಿಕೆಯನ್ನು ನೀಡಿದರು. ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಏರ್ಪಡಿಸಿದ್ದ. ಎಚ್‌ಐವಿ ಏಡ್ಸ್ ಕಾರ್ಯಕ್ರಮವನ್ನು ಹಲಗಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಏಡ್ಸ್ ಹೇಗೆ ಬರುತ್ತದೆ ಅದನ್ನು ತಡೆಗಟ್ಟುವ ಬಗ್ಗೆ ವಿವರವಾಗಿ ಜನರಿಗೆ ತಿಳಿಸಿದರು. ಪ್ರತಿವರ್ಷ ಡಿಸೆಂಬರ 1ರಂದು ಏಡ್ಸ್ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಏಡ್ಸ್ ತಡೆಗಟ್ಟುವ ಮೂಲಕ ಅಸಮಾನತೆಯನ್ನು ಹೋಗಲಾಡಿ ಸೋಣ ಎಂದು ತಾಲೂಕಾ ಕ್ಷೇತ್ರ ಆರೋಗ್ಯಾಧಿಕಾರಿ ಗೀತಾಹಿರೇಮಠ ಹೇಳಿದರು. ಕಲಾ ತಂಡದವರಿಂದ ಜಾನಪದ ಹಾಡುಗಳನ್ನು ಹಾಡುವ ಮೂಲಕ ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿದರು....
Local News

ಶಾಸಕ ಬಸನಗೌಡ ದದ್ದಲ್ ಗೆ ಟಿಕೆಟ್ ನೀಡದಿರಲು ಒತ್ತಾಯ

ರಾಯಚೂರು : ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸುಪ್ರೀಂ ಕೋರ್ಟ್ ನ್ಯಾಯವಾದಿ ದೇವಣ್ಣ ನಾಯಕ ಒತ್ತಾಯಿಸಿದರು. ಬಸನಗೌಡ ದದ್ದಲ್ ಮೂಲತಃ ಮಾನ್ವಿ ತಾಲೂಕಿನ ದದ್ದಲ್ ಗ್ರಾಮದಲ್ಲಿ ಜನಿಸಿರುತ್ತಾರೆ. ಮಾನ್ವಿಕ್ಷೇತ್ರದ ಕೋಟ್ನೇಕಲ್ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಜಯಗಳಿಸಿ ಪಕ್ಷಕ್ಕೆ ಮೋಸ ಮಾಡಿ ಬಿ.ಜೆ.ಪಿ ಸೇರಿದರು. 2008 ರಲ್ಲಿ ಬಿಜೆಪಿಯಿಂದ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಬಿಜೆಪಿ ಪಕ್ಷಕ್ಕೆ ಮೋಸ ಮಾಡಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಮಾನ್ವಿ ಕ್ಷೇತ್ರಕ್ಕೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. 2004 ರಲ್ಲಿ ಬಿ.ಎಸ್.ಆರ್.ಪಕ್ಷಕ್ಕೆ ಮೋಸ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ 2015-16 ರಲ್ಲಿ ಎಸ್.ಟಿ. ಮೀಸಲು ಕುರ್ಡಿ ಸ್ಪರ್ಧಿಸಿ ಹೀನಾಯವಾಗಿ ಸೋತರು. 2008 ರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಕ್ಷೇತ್ರದ ಮತದಾರ ಪ್ರಭುಗಳು...
Local News

ಡಿ.17 ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ

ರಾಯಚೂರು : ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನವನ್ನು ಡಿಸೆಂಬರ್ 17,18 ರಂದು ಎರಡು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜು, ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹೇಳಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಹಾಸ್ಟೆಲ್ ಕಾರ್ಮಿಕರಿಂದ ಬೃಹತ್ ಮೆರವಣಿಗೆ ನಡೆಯಲಿದೆ. 17ರಂದು ಬೆಳಿಗ್ಗೆ ಬಹಿರಂಗ ಅಧಿವೇಶನ, ಮಹಾರಾಜ ಕಾಲೇಜಿನಲ್ಲಿ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಅದೇ ದಿನ ಸಂಜೆಯಿಂದ ಡಿಸೆಂಬರ್ 18ರ ಸಂಜೆಯವರೆಗೆ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಸುಮಾರು 400 ಜನ ಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ ಎಂದರು. ಕರಡು ಮುಖ್ಯ ಗೊತ್ತುವಳಿ, ಸಂಘಟನಾತ್ಮಕ ಕೊರತೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಸರ್ಕಾರವೇ ವೇತನ ಸಹಿತ ಶಾಸನಬದ್ಧ ಸೌಕರ್ಯಗಳನ್ನು ನೀಡಬೇಕೆಂದು ಅಗ್ರಹಿಸಿ ಮಂಡನೆಯಾಗುವ ಗೊತ್ತುವಳಿಗಳ ಮೇಲೆ ಚರ್ಚೆಗಳು ನಡೆಯಲಿವೆ. ನಂತರ...
Local News

ಇ ಪ್ರೊಕ್ಮೆಂಟ್ ಟೆಂಡರ್ ನಿಯಮ ಗಾಳಿಗೆ ತೂರಿ ಆದೇಶ

ರಾಯಚೂರು : ನಗರಸಭೆ ಕಾರ್ಯಾಲಯದಿಂದ 2021-22ನೇ ಸಾಲಿನ 20 ಜನ ಡ್ರೈವರ್ ಮತ್ತು ಆಪರೇಟರ್‌ಗಳನ್ನು ಇ ಪ್ರೊಕ್ಮೆಂಟ್ ಮೂಲಕ ಟೆಂಡರ್ ಕರೆಯಲಾಗಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯ ಆದೇಶ ನೀಡಿದ್ದಾರೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ನರಸಪ್ಪ ಆರೋಪಿಸಿದರು. ರಾಯಚೂರು ನಗರಸಭೆ ಕಾರ್ಯಾಲಯದಿಂದ ಇ ಪ್ರೊಕ್ಮೆಂಟ್ ಮೂಲಕ ಟೆಂಡರ್ ಕರೆಯಲಾಗಿತ್ತು.  ಐ1- ಯ-ಗಂಡ್ಲ ಈಶ್ವರಯ್ಯ ಅನಿತಾ ಎಂಟಪ್ರೈಸಸ್ ಬಳ್ಳಾರಿ, ಐ2 - ನರಸಪ್ಪ. ಐ3- ಲಾಲ್ ಅಹ್ಮದ್, ಐ4- ಕೆ ನಾಗರಾಜು ಗಜಾನನ ಎಂಟಪ್ರೈಸಸ್, ಐ5- ರುದ್ರೇಶ್ ಐ6- ಎಸ್.ಕೆ.ನಾಗರೆಡ್ಡಿ ಐ7- ಶರಣಬಸವ ಮಲ್ಲಿಕಾರ್ಜುನ್ ಪವರ ಸರ್ವಿಸ್ ಈ ಟೆಂಡರ್ ನಲ್ಲಿ 7 ಜನ ಗುತ್ತಿಗೆದಾರರು ಭಾಗವಹಿಸಿದ್ದರು. ಈ ಟೆಂಡರ್ ನಿಯಮದಲ್ಲಿ ಗುತ್ತಿಗೆದಾರರು ತಮ್ಮ ಸೇವಾ ಶುಲ್ಕವನ್ನು ಮಾತ್ರ ನಮೋದಿಸಬೇಕೆಂದು ತೋರಿಸಿದ್ದಾರೆ. ಅದೇ ಪ್ರಕಾರ ಸೇವಾ ಶುಲ್ಕವನ್ನು ಮಾತ್ರ ತೋರಿಸಿದ್ದಾರೆ. ಪ್ರೊಕ್ಮೆಂಟ್ ಟೆಂಡರ್ ನಲ್ಲಿ ಈ...
Local News

ದುಡಿಯುವ ಕೈಗಳಿಗೆ ಅಧಿಕಾರಿಗಳು ಸದಾ ಆಸರೆಯಾಗಿರಬೇಕು : ದದ್ದಲ್

ರಾಯಚೂರು : ಅಸಂಘಟಿತ ಕಾರ್ಮಿಕ, ಕಾರ್ಮಿಕರ ವರ್ಗಕ್ಕೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಅವರಿಗೆ ಒದಗಿಸುವ ನಿಟ್ಟಿನಲ್ಲಿ ಅವರ ಹಿತಾಸಕ್ತಿಗಳನ್ನು ಕೇಂದ್ರ ಮತ್ತು ರಾಜ್ಯ ಕಾಯ್ದೆ ಮಾಡುತ್ತವೆ ಅವುಗಳನ್ನು ಅಧಿಕಾರಿಗಳು ಕಾರ್ಮಿಕರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ದುಡಿಯುವ ಕೈಗಳಿಗೆ ಸದಾ ಆಸರೆಯಾಗಿ ಅವರು ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಉದ್ಯಮಿದಾರರು, ಗುತ್ತಿಗೆದಾರರು ಮತ್ತು ಕಂಪನಿಯ ಮಾಲಿಕರು ನೋಡಿಕೊಳ್ಳಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ಕಂಪನಿಗಳ ದುಡಿಯುವ ಕಾರ್ಮಿಕರು ಸಹಾ ತಮ್ಮ ಸಂಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಾರೆ, ಆ ನಿಟ್ಟಿನಲ್ಲಿ ಕಾರ್ಮಿಕರು ಸಹಾ ಕೆಲಸ ಮಾಡಬೇಕು ಅಂದಾಗ ಮಾತ್ರ ಸಂಸ್ಥೆ ಉತ್ತಮ ರೀತಿಯಲ್ಲಿ ಸಾಗುತ್ತದೆ, ಕಾರ್ಮಿಕ ವರ್ಗ, ಅಧಿಕಾರಿಗಳ ವರ್ಗ ಮತ್ತು ಉದ್ಯಮಿ ದಾರು, ಗುತ್ತಿಗೆದಾರರು ಒಂದೇ ಕುಟುಂಬವಿದ್ದಂತೆ ಎಂದು ಅಭಿಪ್ರಾಯಪಟ್ಟರು. ನಮ್ಮ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಲ್ಲಿ 80% ಸ್ಥಳಿಯರನ್ನೆ ನೇಮಕ ಮಾಡಿಕೊಳ್ಳಬೇಕು, ಜೊತೆಗೆ...
Feature Article

ಮಾಂಡೌಸ್ ಚಂಡಮಾರುತದ ಜೊತೆ ಅವಲಕ್ಕಿ ಪಾಯಸ ಸವೆಯಿರಿ

K2 ಫುಡ್ ವರ್ಲ್ಡ್: ಮಾಂಡೌಸ್ ಚಂಡಮಾರುತ ನಿಂದ ಹೊರ ಬರುತ್ತಿಲ್ಲ. ಈ ಸಮಯದಲ್ಲಿ ಚಳಿ ನೀಗಿಸಲು ಬಿಸಿ ಬಿಸಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ದಪ್ಪ ಅವಲಕ್ಕಿ - 200 ಗ್ರಾಂ ಬೆಲ್ಲ - 1/4 ಕೆಜಿ ಹಾಲು - 1/2 ಲೀಟರ್ ಏಲಕ್ಕಿ - 4 ದ್ರಾಕ್ಷಿ - ಗೋಡಂಬಿ - 4 ರಿಂದ 5 ಕಾಯಿತುರಿ ಹಾಲು - 1/2 ಲೋಟ ಮಾಡುವ ವಿಧಾನ : ಅವಲಕ್ಕಿಯನ್ನು ಸ್ವಲ್ಪ ತುಪ್ಪ ಹಾಕಿ ಕಂದುಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾದ ನಂತರ ಅದಕ್ಕೆ ಬೆಲ್ಲವನ್ನು ಹಾಕಿ. ಹಾಲು ಕುದಿಯಲು ಪ್ರಾರಂಭಿಸಿದಾಗ ಮೊದಲೆ ಹುರಿದಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ತಳಹಿಡಿಯದಂತೆ ಕಲೆಸುತ್ತಾ...
Health & Fitness

ಮನೆ ಮದ್ದು ಬಳಸಿ, ಸೌಂದರ್ಯ ಆರೋಗ್ಯ ಎರಡೂ ಕಾಪಾಡಿಕೊಳ್ಳಿ

K2‌ ಹೆಲ್ತ್ ಟಿಪ್ : ಪ್ರಸ್ತುತ ದಿನಗಳಲ್ಲಿ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದೇವೆ. ನಾವು ಉತ್ತಮ ಆಹಾರ , ಕೆಲವು ಮನೆ ಮದ್ದು ಬಳಸುವುದರಿಂದ, ನಮ್ಮ ಸೌಂದರ್ಯ ಆರೋಗ್ಯ ಎರಡೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು. ಹೆಸರುಕಾಳನ್ನು ಪುಡಿ ಮಾಡಿ, ಒಂದು ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ಮುಖ ತೊಳೆಯುವಾಗ, ಸೋಪಿನ ಬದಲು ಈ ಪುಡಿಯನ್ನು ಬಳಸಿ. ಇದರಿಂದ ಮುಖ ಸಾಫ್ಟ್ ಆಗಿರುತ್ತದೆ. ಗುಳ್ಳೆ, ಮೊಡವೆ ಕಲೆಗಳಿದ್ದರೆ, ಅದು ಕೂಡ ಮಾಯವಾಗುತ್ತದೆ. ಒಂದು ವಾರಕ್ಕಾಗುವಷ್ಟು ಹೆಸರುಕಾಳನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು. ರಾತ್ರಿ ಹೆಸರು ಕಾಳು ನೆನೆಹಾಕಿ, ಮರುದಿನ ಅದನ್ನ ಸ್ಮೂತ್ ಆಗಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಕೊಂಚ ಜೇನುತುಪ್ಪ ಬೆರೆಸಿ, ಫೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ವಾರದಲ್ಲಿ ಒಮ್ಮೆ...
State News

ರೈತರನ್ನು ಆತಂಕಕ್ಕೆ ಈಡು ಮಾಡಿರುವ ಅಕಾಲಿಕ ಮಳೆ

K2 ನ್ಯೂಸ್ ಡೆಸ್ಕ್ : ಅಕಾಲಿಕ ಮಳೆ ಜನರನ್ನ ತತ್ತರಿಸುವಂತೆ ಮಾಡಿದೆ. ರೈತ ಬೆಳೆದ ಬೆಳೆಗೂ ನಷ್ಟ ಅನುಭವಿಸುವಂತಾಗಿದೆ. ದಿನಪೂರ್ತಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೋಟೊ ಬೆಳೆ ನಾಶವಾಗುತ್ತಿದೆ. ಹೌದು ರಾಜ್ಯಾದ್ಯಂತ ಟೊಮೋಟೋಗೆ ಮಳೆಯಿಂದ ಸಮಸ್ಯೆ ಆಗ್ತಾ ಇದೆ. ಈ ಭಾಗದಲ್ಲಿ ಶೀತಗಾಳಿ ಹಾಗೂ ಮಳೆಯಿಂದಾಗಿ ಸಮಸ್ಯೆ ಆಗುತ್ತಿದೆ. ಕಟಾವಿಗೆ ಬಂದಿದ್ದ ಭತ್ತ,ರಾಗಿ, ಮಳೆಯಿಂದಾಗಿ ಕಟಾವಾಗುತ್ತಿಲ್ಲ. ಇನ್ನು ತೊಗರಿ ವಿವಿಧ ಬೆಳೆಗಳಿಗೂ ಮಳೆಯ ಎಫೆಕ್ಟ್ ಆಗಿದೆ. ಜಡಿ ಮಳೆಯಿಂದಾಗಿ ಟೊಮೆಟೊ ಬೆಳೆಗೆ ತೇವಾಂಶ ಹೆಚ್ಚಾಗಿದೆ. ಹೀಗಾಗಿ ಬೆಳೆಗೆ ಹೂಜಿ ಮತ್ತು ಕೀಟಬಾಧೆ ಅಂಟಿಕೊಂಡಿವೆ. ಗಿಡದಲ್ಲಿರುವ ಟೊಮೆಟೊ ಹಣ್ಣು ಕೀಳಲು ಆಗದೆ ತೋಟದಲ್ಲಿ ಬಿಟ್ಟಿದ್ದಾರೆ ರೈತರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬಂಡವಾಳವೂ ಕೂಡ ಕೈಗೆ ಸಿಗದಂತೆ ಆಗಿದೆ. ಹೀಗಾಗಿ ಸರ್ಕಾರ ತಮ್ಮ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ....
1 149 150 151 152 153 161
Page 151 of 161