This is the title of the web page
This is the title of the web page

archive#k2 kannada news

Local News

ಲಿಂಗತ್ವ ಅಲ್ಪಸಂಖ್ಯಾತರರಿಗೆ ವೈಯಕ್ತಿಕ ಜಾಬ್ ಕಾರ್ಡ್

ರಾಯಚೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರರಿಗೆ ವೈಯಕ್ತಿಕ ಜಾಬ್ ಕಾರ್ಡ್ ನೀಡುವ ಕುರಿತು ನಗರದ ಜಿಲ್ಲಾ ಪಂಚಾಯತ ಜಲಶಕ್ತಿ ಕೇಂದ್ರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮುಖಂಡರ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಐಇಸಿ ಸಂಯೋಜಕರು ವಿಶ್ವನಾಥ ಅವರು ಮಾತನಾಡಿ, ಮಂಗಳ ಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿಶೇಷ ಜಾಬ್ ಕಾರ್ಡ್ ವಿತರಿಸಲಾಗುತ್ತದೆ. ಮಂಗಳಮುಖಿಯರು ತಮ್ಮದೇ ಆದ ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು,ಸಾಮಾನ್ಯ ರೊಂದಿಗೆ ದುಡಿವ ಪರಿಪಾಠ ಕಡಿಮೆ, ಅವರಲ್ಲೂ ದುಡಿಯುವ ಇಚ್ಚಾಶಕ್ತಿ ಇರುತ್ತದೆ .ಅದನ್ನು ಗುರುತಿಸಿ ಅವರನ್ನೂ ಆರ್ಥಿಕವಾಗಿ ಸಬಲಗೊಳಿಸಲು ನರೇಗಾದಡಿ ಅವಕಾಶ ಇದೆ. ತೃತೀಯ ಲಿಂಗಗಳನ್ನು ಗುರುತಿಸಿ ಅವರಿಗೆ ವಿಶೇಷ ಜಾಬ್ ಕಾರ್ಡ್ ನೀಡುವಂತೆ ಮತ್ತು ನರೇಗಾ ಕೆಲಸಗಳಲ್ಲಿ ಅವರನ್ನೂ ಸಕ್ರಿಯಗೊಳಿಸಿಕೊಳ್ಳಲಾಗುತ್ತದೆ. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇರುವ ಮಂಗಳಮುಖಿಯರು ನರೇಗಾ ಯೋಜನೆಯಡಿ ಜಾಬ್ ಕಾರ್ಡ್...
Local News

ಉದ್ಯೋಗ ಮಿತ್ರ ಯೋಜನೆ : ಜಿಲ್ಲಾಧಿಕಾರಿಗಳ ಕ್ರಮ ಕಾನೂನುಬಾಹಿರವಾಗಿದೆ

ರಾಯಚೂರು : ಕರ್ನಾಟಕ ಉದ್ಯೋಗ ಮಿತ್ರ ಇಲಾಖೆಯಿಂದ ಕಾಲು ಎಕರೆ,ಅರ್ಧ ಎಕರೆ ಒಂದು ಎಕರೆ ಇಂಡಸ್ಟ್ರೀಯಲ್ ಜಮೀನನ್ನು ಅನುಮೋದನೆಗೊಳಿಸುತ್ತಿರುವ ಜಿಲ್ಲಾಧಿಕಾರಿಗಳ ಕ್ರಮ ಕಾನೂನುಬಾಹಿರವಾಗಿದ್ದು ಇದರಲ್ಲಿ ಅವ್ಯವಹಾರ ನಡೆದಿರುವಂತೆ ಕಾಣುತ್ತಿದ್ದು ಕೂಡಲೇ ಸಂಬಂಧಪಟ್ಟ ಸಚಿವರು ಕ್ರಮ ಜರುಗಿಸಬೇಕೆಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಷಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀ ರೆಡ್ಡಿ ಒತ್ತಾಯಿಸಿದರು. ಈ ವಿಚಾರವಾಗಿ ವಾಣಿಜ್ಯೋದ್ಯಮ ಸಂಘ ಧ್ವನಿ ಎತ್ತಬೇಕಾಗಿತ್ತು ಆದರೆ ಆ ಸಂಘ ಎಲ್ಲಿದೆಯೋ ಆ ಸಂಘದ ಸದಸ್ಯರಿಗೆ ಯಾವಾಗ ಬುದ್ದಿ ಕೊಡುತ್ತಾನೋ ಎಂದು ಟೀಕಿಸಿದ ಅವರು, ಇತ್ತೀಚಿಗೆ ನಮ್ಮ ಸಂಘದ ವತಿಯಿಂದ ಕೆಐಡಿಬಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಏಕಗವಾಕ್ಷಿ ಸಭೆಯಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಇಲಾಖೆಯಿಂದ ಹಂಚಿಕೆ ಮಾಡಿರುವ 1/4 ಎಕರೆ, 1/2 ಎಕರೆ ಹಾಗೂ 1 ಎಕರೆ ಇಂಡಸ್ಟ್ರೀಯಲ್ ಜಮೀನುಗಳಿಗೆ ನೀಡಿರುವ ಅನುಮೋದನೆ ರದ್ದುಪಡಿಸಿ ಎಸ್.ಸಿ/ಎಸ್.ಟಿ ಜನಾಂಗಕ್ಕೆ ಸಣ್ಣ ಉದ್ದಿಮೆದಾರರಿಗೆ ಹಂಚಿಕೆ ಮಾಡಬೇಕೆಂದು ಕೋರಿದ್ದೇವೆ ಎಂದು ಹೇಳಿದರು. ಸರ್ವೇ...
Local News

ನನ್ನ ಅಧಿಕಾರ ಅವಧಿಯಲ್ಲಿ ಪಕ್ಷಬೇಧ ಮರೆತು ಅಭಿವೃದ್ಧಿ ಮಾಡಿದ್ದೇನೆ

ಸಿಂಧನೂರು : ವಯಸ್ಸಾದ ವೃದ್ಧರು ಅಂಗವಿಕಲರು ವಿಧವೆಯರನ್ನು ಕಛೇರಿಗೆ ಅಲೆದಾಡಿಸದೆ ಅವರು ಇರುವ ಮನೆಗಳಿಗೆ ಹೋಗಿ ಅವರಿಂದ ದಾಖಲಾತಿಗಳನ್ನು ಪಡೆದುಕೊಂಡು ಸತಾಯಿಸದೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ತಡ ಮಾಡಿದರೆ ಅನಿವಾರ್ಯವಾಗಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು. ನಾಡಗೌಡರ ನಡೆ ಸಾಧನೆಯ ಕಡೆ ಗ್ರಾಮ ವ್ಯಾಸ್ತವ್ಯ ಜನರ ಸಂಪರ್ಕ ಸಭೆಯ 23 ನೇ ದಿನದ ಗ್ರಾಮ ಪಂಚಾಯಿತಿ ತಾಲ್ಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ನಾನು ಮಾಡುವ ಎಲ್ಲಾ ಸಭೆಗಳಲ್ಲಿ ಅಧಿಕಾರಿಗಳು ಕೆಲಸ ಮಾಡದೆ ಕಾಲಹರಣ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ನನಗೆ ದೂರು ನೀಡುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ದೂರುಗಳು ಬಾರದ ಹಾಗೆ ಅದಿಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಬೋಮ್ಮನಾಳ ದೇವಿಕ್ಯಾಂಪ್, ಚಿರತನಾಳ ಗೀತಾ ಕ್ಯಾಂಪ್...
Local News

ಕರ್ನಾಟಕ ರಾಜ್ಯೋತ್ಸವ ಸಂಗೀತ ಕಾರ್ಯಕ್ರಮ

ರಾಯಚೂರು : ಎಟಿಎಂ ಸರ್ಕಲ್ ಹತ್ತಿರ ನಿಜಲಿಂಗಪ್ಪ ಕಾಲೋನಿ , ರಾಯಚೂರು ನಲ್ಲಿ ,ಮೋನಿಕಾ ನೃತ್ಯ ಕಲಾ ಸಂಸ್ಥೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ,ಇವರ ಸಂಯುಕ್ತ ಆಶ್ರಯದಲ್ಲಿ ,ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು, ಬಸವರಾಜ್ ಎಂ. ದೊರೆ ಅಧ್ಯಕ್ಷರು ಮಂದಾರ ಪತ್ತಿನ ಸಹಕಾರ ಬ್ಯಾಂಕ್ ನಿಜಲಿಂಗಪ್ಪ ಕಾಲೋನಿ ಇವರು ಉದ್ಘಾಟಿಸಿದರು ಇವರು ಮಾತನಾಡಿ ಮೋನಿಕ ನೃತ್ಯ ಕಲಾ ಸಂಸ್ಥೆ ಯವರು ಅನೇಕ ವೈವಿಧ್ಯಮಯ ನೃತ್ಯವನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಅದರ ಜೊತೆಗೆ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ .ಶಾಲಾ ಕಲಿಕೆಯ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ರಂಗಕಲೆಯನ್ನು ಸಹ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳಿಗೆ ಉಲ್ಲಾಸ ಉತ್ತೇಜನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು....
Local News

ಶಿವರಾಜ್ ಕುಮಾರ್ ಜೊತೆ ರಾಯರ ದರ್ಶನ ಪಡೆದ ವೇದ ಸಿನೆಮಾ ತಂಡ

ರಾಯಚೂರು : ಶಿವರಾಜ್ ಕುಮಾರ್ ಜೊತೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ವೇದ ಸಿನೆಮಾ ತಂಡ. https://youtu.be/kb-hdb73Gbo ರಾಯಚೂರು ನಗರದಲ್ಲಿ ಇಂದು ವೇದ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದ ಅಂಗವಾಗಿ ರಾಯಚೂರಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ವೇದ ಸಿನಿಮಾದ ತಂಡದ ಜೊತೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದರು. ಶಿವರಾಜ್ ಕುಮಾರ್ ಜೊತೆ ಗೀತಾ ಶಿವರಾಜ್, ಅರ್ಜುನ ಜನ್ಯ, ಅನುಶ್ರೀ, ಹರ್ಷ ಅವರು ಮಂಚಾಲಮ್ಮ ದೇವಿ ದರ್ಶನ ಪಡೆದ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಯರ ದರ್ಶನದ ಬಳಿಕ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಚಿತ್ರತಂಡ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ರಾಜ್ ಕುಟುಂಬ ಹಾಗೂ ರಾಯರ ಮಠದ ಅವಿನಭಾವ ಸಂಬಂಧದ ಬಗ್ಗೆ ಶಿವರಾಜ್ ಕುಮಾರ್ ಅವರಿಗೆ ತಿಳಿಸಿಕೊಟ್ಟರು. ವಿಲನ್...
Local News

ಲೇಡಿ ಪಿಎಸ್ಐ ವರ್ಸಸ್ ರೈತ : ಸಾರ್ವಜನಿಕರ ಅಸಮಾಧಾನ

ರಾಯಚೂರು : ರೈತ ಟ್ರ್ಯಾಕ್ಟರ್ ನಲ್ಲಿ ಹುಲ್ಲು ತುಂಬಿಕೊಂಡು ಸಾಗುತ್ತಿದ್ದಂತ ವೇಳೆಯಲ್ಲಿ, ಪೊಲೀಸ್ ಜೀಪ್ ಗೆ ಟಚ್ ಆಗಿದೆ. ಇಷ್ಟಕ್ಕೆ ಕಿರಿಕ್ ತೆಗೆದಂತ ಮಹಿಳಾ ಪಿಎಸ್‌ಐ, ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡು, ಪೊಲೀಸ್ ಠಾಣೆಗೆ ಕರೆದೊಯ್ದು ದರ್ಪ ಮೆರೆದಿರೋ ಆರೋಪ ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಹುಲ್ಲಿನ ಮೇವು ಲೋಡ್ ಮಾಡಿಕೊಂಡು ರೈತ ಲಿಂಗಯ್ಯ ಎಂಬುವರು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು. ಹೀಗೆ ತೆರಳುತ್ತಿದ್ದಂತ ಟ್ರ್ಯಾಕ್ಟರ್ ಪೊಲೀಸ್ ಜೀಪ್ ಗೆ ಡಿಕ್ಕಿಯಾಗಿದೆ. ಇಷ್ಟಕ್ಕೆ ಸಿರಿವಾರ ಠಾಣೆ ಮಹಿಳಾ ಪಿಎಸ್‌ಐ ಗೀತಾಂಜಲಿ ಎಂಬುವರು ರೈತನ ಮೇಲೆ ದರ್ಪ ಮೆರೆದಿರೋದಾಗಿ ಹೇಳಲಾಗುತ್ತಿದ್ದೆ. ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡಂತ ಸಿರವಾರ ಠಾಣೆಯ ಪಿಎಸ್‌ಐ ಗೀತಾಂಜಲಿಯನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಪಿಎಸ್‌ಐ ನಡುವೆ ಮಾತಿನ ಚಕಮಕಿ ಕೂಡ ಉಂಟಾಗಿದೆ. ಇದರಿಂದ ಕೋಪಗೊಂಡಂತ ಅವರು...
State News

ಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರಕಾರ ಬದ್ಧ: ಮುಖ್ಯಮಂತ್ರಿ

K2 ನ್ಯೂಸ್ ಡೆಸ್ಕ್ : ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನವಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು. ಸುಮಾರು 2739 ಕೋಟಿ ರೂ.ಗಳ ಅನುದಾನವನ್ನುಂಕಳೆದ ಮೂರೂವರೆ ವರ್ಷಗಳಲ್ಲಿ ತಂದು ವಿವಿಧ ಇಲಾಖೆಗಳ ಅಭಿವೃದ್ಧಿ ಮಾಡಿ, ನೀರಾವರಿ, ಮೂಲಭೂತ ಸೌಕರ್ಯ, ವಿದ್ಯುತ್, ಶಿಕ್ಷಣ, ಆಸ್ಪತ್ರೆ, ಬ್ಯಾರೇಜ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆಗಳನ್ನು ಈ ಕ್ಷೇತ್ರ ಕ್ಕೆ ತಂದು ಜಲಜೀವನ್ ಮಿಷನ್ ಅಡಿ ಪ್ರರಿ ಮನೆಗೆ ಗಂಗೆಯನ್ನು ಹೊರಿಸಲಾಗಿದೆ. ಸರಕಾರ ಜನಪ್ರಿಯವಾದರೆ ಸಾಲದು, ಜನಪರ ಸರಕಾರ ಇದ್ದಾಗ ಮಾತ್ರ ಕಟ್ಟ ಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ ಎಂದರು. ಗಡಿಭಾಗದ ಜಿಲ್ಲೆಗಳ1800 ಗ್ರಾಮ...
State News

ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ : ಸಿಎಂ

K2 ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ಆರೋಗ್ಯ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಹೇಳಿದರು ಕಾಯಕ, ಸ್ತ್ರೀ ಸಾಮರ್ಥ್ಯ , ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಎಲ್ಲ ವರ್ಗದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸರಕಾರ ನೆರವು ನೀಡುತ್ತಿದೆ. ವಿವೇಕ ಯೋಜನೆಯಡಿ 8000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ನಮ್ಮ ಕ್ಲಿನಿಕ್, ಶಾಲಾ ಕೊಠಡಿಗಳ ನಿರ್ಮಾಣ, ಆರೋಗ್ಯ ಸೌಲಭ್ಯ ಹೆಚ್ಚಳ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ಪ್ರಜಾಪ್ರಭುತ್ವ ಎಂದರೆ ಮತ ಹಾಕುವುದು ಮಾತ್ರವಲ್ಲ; ದೇಶ ಕಟ್ಟುವುದರಲ್ಲಿ ಸರ್ವರ ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಲಾಗಿದೆ. ಗೋವುಗಳ ರಕ್ಷಣೆ ನಮ್ಮ...
Local News

ಸರ್ಕಾರದಿಂದ ಕಲಾವಿದರಿಗೆ ಆರ್ಥಿಕ ನೆರವಿನ ಅಗತ್ಯವಿದೆ

ದೇವದುರ್ಗ : ಕಲಾವಿದರಿಗೆ ಆರ್ಥಿಕ ನೆರವಿನ ಅಗತ್ಯವಿದೆ,ಈ ನಿಟ್ಟಿನಲ್ಲಿ ಸರ್ಕಾರ ಬಡ ಕಲಾವಿದರಿಗೆ ಆರ್ಥಿಕ ನೆರವು ಒದಗಿಸಬೇಕು ಹಾಗೂ ಜನಪರ ಕಾಳಜಿಯುಳ್ಳವರು, ಜನಪ್ರತಿನಿದಿಗಳು ಕಲಾವಿದರಿಗೆ ಸಹಾಯ ಮಾಡಬೇಕೆಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಶ್ರೀ ಷ. ಬ್ರ. ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠ ಸುಲ್ತಾನಪುರ ಸ್ವಾಮಿಗಳು ಹೇಳಿದರು. ಕಲಾವಿದರ ಸಹಾಯಾರ್ಥವಾಗಿ ದಿಗ್ಗಜರು ಎಂಬ ಅದ್ದೂರಿ ಸಾಂಸ್ಕೃತಿಕ,ಮನರಂಜನಾ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮಿ ಪ್ಯಾಲೀಸ್ ದೇವದುರ್ಗದಲ್ಲಿ ಜಿ. ಮುರುಗೇಂದ್ರ ಮಸರಕಲ್ ಹಾಗೂ ಚಲನಚಿತ್ರ ನಿರ್ಮಾಪಕ ಸಿದ್ದೇಶ ವೀರಕ್ತಮಠ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ,ಶ್ರೀ,ಷ. ಬ್ರ. ಅಭಿನವ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶಿಖರಮಠ ದೇವದುರ್ಗ ವಹಿಸಿಕೊಂಡಿದರು, ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಹಾಗೂ ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು....
Local News

ಆರೋಗ್ಯವೇ ಮನುಷ್ಯನ ಸಂಪತ್ತು : ಜನರಿಗೆ ತಿಳುವಳಿಕೆ ಮೂಡಿಸಬೇಕಿದೆ

ದೇವದುರ್ಗ : ಆರೋಗ್ಯವೇ ಮನುಷ್ಯನ ಸಂಪತ್ತು ಆಗಬೇಕು ಎನ್ನುವ ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ಮೂಡಿಸಬೇಕಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಉತ್ತಮ ಆರೋಗ್ಯದ ಜತೆ ಜಾಗೃತ ಸಮಾಜ ನಿರ್ಮಾಣ ಮಾಡುವುದು ತುರ್ತು ಅಗತ್ಯವಿದೆ ಎಂದು ಸಿವಿಲ್ ನ್ಯಾಯಾಧೀಶ ಬಿ.ಕೆ.ನಾಗೇಶಮೂರ್ತಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯ ಹಾಗೂ ಅಜಾಗರುಕತೆಯಿಂದ ಇಂದು ನಾನಾ ರೋಗಗಳು ಹರಡುತ್ತಿವೆ. ಏಡ್ಸ್ ನಿರ್ಮೂಲನೆಗೆ ಪಣ ತೊಟ್ಟಿರುವ ಆರೋಗ್ಯ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ. ಆರೋಗ್ಯ ಬಗ್ಗೆ ಮಹಿಳೆಯರು, ಮಕ್ಕಳು ಹಾಗೂ ಯುವಕರಿಗೆ ಅರಿವು ಮೂಡಿಸಬೇಕು ಎಂದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಮಾತನಾಡಿ, ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದ ರಕ್ತ ಪಡೆಯುವುದು, ಅಜಾಗುರಕತೆ...
1 159 160 161 162 163 164
Page 161 of 164