This is the title of the web page
This is the title of the web page
Crime NewsLocal News

ಮಸ್ಕಿಯಲ್ಲಿ ಒಂದೇ ರಾತ್ರಿ ಎರಡು ಮನೆ ಕಳ್ಳತನ : ಆತಂಕ ಹುಟ್ಟಿಸಿದ ಘಟನೆ..


K2kannadanews.in

Theft in Maski ರಾಯಚೂರು : ಕುಟುಂಬಸ್ಥರು ಬಿಸಿಲಿನ ಧಗೆಗೆ (Sunburn) ಬೇಸತ್ತು ಮನೆಯ ಮೇಲೆ ಮಲಗಿದ್ದ (sleep) ವೇಳೆ ಖಧೀಮರು ಎರಡು ಮನೆಗಳ (House) ಬಾಗಿಲು ಹೊಡೆದು ಕಳ್ಳತನ ಮಾಡಿದ ಘಟನೆ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ಪಟ್ಟಣದ‌ ಬಳಗಾನೂರು ರಸ್ತೆಯಲ್ಲಿನ (road) ಪಾರ್ವತಿ ನಗರದ ಮನೆಗಳಲ್ಲಿ ಕಳ್ಳತನ ಏ.23ರ ರಂದು ಬೆಳಗಿನ ಜಾವ (Early morning) ನಡೆದಿದೆ. ಬಿಸಿಲಿನ ಧಗೆಯಿಂದ ಕುಟುಂಬದವರು (Family member’s) ಮನೆಯ ಮೇಲೆ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ಮಲ್ಲಯ್ಯ ನಾಗಡದಿನ್ನಿ (Mallayya) ಎಂಬವರ ಮನೆಯ ಬಾಗಿಲಿನ ಮುರಿದು 30 ಸಾವಿರ ನಗದನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೇ ಬಡಾವಣೆಯ ಬಸವರಾಜ (basavaraj) ಕೋರಿ ಎಂಬವರ ಮನೆಯ ಬಾಗಿಲು ಮುರಿದು ಕಳ್ಳತನ ಯತ್ನ ನಡೆಸಿದ್ದಾರೆ.

ಬಾಗಿಲಿಗೆ ಇಂಟರ್ ಲಾಕ್ (Inter lock) ಸಿಸ್ಟಮ್ ಅಳವಡಿಸಿದ್ದರಿಂದ ಬೀಗ ಮುರಿಯದ ಕಾರಣ ಕಳ್ಳರು ವಾಪಾಸ್ಸಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಒಂದೇ ರಾತ್ರಿ (Night) ಎರಡು ಕಡೆ ಕಳ್ಳತನ ನಡೆದಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. ಮಸ್ಕಿ ಪೊಲೀಸರು (maski police) ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಪ್ರಕರಣ (Case) ದಾಖಲಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.  ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಘಟನೆಯಿಂದ ಸ್ಥಳಿಯರಲ್ಲಿ ಕೊಂಚ ಆತಂಕ ಹುಟ್ಟಿದೆ.


[ays_poll id=3]