K2 ನ್ಯೂಸ್ ಡೆಸ್ಕ್ : ಅಕಾಲಿಕ ಮಳೆ ಜನರನ್ನ ತತ್ತರಿಸುವಂತೆ ಮಾಡಿದೆ. ರೈತ ಬೆಳೆದ ಬೆಳೆಗೂ ನಷ್ಟ ಅನುಭವಿಸುವಂತಾಗಿದೆ. ದಿನಪೂರ್ತಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೋಟೊ ಬೆಳೆ ನಾಶವಾಗುತ್ತಿದೆ.
ಹೌದು ರಾಜ್ಯಾದ್ಯಂತ ಟೊಮೋಟೋಗೆ ಮಳೆಯಿಂದ ಸಮಸ್ಯೆ ಆಗ್ತಾ ಇದೆ. ಈ ಭಾಗದಲ್ಲಿ ಶೀತಗಾಳಿ ಹಾಗೂ ಮಳೆಯಿಂದಾಗಿ ಸಮಸ್ಯೆ ಆಗುತ್ತಿದೆ. ಕಟಾವಿಗೆ ಬಂದಿದ್ದ ಭತ್ತ,ರಾಗಿ, ಮಳೆಯಿಂದಾಗಿ ಕಟಾವಾಗುತ್ತಿಲ್ಲ. ಇನ್ನು ತೊಗರಿ ವಿವಿಧ ಬೆಳೆಗಳಿಗೂ ಮಳೆಯ ಎಫೆಕ್ಟ್ ಆಗಿದೆ.
ಜಡಿ ಮಳೆಯಿಂದಾಗಿ ಟೊಮೆಟೊ ಬೆಳೆಗೆ ತೇವಾಂಶ ಹೆಚ್ಚಾಗಿದೆ. ಹೀಗಾಗಿ ಬೆಳೆಗೆ ಹೂಜಿ ಮತ್ತು ಕೀಟಬಾಧೆ ಅಂಟಿಕೊಂಡಿವೆ. ಗಿಡದಲ್ಲಿರುವ ಟೊಮೆಟೊ ಹಣ್ಣು ಕೀಳಲು ಆಗದೆ ತೋಟದಲ್ಲಿ ಬಿಟ್ಟಿದ್ದಾರೆ ರೈತರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬಂಡವಾಳವೂ ಕೂಡ ಕೈಗೆ ಸಿಗದಂತೆ ಆಗಿದೆ. ಹೀಗಾಗಿ ಸರ್ಕಾರ ತಮ್ಮ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]