This is the title of the web page
This is the title of the web page
Local News

ಇ ಪ್ರೊಕ್ಮೆಂಟ್ ಟೆಂಡರ್ ನಿಯಮ ಗಾಳಿಗೆ ತೂರಿ ಆದೇಶ


ರಾಯಚೂರು : ನಗರಸಭೆ ಕಾರ್ಯಾಲಯದಿಂದ 2021-22ನೇ ಸಾಲಿನ 20 ಜನ ಡ್ರೈವರ್ ಮತ್ತು ಆಪರೇಟರ್‌ಗಳನ್ನು ಇ ಪ್ರೊಕ್ಮೆಂಟ್ ಮೂಲಕ ಟೆಂಡರ್ ಕರೆಯಲಾಗಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯ ಆದೇಶ ನೀಡಿದ್ದಾರೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ನರಸಪ್ಪ ಆರೋಪಿಸಿದರು.

ರಾಯಚೂರು ನಗರಸಭೆ ಕಾರ್ಯಾಲಯದಿಂದ ಇ ಪ್ರೊಕ್ಮೆಂಟ್ ಮೂಲಕ ಟೆಂಡರ್ ಕರೆಯಲಾಗಿತ್ತು.  ಐ1- ಯ-ಗಂಡ್ಲ ಈಶ್ವರಯ್ಯ ಅನಿತಾ ಎಂಟಪ್ರೈಸಸ್ ಬಳ್ಳಾರಿ, ಐ2 – ನರಸಪ್ಪ. ಐ3- ಲಾಲ್ ಅಹ್ಮದ್, ಐ4- ಕೆ ನಾಗರಾಜು ಗಜಾನನ ಎಂಟಪ್ರೈಸಸ್, ಐ5- ರುದ್ರೇಶ್ ಐ6- ಎಸ್.ಕೆ.ನಾಗರೆಡ್ಡಿ ಐ7- ಶರಣಬಸವ ಮಲ್ಲಿಕಾರ್ಜುನ್ ಪವರ ಸರ್ವಿಸ್ ಈ ಟೆಂಡರ್ ನಲ್ಲಿ 7 ಜನ ಗುತ್ತಿಗೆದಾರರು ಭಾಗವಹಿಸಿದ್ದರು. ಈ ಟೆಂಡರ್ ನಿಯಮದಲ್ಲಿ ಗುತ್ತಿಗೆದಾರರು ತಮ್ಮ ಸೇವಾ ಶುಲ್ಕವನ್ನು ಮಾತ್ರ ನಮೋದಿಸಬೇಕೆಂದು ತೋರಿಸಿದ್ದಾರೆ. ಅದೇ ಪ್ರಕಾರ ಸೇವಾ ಶುಲ್ಕವನ್ನು ಮಾತ್ರ ತೋರಿಸಿದ್ದಾರೆ.

ಪ್ರೊಕ್ಮೆಂಟ್ ಟೆಂಡರ್ ನಲ್ಲಿ ಈ ಮೊತ್ತವನ್ನು ನಮೋದಿಸಿಲ್ಲ. ಆದರೆ ಎಸ್ ಕೆ ನಾಗರಡ್ಡಿ ಅವರು ಟೆಂಡರ್ ಪ್ರಕಾರ ಕಡಿಮೆ ಮೊತ್ತವನ್ನು ಐ1ಎಂದು ಅಂದಿನ ಅಧಿಕಾರಿಗಳಾದ ಪೌರಾಯುಕ್ತರು ಕೆ ಮುನಿಸ್ವಾಮಿ ಹಾಗು ಪರಿಸರ ಅಭಿಯಂತರರಾದ ಜಯಪಾಲ್ ರೆಡ್ಡಿ ಮತ್ತು ಲೆಕ್ಕ ಪತ್ರ ವಿಭಾಗದ ದೇವೇಂದ್ರಪ್ಪ ಇವರು ಎಸ್.ಕೆ.ನಾಗರೆಡ್ಡಿ ಇವರಿಗೆ 73,560 ರೂ ಅಧಿಕಾರಿಗಳ ಕೈಬರಹದಿಂದ ತೋರಿಸಿದ್ದಾರೆ ಎಂದು ದೂರಿದರು. ಈಗಾಗಲೇ ಮೇಲಿನ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದೇನೆ. ಜಿಲ್ಲಾ ನಗರ ಅಭಿವೃದ್ಧಿ ಕೋಶ ಅವರಿಗೆ ಮೇಲ್ಮನೆ ಸಲ್ಲಿಸಿದ್ದೇನೆ. ಆದರೆ ಇಲ್ಲಿಯವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಮತ್ತೆ ಇದನ್ನು ಪರಿಗಣಿಸಲು ಲೋಕಾಯುಕ್ತಕ್ಕೆ ಕೂಡ ಮೇಲ್ಮನವಿ ಸಲ್ಲಿಸುತ್ತೇನೆ ಎಂದರು.


[ays_poll id=3]