This is the title of the web page
This is the title of the web page

archive#k2 kannada news

Local News

ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ

ರಾಯಚೂರು : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಧರ್ಮಗುರುಗಳ ಸಮಿತಿಯ ಜಿಲ್ಲಾಧ್ಯಕ್ಷ ಅಸಿಮುದ್ದಿನ್ ಅಕ್ತರ್ ಆಗ್ರಹಿಸಿದರು. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 60ಸಾವಿರ ಮುಸ್ಲಿಂ ಮತದಾರರಿದ್ದು, ಸಾಮಾಜಿಕವಾಗಿ ಇತರೆ ಸಮುದಾಯದ ಮತಗಳನ್ನು ಪಡೆದ ಒಬ್ಬ ಮುಸ್ಲಿಂ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಕಳೆದ 20 ವರ್ಷಗಳಿಂದ ಮುಸ್ಲಿಂ ಸಮುದಾಯ ರಾಯಚೂರು ನಗರ ಹೊರತುಪಡಿಸಿ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೇಳದೆ ಪಕ್ಷಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ. ನಗರದಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಆಕಾಂಷಿ ಗಳ ಜೊತೆಗೆ ಸಭೆ ನಡೆಸಿದ್ದು, ಅವರೆಲ್ಲ ಒಂದಾಗಿ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ. ಅರ್ಜಿ ಸಲ್ಲಿಸಿದ 12 ಜನರಲ್ಲಿ ಯಾರಾದರೂ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಲ್ಲಿ ಉಳಿದೆಲ್ಲರೂ ಬೆಂಬಲಿಸುತ್ತೇವೆ ಎಂದಿದ್ದಾರೆ. ನಗರಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ರಾಜ್ಯ...
Local News

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಮೋಸದ ಯೋಜನೆಯಾಗಿದೆ

ರಾಯಚೂರು : ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ರೈತರಿಗೆ ಸಾಕಷ್ಟು ಮೊಸವಾಗುತ್ತಿದ್ದು, ಈ ಯೋಜನೆ ಮೋಸದ ಯೋಜನೆಯಾಗಿದ್ದು ಸರ್ಕಾರವೇ ರೈತರ ಸುಲಿಗೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಆರೋಪಿಸಿದರು. ರೈತರು ಬೆಳೆ ವಿಮೆಯಿಂದ ಲಾಭವಿದೆ ಎಂದು ಪ್ರಿಮಿಯಂ ತುಂಬಿದರೆ ಪರಿಹಾರವನ್ನು ಭಿಕ್ಷೆಯ ರೂಪದಲ್ಲಿ ನೀಡಲಾಗುತ್ತಿದೆ. 1ಲಕ್ಷ 7ಸಾವಿರದ 59 ರೂ ಪರಿಹಾರ ನೀಡಬೇಕಾಗಿರುವುದು, ಆದರೆ ಪರಿಹಾರದ ಹಣ ಬಂದಿರುವುದು 1462 ರೂ.ಮಾತ್ರ ಬಂದಿದೆ ಇದರಿಂದ ರೈತರಿಗೆ ದಿಕ್ಕುಗಾಣದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಮೆ ಕಂತು ಕಟ್ಟಿಸಿಕೊಳ್ಳುವ ಬಣ್ಣದ ಮಾತುಗಳನ್ನಾಡಲು ವಿಶೇಷ ಸಭೆಗಳನ್ನು ನಡೆಸಲು ಆತುರ ತೋರುವ ಕೃಷಿ ಇಲಾಖೆ ಅಧಿಕಾರಿಗಳು ಈಗ ವಿಮೆ ಹಣ ಬರದಿರುವಾಗ ಸಮಸ್ಯೆಗಳು ಎದುರಾದಾಗ ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ಜೀವವಿಮೆ ಅಧಿಕಾರಿಗಳನ್ನು ಕೇಳಿದರೆ ವಿಳಂಬ...
Local News

ಬಿಸಿ ಊಟಕ್ಕೆ ಕೊಳೆತ ತರಕಾರಿ ಉಪಯೋಗ ವಿದ್ಯಾರ್ಥಿಗಳ ಅಸಮಾಧಾನ

ರಾಯಚೂರು : ಮಕ್ಕಳಲ್ಲಿ ಅಪೌಷ್ಟಿಕ ಪ್ರಮಾಣ ನಿವಾರಣೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಪೌಷ್ಠಿಕ ಆಹಾರ ನೀಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದು, ದೇವರು ವರವನ್ನು ಕೊಟ್ಟರು ಪೂಜಾರಿ ನೀಡಲಿಲ್ಲ ಎನ್ನುವ ಹಾಗೆ ಮಕ್ಕಳ ಹೊಟ್ಟೆ ಸೇರಬೇಕಿದ್ದು ಆಹಾರ ಪದಾರ್ಥಗಳು ಅಡುಗೆ ಸಹಾಯಕರ ಪಾಲಾಗುತ್ತಿದ್ದು, ಮಕ್ಕಳಿಗೆ ಕೊಳೆತ ತರಕಾರಿಗಳ ಆಹಾರವೇ ಗತಿ ಎನ್ನುವ ಸ್ಥಿತಿ ನಗರದ ಗಾಜಗಾರಪೇಟೆ ಸರ್ಕಾರಿ ಶಾಲೆಯ ಮಕ್ಕಳದಾಗಿದೆ. ನಗರದ ಗಾಜಗಾರಪೇಟೆ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿ ಕೊಳೆತ ತರಕಾರಿಗಳ ಬಳಕೆ ಮಾಡಿ ಆಹಾರ ಪ್ರತಿ ನಿತ್ಯ ತಯಾರಿಸಲಾಗುತ್ತಿದ್ದು, ಗುಣಮಟ್ಟದ ಆಹಾರ ತಯಾರಿಸಿ ಎಂದು ಶಾಲೆಯ ಮಕ್ಕಳು ಪ್ರಶ್ನಿಸಿದರೆ ಅಡುಗೆ ತಯಾರಿಕೆ ಸಿಬ್ಬಂದಿಗಳು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎನ್ನುವ ಆರೋಪ ಕೇಳಿಬಂದಿದೆ ಅಲ್ಲದೆ ಪ್ರತಿ ನಿತ್ಯ ಶಾಲೆಯಿಂದ ಆಹಾರ ಪದಾರ್ಥಗಳನ್ನು ಮನೆಗೆ...
Local News

ಸಾಲ ಕಟ್ಟಲಾಗದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಸಿಂಧನೂರು : ತಾಲ್ಲೂಕಿನ ಗುಂಜಳ್ಳಿ ಗ್ರಾಮದ ರೈತ ನಿಂಗಪ್ಪ ಖಾಸಗಿಯವರ ಬಡ್ಡಿ ಹಣ ಕಟ್ಟದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತಿ ಹಾಗೂ ಆತನ ಅಣ್ಣನ ಮಕ್ಕಳು ಸೇರಿಕೊಂಡು ಅವಿಭಕ್ತ ಕುಟುಂಬದಲ್ಲಿ ಸುಮಾರು 13 ಎಕರೆ ಜಮೀನುಗಳಲ್ಲಿ ಒಕ್ಕಲುತನ ಮಾಡಿಕೊಂಡು ಹೋಗುತ್ತಿದ್ದರು. ತುರ್ವಿಹಾಳ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.50 ಲಕ್ಷ, ಖಾಸಗಿ ವ್ಯಕ್ತಿಗಳಿಂದ ಸುಮಾರು 10 ಲಕ್ಷ ಸಾಲವನ್ನು ಭತ್ತದ ಬೆಳೆಗಾಗಿ ಪಡೆದುಕೊಂಡಿದ್ದರು. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ಇಳುವರಿ ಕಡಿಮೆ ಬಂದು ಬ್ಯಾಂಕಿನ ಸಾಲ ಕಟ್ಟಲಾಗಲಿಲ್ಲ. ಇತ್ತ ಖಾಸಗಿಯವರ ಬಡ್ಡಿ ಹಣ ಕಟ್ಟಲು ಆಗದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಶಿವಮ್ಮ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
Local News

ಝೀಕಾ ವೈರಸ್ ಹರಂಡಂತೆ ಸೂಕ್ತ ಕ್ರಮ ಕೈಗೊಳ್ಳಿ: ಡಿ.ಸಿ.ಎಲ್ ಚಂದ್ರಶೇಖರ ನಾಯಕ

ರಾಯಚೂರು : ಜಿಲ್ಲೆಯಲ್ಲಿ ಝೀಕಾ ವೈರಸ್ ಲಕ್ಷಣಗಳು ಕಂಡುಬರುತ್ತಿದ್ದು, ಈ ವೈರಸ್ ಹೆಚ್ಚಾಗಿ ಹರಡಂತೆ ಮುಂಜಾಗೃತಾ ಕ್ರಮವಾಗಿ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಅವರು ಅಧಿಕಾರಿಗಳಿಗೆ ಸೂಚಿಸಿದರು. ಝೀಕಾ ವೈರಸ್‍ಗೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ, ಜಿಲ್ಲೆಯ ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಕೋಳಿ ಕ್ಯಾಂಪ್ ಎನ್ನುವ ಪ್ರದೇಶದಲ್ಲಿ ಈಗಾಗಲೇ ಒಬ್ಬ ಬಾಲಕನಲ್ಲಿ ಝೀಕಾ ವೈರಸ್ ಕಂಡುಬಂದಿದ್ದು, ಸೊಳ್ಳೆಗಳಿಂದಲೇ ಈ ವೈರಸ್ ಅತ್ಯಂತ ವೇಗವಾಗಿ ಹರಡುವುದರಿಂದ ಗ್ರಾಮದಲ್ಲಿ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಜನರು ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದರು. ನೀರಮಾನವಿಯ ಕೋಳಿ ಕ್ಯಾಂಪ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಬೇಕು ಹಾಗೂ ಈ ಗ್ರಾಮಗಳಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಫಾಗಿಂಗ್ ಮಾಡಿಸುವಂತೆ ಸೂಚನೆ...
Local News

ನೀರಮಾನವಿಯ ಕೋಳಿ ಕ್ಯಾಂಪ್ ಗೆ ತಾ. ಪಂ. ಇ. ಓ ಬೇಟಿ ಪರಿಶೀಲನೆ.

ಮಾನ್ವಿ : ಮಾನ್ವಿ ತಾಲೂಕಿನ ನೀರಮಾನವಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕೋಳಿ ಕ್ಯಾಂಪಿನ ಸಂಶಯಾಸ್ಪದ ಜಿಕಾ ವೈರಸ್ ಪ್ರಕರಣ ಹಿನ್ನೆಲೆಯಲ್ಲಿ ನಾಗರಾಜ ಮನೆಗೆ ಬೇಟಿ ನೀಡಿ ವಿಚಾರಣೆ ಮಾಡಿದರು, ಕುಟುಂಬಕ್ಕೆ ದೈರ್ಯ ತುಂಬಿದರು. ಮನೆಯ ಮುಂದೆ ಇರುವ ಕುಡಿಯುವ ನೀರಿನ ಗುಮ್ಮಿಯನ್ನು ಸ್ವಚ್ಛ ಗೊಳಿಸಿ, ಬಿಲಿಚಿಂಗ್ ಪೌಡರ್ ಹಾಕಲು ಶಿವಕುಮಾರ್ ಪಿಡಿಓ ರವರಿಗೆ ಮತ್ತು ಪಂಚಾಯತಿ ಸಿಬ್ಬಂದಿಗಳಿಗೆ ತಿಳಿಸಿದರು. ನಂತರ ಅರೋಗ್ಯ ಇಲಾಖೆಯರವರು ನಾವು ಈಗಾಗಲೇ ಪಾಗಿಂಗ್ ಮಾಡಲಾಗಿದೆ, ಹರವಿ ಮತ್ತು ನೀರಮಾನವಿ ಗ್ರಾಮದ ಎಲ್ಲಾ ಕಡೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಅಶಾ ಕಾರ್ಯಕರ್ತರು ಬೆಳಗ್ಗೆ 8 ಗಂಟೆ ಯಿಂದ ಲಾರ್ವ ಸಮೀಕ್ಷೆ ಮಾಡಿದ್ದಾರೆ ಮತ್ತು ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಎಲ್ಲಾ ಸಿಬ್ಬಂದಿಗಳು ಸಹಾಯಕರದಿಂದ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು. ಯಾವುದೇ ರೀತಿ ತೊಂದರೆ ಇದ್ದಾರೆ ನಮಗೆ ತಿಳಿಸಿ ಎಂದು...
Local News

ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಎನ್ ಎಸ್ ಎಸ್ ಕಾರ್ಯ ಶ್ಲಾಘನೀಯ

ಮಾನ್ವಿ : ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳ ಕಾರ್ಯ ಶ್ಲಾಘನೀಯ ಎಂದು ಹರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಲಿಂಗಣ್ಣ ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ ಅವರು ನೇರವೇರಿಸಿದರು. ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಾಜಪ್ಪಗೌಡ ಅವರು ಎನ್ ಎಸ್ ಎಸ್ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಪಾಟೀಲ ಅವರು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ನರಸಣ್ಣ ಸುಂಕೇಶ್ವರ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು....
Local News

ಝೀಕಾ ವೈರಸ್ ಸೋಂಕಿನ ಕುರಿತು ಜನರಲ್ಲಿ ಜಾಗೃತಿ

ಮಾನ್ವಿ : ರಾಜ್ಯದಲ್ಲಿಯೇ ಮೊದಲ ಬಾರಿಗೆ ಝೀಕಾ ವೈರಸ್ ಕಂಡು ಬಂದಿರುವುದರಿಂದ ಜನರು ಅನಗತ್ಯವಾಗಿ ಭಯ ಬೀಳದೆ ಆರೋಗ್ಯ ಇಲಾಖೆಯವರು ನೀಡುವ ಜಾಗೃತೆಗಳನ್ನು ಪಾಲಿಸುವುದರಿಂದ ಝೀಕಾ ವೈರಸ್ ಸೋಂಕು ಹರಡದಂತೆ ತಡೆಯಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿ ಮುಂಡಾಸ್ ತಿಳಿಸಿದರು. ತಾಲೂಕಿನ ನೀರಮಾನವಿ ಗ್ರಾಮದ ಹತ್ತಿರದ ಕೋಳಿ ಕ್ಯಾಂಪ್‌ನ ನಿವಾಸಿ 5ವರ್ಷದ ಬಾಲಕಿಯಲ್ಲಿ ರಾಜ್ಯದಲ್ಲಿಯೇ ಮೊದಲ ಝೀಕಾ ವೈರಸ್ ಸೋಂಕು ದೃಢ ಪಟ್ಟಿರುವುದರಿಂದ ಜಿಲ್ಲಾ ಆರೋಗ್ಯ ಶಿಕ್ಷಣ ವಿಭಾಗ ಸಂಯುಕ್ತ ಆಶ್ರಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು . ಝೀಕಾ ವೈರಸ್ ಸೋಂಕಿನ ಲಕ್ಷಣಗಳಾದ ತೀವ್ರ ಜ್ವರ, ಮೈ, ಕೈ ನೋವು, ಕೀಲು ನೋವು, ಮೈ ಮೇಲೆ ಗುಳ್ಳೆಗಳು ಏಳುವುದು, ಕಣ್ಣು ಕೆಂಪಾಗುವುದು ಕಂಡುಬಂದಲ್ಲಿ ಆರೋಗ್ಯ ಇಲಾಖೆಯ ಆಸ್ಪತ್ರೇಗಳಲ್ಲಿ ತಕ್ಷಣವೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಝೀಕಾ ವೈರಸ್ ಸೋಂಕು ಈಡೀಸ್ ಸೊಳ್ಳೆಗಳ ಕಡಿತದಿಂದ ಹರಡುವುದರಿಂದ. ಗರ್ಭಿಣಿ ಮಹಿಳೆಯರ ಗರ್ಭದಲ್ಲಿನ...
Local News

ಕುರ್ಡಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಮಾನ್ವಿ : 3 ಕೋಟಿ 86ಲಕ್ಷ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಸರಬರಾಜು ನಳಗಳನ್ನು ಆಳವಾಡಿಸುವ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಗ್ರಾಮೀಣ ಶಾಸಕ ಬಸವನಗೌಡ ದದ್ದಾಲ್ ಶಂಕು ಸ್ಥಾಪನೆ ನೆರವೇರಿಸಿದರು. ಕುರ್ಡಿ ಗ್ರಾಮದಲ್ಲಿನ ಜನರಿಗೆ ಶುದ್ದಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಗ್ರಾಮದ ಪ್ರತಿ ಮನೆಗೆ ಶುಧ್ದ ನೀರು ಪೂರೈಕೆಗಾಗಿ ಬಹುಕೋಟಿ ವೆಚ್ಚದಲ್ಲಿ ಕಾಮಾಗಾರಿಯನ್ನು ಕೈಗೊಳ್ಳಲಾಗಿದ್ದು ಕುಡಿಯು ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಶಿಘ್ರವೇ ಕಾಮಾಗಾರಿ ಪೂರ್ಣಗೊಳ್ಳಿಸಿ ಶುದ್ದನೀರು ಪೂರೈಕೆ ಮಾಡುವಂತೆ ಸೂಚಿಸಿದರು. ಕುರ್ಡಿ ಹೋಬಳಿಯ ಸಂಪೂರ್ಣವಾಗಿ ಅಭಿವೃದ್ದಿ ಗೊಳ್ಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. ಕುರ್ಡಿ ಕ್ರಾಸ್‌ನಲ್ಲಿನ ಸರಕಾರಿ ಶಾಲೆಯಲ್ಲಿ 18ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಶಾಲಾ ಕೋಠಡಿ ಹಾಗೂ 8 ಶೌಚಾಲಯಗಳನ್ನು ಉದ್ಘಾಟಿಸಿ. ಕುರ್ಡಿಯಿಂದ ಗಾರಲದಿನ್ನಿಗೆ ಸಂಪರ್ಕ ಕಲ್ಪಿಸುವ 20ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಪೂಜೆ...
Local News

ರೈತರ ವಿವಿಧ ಬೇಡಿಕೆ ಈಡೇರಿಸಲು, ಬೆಳಗಾವಿ ವಿಕಾಸಸೌಧ ಮುತ್ತಿಗೆ

ಸಿಂಧನೂರು : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷರಾದ ಹುಲಗಯ್ಯ ತಿಳಿಸಿದರು. ರೈತರ ಪಂಪ್‌ಸೇಟ್‌ಗಳಿಗೆ ಮೀಟರ್ ಅಳವಡಿಕೆ ತೆಗೆಯಬೇಕು. ಭತ್ತಕ್ಕೆ ಪ್ರೋತ್ಸಾಹ ಧನ ನೀಡಬೇಕು. ಕುಚಲ ಅಕ್ಕಿಗೆ ಒಂದು ಕ್ವಿಂಟಲ್ ಗೆ 500 ರೂ. ಸಹಾಯ ಧನ ನೀಡುವುದು ಸೇರಿದಂತೆ ರೈತರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಬೆಳಗಾವಿ ಮುತ್ತಿಗೆ ಹಾಕುವ ಕಾರ್ಯಕ್ರಮ ಕ್ಕೆ ಹೋಗಲು ಡಿ.18 ರಂದು ಸಿಂಧನೂರು ದಿಂದ ನೂರಾರು ಸಂಖ್ಯೆಯಲ್ಲಿ ರೈತರ ತೆರಳುತ್ತಿದ್ದೇವೆ ಎಂದು ಹುಲಗಯ್ಯ ತಿಳಿಸಿದರು....
1 151 152 153 154 155 164
Page 153 of 164