This is the title of the web page
This is the title of the web page

archive#raichur

Local News

ಸದಾಶಿವ ಆಯೋಗ ವರದಿ ಆಗ್ರಹಿಸಿ ಡಿ.11 ಬೃಹತ್ ಸಮಾವೇಶ

ರಾಯಚೂರು : ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡ ಎಂ.ವಿರುಪಾಕ್ಷಿ ಹೇಳಿದರು. ಎಸ್.ಸಿ/ಎಸ್.ಟಿ ಮೀಸಲಾತಿ ಹೆಚ್ಚಳ ವಿಷಯದಲ್ಲಿ ರಾಜ್ಯ ಬಿಜೆಪಿ ಸರಕಾರ ಮೂಗಿಗೆ ತುಪ್ಪ ಸವರಿದಿದೆ.ಒಳಮೀಸಲಾತಿ ವಿಚಾರವಾಗಿ ಮಾದಿಗ ದಂಡೋರ ಹಾಗೂ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ಹಲವು ಮಾದಿಗ ಸಂಘಟನೆಗಳು ಹಲವಾರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದೆ. ಈಗಾಗಲೇ ಮೀಸಲಾತಿಗೆ ಸಂಬಂಧಪಟ್ಟಂತೆ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಈಗ ನಾವು ಅಂತಿಮ ಹಂತದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಬೆಂಗಳೂರಿನ ಡಿ. 11 ರಂದು 4 ರಿಂದ 5 ಲಕ್ಷ ಜನ ಸೇರಿ ದೊಡ್ಡ ಸಮಾವೇಶ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಿದ್ದೇವೆ. ಡಿ. 11 ರಿಂದ ಡಿ.31 ರವರೆಗೆ...
Local News

ಅಭಿನಂದನಾ ಸಮಾವೇಶಕ್ಕೆ ಮಹಿಳೆಯರು ಭಾಗಿ

ರಾಯಚೂರು : ಡಿ.10 ರಂದು ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾವೇಶದಲ್ಲಿ ಜಿಲ್ಲೆಯಿಂದ 500ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ.ನಾಗವೇಣಿ ಹೇಳಿದರು. ಡಿಸೆಂಬರ್ 10ರಂದು ಕಲ್ಬುರ್ಗಿಯಲ್ಲಿ ಎ.ಐ.ಸಿ.ಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಮ್ಮಿಕೊಳ್ಳಲಾಗಿರುವ ಅಭಿನಂದನಾ ಸಮಾವೇಶಕ್ಕೆ 500 ರಾಯಚೂರು ಮಹಿಳೆಯರು. ಭಾಗವಹಿಸಲಿದ್ದಾರೆ ಎಂದು ಹೇಳಿದರು. ರಾಯಚೂರು ಜಿಲ್ಲೆಯ ಪ್ರತಿ ತಾಲೂಕಿನಿಂದ 50ಕ್ಕೂ ಹೆಚ್ಚು ಮಹಿಳೆಯರಂತೆ ಎಲ್ಲಾ ತಾಲೂಕಗಳಿಂದ 500ಕ್ಕೂ ಹೆಚ್ಚು ಮಹಿಳೆಯರು ಕಲ್ಬರ್ಗಿಯಲ್ಲಿ ಜರುಗಲಿರುವ ಸಮಾವೇಶದಲ್ಲಿ ಭಾಗವಹಿಸಲು ಸಿದ್ಧರಾಗಿದ್ದೇವೆ ಎಂದರು. ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ವಿಶೇಷ ಸ್ಥಾನ ಮಾನಕ್ಕೆ ಹಚ್ಚು ಒತ್ತು ನೀಡಿದವರು ಹತ್ತು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಈ ಭಾಗದ ನಮ್ಮ ಪಕ್ಷದ ಹಿರಿಯ ಧುರಿಣರು ಸೇರಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನಾ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು....
Local News

ಬೆಂಗಳೂರಿಗೆ ವೀಕ್ಲಿ ಫಾಸ್ಟ್ ಪ್ಯಾಸೆಂಜರ್ ಟ್ರೈನ್ ಬಿಡಲು ಮನವಿ

ರಾಯಚೂರು : ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿಗೆ ದುಡಿಯಲು ಹೋಗುವ ಬಡ ಕೂಲಿ ಕಾರ್ಮಿಕರಿಗೆ ಹೆಚ್ಚಿನ ರೈಲುಗಳು ಹಾಗೂ ಜನರಲ್ ಭೋಗಿಗಳು ಲಭ್ಯವಿಲ್ಲದ ಕಾರಣ ಇತರೆ ಎಕ್ಸ್ಪ್ರೆಸ್ ಟ್ರೈನ್ ಗಳಿಗೆ ನೂಕು ನುಗ್ಗಲು ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾದಗಿರಿ ಯಿಂದ ರಾಯಚೂರು ಮೂಲಕವಾಗಿ ಬೆಂಗಳೂರಿಗೆ ಫಾಸ್ಟ್ ಪ್ಯಾಸೆಂಜರ್ ಟ್ರೈನ್ ಬಿಡಲು ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಮನವಿ ಮಾಡಿಕೊಂಡಿದ್ದಾರೆ. ಸೌತ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿಯೇ ಹೆಚ್ಚಿನ ಟಿಕೆಟಗಳ ಮಾರಾಟ ಯಾದಗಿರಿ ರೈಲ್ವೆ ನಿಲ್ದಾಣದಿಂದ ಆಗುತ್ತಿದ್ದು ರೈಲ್ವೆ ಇಲಾಖೆಗೆ ಹೆಚ್ಚಿನ ಲಾಭ ತರುತ್ತಿದೆ. ಅದೇ ರೀತಿ ರಾಯಚೂರು ಜಿಲ್ಲೆಯಿಂದ ಸಹ ಹೆಚ್ಚಿನ ಬಡ ಕೂಲಿ ಕಾರ್ಮಿಕರು, ದುಡಿಯುವ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣಸುತ್ತಿರುವುದರಿಂದ ಈ ಭಾಗಕ್ಕೆ ಕಡಿಮೆ ದರದ ಪ್ಯಾಸೆಂಜರ್ ಟ್ರೈನ್ ಗಳ ಅಗತ್ಯವಿದೆ. ಕೂಡಲೇ ಯಾದಗಿರಿ ರಾಯಚೂರು ಮೂಲಕ ಬೆಂಗಳೂರಿಗೆ ಒಂದು ಹೊಸ ಫಾಸ್ಟ್ ಪ್ಯಾಸೆಂಜರ್ ಟ್ರೈನ್...
Local News

ಮತದಾನದ ಹಕ್ಕು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ: ಸಿ ಇ ಓ

ರಾಯಚೂರು : ಭಾರತ ದೇಶ ಪ್ರಜಾಪ್ರಭುತ್ವದ ದೇಶವಾಗಿದ್ದು, ದೇಶದಲ್ಲಿ ವಾಸಿಸುವ ಎಲ್ಲರೂ ಪ್ರಜಾಪ್ರಭುತ್ವದ ಒಂದು ಭಾಗವಾಗಿದ್ದೇವೆ. ಮತದಾನದ ಹಕ್ಕು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯವಾಗಿದ್ದು, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತದಾನದ ಹಕ್ಕನ್ನು ಪಡೆಯುವಲ್ಲಿ ಮುಂದಾಗಬೇಕೆಂದು ಸ್ವೀಪ್ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು. ನಗರದ ನವೋದಯ ವೈದ್ಯಕೀಯ ಮಹಗಾವಿದ್ಯಾಲಯದಲ್ಲಿ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಗೆ ಹೆಸರನ್ನು ನೊಮದಾಯಿಸುವ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚಿಗೆ ನಗರದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ನೊಮದಾಯಿಸಿಕೊಳ್ಳಲು ಆಸಕ್ತಿ ತೋರಿಸಲು ಮುಂದಾಗುತ್ತಿಲ್ಲ. ಅಂಕಿ ಸಂಖ್ಯೆಗಳ ಪ್ರಕಾರ ನಗರ ಪ್ರದೇಶಗಳಲ್ಲಿ ಕೇವಲ ಶೇ.50 ರಷ್ಟು ಜನರು ಮಾತ್ರ ಮತದಾರರ ಪಟ್ಟಿಗೆ ಹೆಸರನ್ನು ನಿಂದಾಯಿಸಿಕೊಂಡು ಮತದಾನದ ಹಕ್ಕನ್ನು ಪಡೆಯಲು ಮುಂದಾಗುತ್ತಿದ್ದಾರೆ ಎಂದರು. ಮತದಾನವೆಂಬುವುದು ಪ್ರತಿಯೊಬ್ಬರ...
Local News

ಪ್ರಥಮ ಚಿಕಿತ್ಸೆ ತರಬೇತಿ ಪಡೆದು ಜೀವವನ್ನು ಉಳಿಸಬಹುದು

ರಾಯಚೂರು : ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ ನೀಡಿವುದು ತುಂಬಾ ಉಪಯುಕ್ತ, ಪ್ರಥಮ ಚಿಕಿತ್ಸೆ ಪಡೆದು ಜೀವವನ್ನು ಉಳಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸುರೇಂದ್ರ ಬಾಬು ಅಭಿಪ್ರಾಯ ಪಟ್ಟರು. ಇವರು ನಗರದ ಜಿಲ್ಲಾ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪೋಲೀಸ್ ಸಿಬ್ಬಂದಿಗಳಿಗೆ, ಹೋಮ್‌ಗಾರ್ಡ್ ಸಿಬ್ಬಂದಿಗಳಿಗೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವ ರಕ್ಷಕ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಅಪಘಾತ ಸಂಭವಿಸಿದಾಗ, ತೀವ್ರ ಹೃದಯಾಘಾತವಾದಾಗ, ಇನ್ನಿತರ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವುದು ಹೇಗೆ ಎಂಬ ಕಲೆಯನ್ನು ಕಲೆತರೆ ಅವಘಡಕ್ಕೀಡಾದವರ ಜೀವ ರಕ್ಷಣೆ ಮಾಡಬಹುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಭೀಮರಾಯ ಅಂದಾನಿ ಅವರು ಮಾತನಾಡಿ, ಸಾರ್ವಜನಿಕ...
Local News

ಭೋವಿ ಸಮಾಜಕ್ಕೆ ಶೈಕ್ಷಣಿಕ ಅಭಿವೃದ್ದಿಗಾಗಿ ಆರ್ಥಿಕ ನೆರವು

ರಾಯಚೂರು : ಕರ್ನಾಟಕ ಭೋವಿ ಅಭಿವೃದ್ದಿ ನಿಗಮದಲ್ಲಿ ಶೈಕ್ಷಣಿಕ ಅಭಿವೃದ್ದಿಗಾಗಿ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಭೋವಿ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ವಾರ್ಷಿಕ ರೂ.1 ಲಕ್ಷಗಳ ಮಿತಿಯಲ್ಲಿ 5 ಲಕ್ಷಗಳ ವರಗೆ ಶೈಕ್ಷಣಿಕ ಸಾಲ ಸೌಲಭ್ಯವನ್ನು ಕಲ್ಪಿಸಬೇಕು.ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದಲ್ಲಿ ಭೋವಿ ಸಮುದಾಯದ ಜನರ ಮದುವೆ, ಸಭೆ ಸಮಾರಂಭ ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ರೂ. 30 ಲಕ್ಷಗಳ ವೆಚ್ಚದಲ್ಲಿ ಸಿದ್ದರಾಮೇಶ್ವರ ಸಮುದಾಯ ಭವನ ಮತ್ತು ರೂ.15ಲಕ್ಷಗಳ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಬೇಕು. ಭೋವಿ ಸಮುದಾಯದ ಯುವಕ ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳಾದ ಹತ್ತು ತಿಂಗಳ ತೋಟಗಾರಿಕೆ ತರಬೇತಿ, ಗಣಕಯಂತ್ರ ಹಾಗೂ ಟೈಪಿಂಗ್ ತರಬೇತಿ, ಭಾರಿ ಲಘುವಾಹನ, ಜೆಸಿಬಿ, ಹಿಟಾಚಿ, ಚಾಲನಾ ತರಬೇತಿ,ದ್ವಿತೀಯ ತ್ರಿಚಕ್ರ...
Local News

ಅಧಿಕಾರ ದುರುಪಯೋಗಪಡಿಸಿಕೊಂಡ ಅಧಿಕಾರಿ ಒತ್ತಾಯ

ರಾಯಚೂರು : ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಕರ್ನಾಟಕ ಜನಸೈನ್ಯ ಘಟಕ ಜಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ರಾಯಚೂರು ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತ್ ಮಟ್ಟದ ಸ್ವ-ಸಹಾಯ ಗುಂಪುಗಳು ಹಾಗೂ ಒಕ್ಕೂಟಗಳ ರಚನೆ ಮಾಡುವಲ್ಲಿ, ಕಾರ್ಯಕ್ರಮಗಳನ್ನು ರೂಪಿಸುವಲ್ಲಿ, ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಲು ಸರ್ಕಾರ ಹಣವನ್ನು ನೀಡುತ್ತಿದ್ದು, ಈ ಯೋಜನೆಯು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸದೆ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್ ಅವರು ಕಾರ್ಯದಲ್ಲಿ ನೈತಿಕತೆ ತೋರದೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಅವರ ವಿರುದ್ಧ ಹಲವಾರು ಸಂಘ ಸಂಸ್ಥೆಗಳು ದೂರು ಸಲ್ಲಿಸಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಯಕ್ರಮದಲ್ಲಿ ಯವುದೇ ಪ್ರಚಾರ ಮಾಡದೇ, ಸಾರ್ವಜನಿಕ ಸಭೆಯನ್ನು ಕರೆಯದೇ ತಮಗೆ ಬೇಕಾದವರನ್ನು...
Local News

ಜೆಸಿಬಿ ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ ಆಮ್ ಆದ್ಮಿಗೆ ಬೆಂಬಲಿಸುತ್ತಾರೆ ಜನ

ರಾಯಚೂರು : ನನ್ನ ಉಸಿರು ಇರುವವರೆಗೂ ಗ್ರಾಮೀಣ ಮತ ಕ್ಷೇತ್ರ ಬಿಟ್ಟು ಹೋಗಲಾರೆ ಸೋಲು ಗೆಲವು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಗ್ರಾಮೀಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಕಾಕ್ಷಿ ಡಾ.ಸುಭಾಷಚಂದ್ರ ಸಬಾಜಿ ಹೇಳಿದರು. ನಾನು ಬೇರೆ ದೇಶದಿಂದ ಬಂದವನಲ್ಲ ನಾನು ಕರ್ನಾಟಕದ ಪಕ್ಕದ ಬೀದರ್ ಜಿಲ್ಲೆಯವರು ರಾಯಚೂರು ಜಿಲ್ಲೆಯಲ್ಲಿ 20 ವರ್ಷಗಳ ಕಾಲ ಸರ್ಕಾರಿ ಸೇವಕನಾಗಿ ಕೆಲಸ ಮಾಡಿದ್ದೇನೆ ಜಿಲ್ಲೆಯ ಜನರ ಜೊತೆ ಬಹಳಷ್ಟು ಒಡನಾಟ ಹೊಂದಿದ್ದೇನೆ ನನಗೆ ಆಗದಿರುವವರು ಚುನಾವಣೆ ನಂತರ ವಾಪಸ್ ಬೀದರ್ ಗೆ ಹೋಗುತ್ತಾರೆ ಎಂದು ಹೇಳುತ್ತಿದ್ದಾರಂತೆ ಅದನ್ನ ಕೇಳಿಮನಸ್ಸಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಸತ್ಯ ಹೇಳುತ್ತೇನೆ ನನ್ನ ಉಸಿರು ಇರುವವರೆಗೂ ರಾಯಚೂರು ಗ್ರಾಮೀಣ ಮತ ಕ್ಷೇತ್ರದಲ್ಲಿ ಇರುತ್ತೇನೆ ಕ್ಷೇತ್ರದ ಜನತೆಯನ್ನು ಬಿಟ್ಟು ಹೋಗುವುದಿಲ್ಲ. 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸೋಲು ಗೆಲುವು ಸಮಾನವಾಗಿ ಕರಿಸುತ್ತೇನೆ. ಪ್ರಾಣ ಇರುವವರೆಗೂ ಜನರ...
Local News

ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ

ರಾಯಚೂರು : ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ ಒದಗಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ರೈತರ ನಿಗದಿತ ಬೆಲೆ ಮಾರಾಟ ಮಾಡುವಂತಹ ಪ್ರಯತ್ನ ಮಾಡುತ್ತೇನೆ ಎಂದು ನಗರ ಶಾಸಕಾಂಗಕ್ಕೆ ಶಿವರಾಜ್ ಪಾಟೀಲ್ ಹೇಳಿದರು. ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ನೇರವಾಗಿ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಅವಕಾಶ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡಲು ಅನೇಕ ಅಡೆತಡೆಗಳು ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಿ ಮಾರುಕಟ್ಟೆ ಸ್ಥಾಪನೆ ಮಾಡಲಾಯಿತು ಎಂದರು. ಇದು ರೈತರ ಉತ್ಪನ್ನ ಮಾರುಕಟ್ಟೆ ರೈತರಿಗೆ ಸೀಮಿತವಾಗಬೇಕು. ರೈತರ ಬೆಳೆದ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಖರೀದಿ ವ್ಯಾಪಾರಸ್ಥರು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದರು.‌ರೈತರ ಬೆಲೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ರೈತರಿಗೆ ಮತ್ತು...
Local News

ಮಲ್ಲಿಕಾರ್ಜುನ್ ಖರ್ಗೆ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ

ರಾಯಚೂರು : ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗ ಸೇರಿದಂತೆ ಸರ್ವಾಗಿಣ ಅಭಿವೃದ್ಧಿಗಾಗಿ 371ಜೆ ವಿಷೇಶ ಸ್ಥಾನ ಮಾನ ಸಿಕ್ಕಿರುವುದು ಮಲ್ಲಿಕಾರ್ಜುನ್ ಖರ್ಗೇ ನಾಯಕತ್ವದ ಹೋರಾಟಕ್ಕೆ ಸಿಕ್ಕ ಫಲ ಎಂದು ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ತಿಳಿಸಿದರು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನವೆಂಬರ್ 10ರಂದು ನಡೆಯುವ ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿನಂದನಾ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 7 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಸಲ್ಲಿಸಿದ ಅವರ ಸಾಮಾಜಿಕ ಸೇವೆ ಅಗಣಿತವಾಗಿದೆ. ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರದ ಅವಧಿಯಲ್ಲಿ 371ಜೆ ಅನುಮೋದಿಸಲು ಸಾದ್ಯವಿಲ್ಲ ಎಂದಿದ್ದನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಅನುಮೋದಿಸಿ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ ಹಾಗಾಗಿ ನಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅವರಿಗೆ ಅಭಿನಂದಿಸಬೇಕೆಂದು ತಿಳಿಸಿದರು. ನಂತರ ಬಿ.ವಿ ನಾಯಕ್...
1 41 42 43 44 45
Page 43 of 45