ರಾಯಚೂರು : ಡಿ.10 ರಂದು ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾವೇಶದಲ್ಲಿ ಜಿಲ್ಲೆಯಿಂದ 500ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ.ನಾಗವೇಣಿ ಹೇಳಿದರು.
ಡಿಸೆಂಬರ್ 10ರಂದು ಕಲ್ಬುರ್ಗಿಯಲ್ಲಿ ಎ.ಐ.ಸಿ.ಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಮ್ಮಿಕೊಳ್ಳಲಾಗಿರುವ ಅಭಿನಂದನಾ ಸಮಾವೇಶಕ್ಕೆ 500 ರಾಯಚೂರು ಮಹಿಳೆಯರು. ಭಾಗವಹಿಸಲಿದ್ದಾರೆ ಎಂದು ಹೇಳಿದರು. ರಾಯಚೂರು ಜಿಲ್ಲೆಯ ಪ್ರತಿ ತಾಲೂಕಿನಿಂದ 50ಕ್ಕೂ ಹೆಚ್ಚು ಮಹಿಳೆಯರಂತೆ ಎಲ್ಲಾ ತಾಲೂಕಗಳಿಂದ 500ಕ್ಕೂ ಹೆಚ್ಚು ಮಹಿಳೆಯರು ಕಲ್ಬರ್ಗಿಯಲ್ಲಿ ಜರುಗಲಿರುವ ಸಮಾವೇಶದಲ್ಲಿ ಭಾಗವಹಿಸಲು ಸಿದ್ಧರಾಗಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ವಿಶೇಷ ಸ್ಥಾನ ಮಾನಕ್ಕೆ ಹಚ್ಚು ಒತ್ತು ನೀಡಿದವರು ಹತ್ತು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಈ ಭಾಗದ ನಮ್ಮ ಪಕ್ಷದ ಹಿರಿಯ ಧುರಿಣರು ಸೇರಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
![]() |
![]() |
![]() |
![]() |
![]() |
[ays_poll id=3]