This is the title of the web page
This is the title of the web page
Local News

ಬೆಂಗಳೂರಿಗೆ ವೀಕ್ಲಿ ಫಾಸ್ಟ್ ಪ್ಯಾಸೆಂಜರ್ ಟ್ರೈನ್ ಬಿಡಲು ಮನವಿ


ರಾಯಚೂರು : ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿಗೆ ದುಡಿಯಲು ಹೋಗುವ ಬಡ ಕೂಲಿ ಕಾರ್ಮಿಕರಿಗೆ ಹೆಚ್ಚಿನ ರೈಲುಗಳು ಹಾಗೂ ಜನರಲ್ ಭೋಗಿಗಳು ಲಭ್ಯವಿಲ್ಲದ ಕಾರಣ ಇತರೆ ಎಕ್ಸ್ಪ್ರೆಸ್ ಟ್ರೈನ್ ಗಳಿಗೆ ನೂಕು ನುಗ್ಗಲು ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾದಗಿರಿ ಯಿಂದ ರಾಯಚೂರು ಮೂಲಕವಾಗಿ ಬೆಂಗಳೂರಿಗೆ ಫಾಸ್ಟ್ ಪ್ಯಾಸೆಂಜರ್ ಟ್ರೈನ್ ಬಿಡಲು ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಮನವಿ ಮಾಡಿಕೊಂಡಿದ್ದಾರೆ.

ಸೌತ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿಯೇ ಹೆಚ್ಚಿನ ಟಿಕೆಟಗಳ ಮಾರಾಟ ಯಾದಗಿರಿ ರೈಲ್ವೆ ನಿಲ್ದಾಣದಿಂದ ಆಗುತ್ತಿದ್ದು ರೈಲ್ವೆ ಇಲಾಖೆಗೆ ಹೆಚ್ಚಿನ ಲಾಭ ತರುತ್ತಿದೆ. ಅದೇ ರೀತಿ ರಾಯಚೂರು ಜಿಲ್ಲೆಯಿಂದ ಸಹ ಹೆಚ್ಚಿನ ಬಡ ಕೂಲಿ ಕಾರ್ಮಿಕರು, ದುಡಿಯುವ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣಸುತ್ತಿರುವುದರಿಂದ ಈ ಭಾಗಕ್ಕೆ ಕಡಿಮೆ ದರದ ಪ್ಯಾಸೆಂಜರ್ ಟ್ರೈನ್ ಗಳ ಅಗತ್ಯವಿದೆ.

ಕೂಡಲೇ ಯಾದಗಿರಿ ರಾಯಚೂರು ಮೂಲಕ ಬೆಂಗಳೂರಿಗೆ ಒಂದು ಹೊಸ ಫಾಸ್ಟ್ ಪ್ಯಾಸೆಂಜರ್ ಟ್ರೈನ್ ವಾರಕ್ಕೆ ಮೂರು ದಿನ ಬಿಡಲು ಸಿಕಂದರಾಬಾದ್ ಸೌತ್ ಸೆಂಟ್ರಲ್ ರೈಲ್ವೆ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಜೈನ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು


[ays_poll id=3]