This is the title of the web page
This is the title of the web page

archive#raichur

Local News

ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ

ರಾಯಚೂರು : ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ ಒದಗಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ರೈತರ ನಿಗದಿತ ಬೆಲೆ ಮಾರಾಟ ಮಾಡುವಂತಹ ಪ್ರಯತ್ನ ಮಾಡುತ್ತೇನೆ ಎಂದು ನಗರ ಶಾಸಕಾಂಗಕ್ಕೆ ಶಿವರಾಜ್ ಪಾಟೀಲ್ ಹೇಳಿದರು. ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ನೇರವಾಗಿ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಅವಕಾಶ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡಲು ಅನೇಕ ಅಡೆತಡೆಗಳು ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಿ ಮಾರುಕಟ್ಟೆ ಸ್ಥಾಪನೆ ಮಾಡಲಾಯಿತು ಎಂದರು. ಇದು ರೈತರ ಉತ್ಪನ್ನ ಮಾರುಕಟ್ಟೆ ರೈತರಿಗೆ ಸೀಮಿತವಾಗಬೇಕು. ರೈತರ ಬೆಳೆದ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಖರೀದಿ ವ್ಯಾಪಾರಸ್ಥರು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದರು.‌ರೈತರ ಬೆಲೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ರೈತರಿಗೆ ಮತ್ತು...
Local News

ಮಲ್ಲಿಕಾರ್ಜುನ್ ಖರ್ಗೆ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ

ರಾಯಚೂರು : ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗ ಸೇರಿದಂತೆ ಸರ್ವಾಗಿಣ ಅಭಿವೃದ್ಧಿಗಾಗಿ 371ಜೆ ವಿಷೇಶ ಸ್ಥಾನ ಮಾನ ಸಿಕ್ಕಿರುವುದು ಮಲ್ಲಿಕಾರ್ಜುನ್ ಖರ್ಗೇ ನಾಯಕತ್ವದ ಹೋರಾಟಕ್ಕೆ ಸಿಕ್ಕ ಫಲ ಎಂದು ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ತಿಳಿಸಿದರು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನವೆಂಬರ್ 10ರಂದು ನಡೆಯುವ ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿನಂದನಾ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 7 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಸಲ್ಲಿಸಿದ ಅವರ ಸಾಮಾಜಿಕ ಸೇವೆ ಅಗಣಿತವಾಗಿದೆ. ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರದ ಅವಧಿಯಲ್ಲಿ 371ಜೆ ಅನುಮೋದಿಸಲು ಸಾದ್ಯವಿಲ್ಲ ಎಂದಿದ್ದನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಅನುಮೋದಿಸಿ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ ಹಾಗಾಗಿ ನಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅವರಿಗೆ ಅಭಿನಂದಿಸಬೇಕೆಂದು ತಿಳಿಸಿದರು. ನಂತರ ಬಿ.ವಿ ನಾಯಕ್...
Local News

ನೂತನ ಶಿಲಾಸ್ತಂಬ ದೇವಸ್ಥಾನ ಶಿಲನ್ಯಾಸ ಕಾರ್ಯಕ್ರಮ

ರಾಯಚೂರು : ಸಿದ್ದಿ ಪರ್ವತ ಅಂಬಾದೇವಿ ದೇವಸ್ಥಾನದ ನೂತನ ಶಿಲಾ ಸ್ತಂಭ ದೇವಸ್ಥಾನ ಶಿಲನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಒಂದು ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದಾರೆ ಎಂದು ತಹಸೀಲ್ದಾರ್ ಹೆಚ್ ದೇಸಾಯಿ ಹೇಳಿದರು. ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಇರುವ ಅಂಬಾದೇವಿ ದೇವಸ್ಥಾನದ ಶಿಲಾಸ್ತಂಬ ಮತ್ತು ಶಿಲನ್ಯಾಸ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜಿಲ್ಲೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಮುನೇನಕೊಪ್ಪ ಅವರು ಆಗಮಿಸುತ್ತಿದ್ದು, ಕಾರಣ ಈ ಒಂದು ಕಾರ್ಯಕ್ರಮದಲ್ಲಿ ಸಕಲ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಹಸಿಲ್ದಾರ್ ಅರುಣ್ ಹೆಚ್ ದೇಸಾಯಿ ಹೇಳಿದರು....
Crime NewsLocal News

ಭೀಕರ ಅಪಘಾತ ಇಬ್ಬರು ಸಾವು

ರಾಯಚೂರು : ಲಾರಿ-ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಯರಗೇರಾ ಗ್ರಾಮದ ಹತ್ತಿರ ಘಟನೆ ಸಂಭವಿಸಿದೆ. ಮೃತರನ್ನು ಶರತ್, ಪ್ರವೀಣ್ ಎಂದು ಗುರುತಿಸಲಾಗಿದೆ.‌ ರಾಯಚೂರು ನಗರದ ಮಡ್ಡಿಪೇಟೆ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಯರಗೇರಾದಿಂದ ಬೈಕ್ ಸವಾರರು ರಾಯಚೂರು ಕಡೆ ಬರುವಾಗ, ರಾಯಚೂರಿನಿಂದ ಮಂತ್ರಾಲಯಕ್ಕೆ ಹೋಗುವಾಗ ಮಾರ್ಗಮಧ್ಯ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿ, ತನಿಖೆ ಮುಂದುವರೆಸಿದ್ದಾರೆ....
Local News

ಲಿಂಗತ್ವ ಅಲ್ಪಸಂಖ್ಯಾತರರಿಗೆ ವೈಯಕ್ತಿಕ ಜಾಬ್ ಕಾರ್ಡ್

ರಾಯಚೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರರಿಗೆ ವೈಯಕ್ತಿಕ ಜಾಬ್ ಕಾರ್ಡ್ ನೀಡುವ ಕುರಿತು ನಗರದ ಜಿಲ್ಲಾ ಪಂಚಾಯತ ಜಲಶಕ್ತಿ ಕೇಂದ್ರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮುಖಂಡರ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಐಇಸಿ ಸಂಯೋಜಕರು ವಿಶ್ವನಾಥ ಅವರು ಮಾತನಾಡಿ, ಮಂಗಳ ಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿಶೇಷ ಜಾಬ್ ಕಾರ್ಡ್ ವಿತರಿಸಲಾಗುತ್ತದೆ. ಮಂಗಳಮುಖಿಯರು ತಮ್ಮದೇ ಆದ ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು,ಸಾಮಾನ್ಯ ರೊಂದಿಗೆ ದುಡಿವ ಪರಿಪಾಠ ಕಡಿಮೆ, ಅವರಲ್ಲೂ ದುಡಿಯುವ ಇಚ್ಚಾಶಕ್ತಿ ಇರುತ್ತದೆ .ಅದನ್ನು ಗುರುತಿಸಿ ಅವರನ್ನೂ ಆರ್ಥಿಕವಾಗಿ ಸಬಲಗೊಳಿಸಲು ನರೇಗಾದಡಿ ಅವಕಾಶ ಇದೆ. ತೃತೀಯ ಲಿಂಗಗಳನ್ನು ಗುರುತಿಸಿ ಅವರಿಗೆ ವಿಶೇಷ ಜಾಬ್ ಕಾರ್ಡ್ ನೀಡುವಂತೆ ಮತ್ತು ನರೇಗಾ ಕೆಲಸಗಳಲ್ಲಿ ಅವರನ್ನೂ ಸಕ್ರಿಯಗೊಳಿಸಿಕೊಳ್ಳಲಾಗುತ್ತದೆ. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇರುವ ಮಂಗಳಮುಖಿಯರು ನರೇಗಾ ಯೋಜನೆಯಡಿ ಜಾಬ್ ಕಾರ್ಡ್...
Local News

ಉದ್ಯೋಗ ಮಿತ್ರ ಯೋಜನೆ : ಜಿಲ್ಲಾಧಿಕಾರಿಗಳ ಕ್ರಮ ಕಾನೂನುಬಾಹಿರವಾಗಿದೆ

ರಾಯಚೂರು : ಕರ್ನಾಟಕ ಉದ್ಯೋಗ ಮಿತ್ರ ಇಲಾಖೆಯಿಂದ ಕಾಲು ಎಕರೆ,ಅರ್ಧ ಎಕರೆ ಒಂದು ಎಕರೆ ಇಂಡಸ್ಟ್ರೀಯಲ್ ಜಮೀನನ್ನು ಅನುಮೋದನೆಗೊಳಿಸುತ್ತಿರುವ ಜಿಲ್ಲಾಧಿಕಾರಿಗಳ ಕ್ರಮ ಕಾನೂನುಬಾಹಿರವಾಗಿದ್ದು ಇದರಲ್ಲಿ ಅವ್ಯವಹಾರ ನಡೆದಿರುವಂತೆ ಕಾಣುತ್ತಿದ್ದು ಕೂಡಲೇ ಸಂಬಂಧಪಟ್ಟ ಸಚಿವರು ಕ್ರಮ ಜರುಗಿಸಬೇಕೆಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಷಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀ ರೆಡ್ಡಿ ಒತ್ತಾಯಿಸಿದರು. ಈ ವಿಚಾರವಾಗಿ ವಾಣಿಜ್ಯೋದ್ಯಮ ಸಂಘ ಧ್ವನಿ ಎತ್ತಬೇಕಾಗಿತ್ತು ಆದರೆ ಆ ಸಂಘ ಎಲ್ಲಿದೆಯೋ ಆ ಸಂಘದ ಸದಸ್ಯರಿಗೆ ಯಾವಾಗ ಬುದ್ದಿ ಕೊಡುತ್ತಾನೋ ಎಂದು ಟೀಕಿಸಿದ ಅವರು, ಇತ್ತೀಚಿಗೆ ನಮ್ಮ ಸಂಘದ ವತಿಯಿಂದ ಕೆಐಡಿಬಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಏಕಗವಾಕ್ಷಿ ಸಭೆಯಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಇಲಾಖೆಯಿಂದ ಹಂಚಿಕೆ ಮಾಡಿರುವ 1/4 ಎಕರೆ, 1/2 ಎಕರೆ ಹಾಗೂ 1 ಎಕರೆ ಇಂಡಸ್ಟ್ರೀಯಲ್ ಜಮೀನುಗಳಿಗೆ ನೀಡಿರುವ ಅನುಮೋದನೆ ರದ್ದುಪಡಿಸಿ ಎಸ್.ಸಿ/ಎಸ್.ಟಿ ಜನಾಂಗಕ್ಕೆ ಸಣ್ಣ ಉದ್ದಿಮೆದಾರರಿಗೆ ಹಂಚಿಕೆ ಮಾಡಬೇಕೆಂದು ಕೋರಿದ್ದೇವೆ ಎಂದು ಹೇಳಿದರು. ಸರ್ವೇ...
Local News

ಕರ್ನಾಟಕ ರಾಜ್ಯೋತ್ಸವ ಸಂಗೀತ ಕಾರ್ಯಕ್ರಮ

ರಾಯಚೂರು : ಎಟಿಎಂ ಸರ್ಕಲ್ ಹತ್ತಿರ ನಿಜಲಿಂಗಪ್ಪ ಕಾಲೋನಿ , ರಾಯಚೂರು ನಲ್ಲಿ ,ಮೋನಿಕಾ ನೃತ್ಯ ಕಲಾ ಸಂಸ್ಥೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ,ಇವರ ಸಂಯುಕ್ತ ಆಶ್ರಯದಲ್ಲಿ ,ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು, ಬಸವರಾಜ್ ಎಂ. ದೊರೆ ಅಧ್ಯಕ್ಷರು ಮಂದಾರ ಪತ್ತಿನ ಸಹಕಾರ ಬ್ಯಾಂಕ್ ನಿಜಲಿಂಗಪ್ಪ ಕಾಲೋನಿ ಇವರು ಉದ್ಘಾಟಿಸಿದರು ಇವರು ಮಾತನಾಡಿ ಮೋನಿಕ ನೃತ್ಯ ಕಲಾ ಸಂಸ್ಥೆ ಯವರು ಅನೇಕ ವೈವಿಧ್ಯಮಯ ನೃತ್ಯವನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಅದರ ಜೊತೆಗೆ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ .ಶಾಲಾ ಕಲಿಕೆಯ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ರಂಗಕಲೆಯನ್ನು ಸಹ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳಿಗೆ ಉಲ್ಲಾಸ ಉತ್ತೇಜನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು....
Local News

ಶಿವರಾಜ್ ಕುಮಾರ್ ಜೊತೆ ರಾಯರ ದರ್ಶನ ಪಡೆದ ವೇದ ಸಿನೆಮಾ ತಂಡ

ರಾಯಚೂರು : ಶಿವರಾಜ್ ಕುಮಾರ್ ಜೊತೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ವೇದ ಸಿನೆಮಾ ತಂಡ. https://youtu.be/kb-hdb73Gbo ರಾಯಚೂರು ನಗರದಲ್ಲಿ ಇಂದು ವೇದ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದ ಅಂಗವಾಗಿ ರಾಯಚೂರಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ವೇದ ಸಿನಿಮಾದ ತಂಡದ ಜೊತೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದರು. ಶಿವರಾಜ್ ಕುಮಾರ್ ಜೊತೆ ಗೀತಾ ಶಿವರಾಜ್, ಅರ್ಜುನ ಜನ್ಯ, ಅನುಶ್ರೀ, ಹರ್ಷ ಅವರು ಮಂಚಾಲಮ್ಮ ದೇವಿ ದರ್ಶನ ಪಡೆದ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಯರ ದರ್ಶನದ ಬಳಿಕ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಚಿತ್ರತಂಡ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ರಾಜ್ ಕುಟುಂಬ ಹಾಗೂ ರಾಯರ ಮಠದ ಅವಿನಭಾವ ಸಂಬಂಧದ ಬಗ್ಗೆ ಶಿವರಾಜ್ ಕುಮಾರ್ ಅವರಿಗೆ ತಿಳಿಸಿಕೊಟ್ಟರು. ವಿಲನ್...
Local News

ಲೇಡಿ ಪಿಎಸ್ಐ ವರ್ಸಸ್ ರೈತ : ಸಾರ್ವಜನಿಕರ ಅಸಮಾಧಾನ

ರಾಯಚೂರು : ರೈತ ಟ್ರ್ಯಾಕ್ಟರ್ ನಲ್ಲಿ ಹುಲ್ಲು ತುಂಬಿಕೊಂಡು ಸಾಗುತ್ತಿದ್ದಂತ ವೇಳೆಯಲ್ಲಿ, ಪೊಲೀಸ್ ಜೀಪ್ ಗೆ ಟಚ್ ಆಗಿದೆ. ಇಷ್ಟಕ್ಕೆ ಕಿರಿಕ್ ತೆಗೆದಂತ ಮಹಿಳಾ ಪಿಎಸ್‌ಐ, ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡು, ಪೊಲೀಸ್ ಠಾಣೆಗೆ ಕರೆದೊಯ್ದು ದರ್ಪ ಮೆರೆದಿರೋ ಆರೋಪ ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಹುಲ್ಲಿನ ಮೇವು ಲೋಡ್ ಮಾಡಿಕೊಂಡು ರೈತ ಲಿಂಗಯ್ಯ ಎಂಬುವರು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು. ಹೀಗೆ ತೆರಳುತ್ತಿದ್ದಂತ ಟ್ರ್ಯಾಕ್ಟರ್ ಪೊಲೀಸ್ ಜೀಪ್ ಗೆ ಡಿಕ್ಕಿಯಾಗಿದೆ. ಇಷ್ಟಕ್ಕೆ ಸಿರಿವಾರ ಠಾಣೆ ಮಹಿಳಾ ಪಿಎಸ್‌ಐ ಗೀತಾಂಜಲಿ ಎಂಬುವರು ರೈತನ ಮೇಲೆ ದರ್ಪ ಮೆರೆದಿರೋದಾಗಿ ಹೇಳಲಾಗುತ್ತಿದ್ದೆ. ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡಂತ ಸಿರವಾರ ಠಾಣೆಯ ಪಿಎಸ್‌ಐ ಗೀತಾಂಜಲಿಯನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಪಿಎಸ್‌ಐ ನಡುವೆ ಮಾತಿನ ಚಕಮಕಿ ಕೂಡ ಉಂಟಾಗಿದೆ. ಇದರಿಂದ ಕೋಪಗೊಂಡಂತ ಅವರು...
Local News

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಶು ಅಭಿವೃದ್ಧಿ ಯೋಜನೆ ಜಾರಿ

ರಾಯಚೂರು : ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ೦7 ತಾಲೂಕುಗಳಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಶಿಶು ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಲ್ಲಿ ಪ್ರಗತಿ ಸಾಧಿಸಲು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇಲಾಖೆಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿದ್ದು, ಯಾವುದೇ ಯೋಜನೆಯನ್ನು ಅನುಷ್ಟಾನಗೊಳಿಸಲು ಇಚ್ಛಾಶಕ್ತಿ ಅತ್ಯವಶ್ಯಕವಾಗಿದೆ ಎಂದರು. ಇಲಾಖೆಯ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಕಾರ್ಯಕ್ರಮಗಳಲ್ಲಿ...
1 43 44 45 46 47
Page 45 of 47