This is the title of the web page
This is the title of the web page
Local News

ಸದಾಶಿವ ಆಯೋಗ ವರದಿ ಆಗ್ರಹಿಸಿ ಡಿ.11 ಬೃಹತ್ ಸಮಾವೇಶ


ರಾಯಚೂರು : ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡ ಎಂ.ವಿರುಪಾಕ್ಷಿ ಹೇಳಿದರು.

ಎಸ್.ಸಿ/ಎಸ್.ಟಿ ಮೀಸಲಾತಿ ಹೆಚ್ಚಳ ವಿಷಯದಲ್ಲಿ ರಾಜ್ಯ ಬಿಜೆಪಿ ಸರಕಾರ ಮೂಗಿಗೆ ತುಪ್ಪ ಸವರಿದಿದೆ.ಒಳಮೀಸಲಾತಿ ವಿಚಾರವಾಗಿ ಮಾದಿಗ ದಂಡೋರ ಹಾಗೂ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ಹಲವು ಮಾದಿಗ ಸಂಘಟನೆಗಳು ಹಲವಾರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದೆ. ಈಗಾಗಲೇ ಮೀಸಲಾತಿಗೆ ಸಂಬಂಧಪಟ್ಟಂತೆ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಈಗ ನಾವು ಅಂತಿಮ ಹಂತದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಬೆಂಗಳೂರಿನ ಡಿ. 11 ರಂದು 4 ರಿಂದ 5 ಲಕ್ಷ ಜನ ಸೇರಿ ದೊಡ್ಡ ಸಮಾವೇಶ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಿದ್ದೇವೆ.

ಡಿ. 11 ರಿಂದ ಡಿ.31 ರವರೆಗೆ ಈ ಹೋರಾಟ ಜೀವಂತವಾಗಿರುತ್ತದೆ. ಬೆಳಗಾವಿ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ಜಾರಿ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಕಳುಹಿಸಿಕೊಡಬೇಕೆಂದು ಆಗ್ರಹಿಸಲಾಗುತ್ತದೆ ಎಂದರು. ರಾಯಚೂರು ನಗರದಿಂದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು 100 ಬಸ್‌ಗಳು ಅಪಾರ ಸಂಖ್ಯೆಯ ನಾಲ್ಕು ಚಕ್ರದ ವಾಹನಗಳು ಹಾಗೂ ಕೆಲವರು ಈಗಾಗಲೇ ರೈಲ್ವೆ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿದ್ದಾರೆ ಹೀಗೆ ಪ್ರಯಾಣಕ್ಕಾಗಿ ಅನುಕೂಲ ಮಾಡಿಕೊಂಡು 12 ರಿಂದ 13 ಸಾವಿರ ಜನ ತೆರಳಿದ್ದೇವೆ.

ಜೆಡಿಎಸ್. ಕಾಂಗ್ರೆಸ್. ಭಾರತೀಯ ಜನತಾಪಕ್ಷದಲ್ಲಿರುವ ಮಾದಿಗ ಜನಾಂಗದ ಮುಖಂಡರು ಈ ಬೃಹತ್ ಸಮಾವೇಶ ಯಶಸ್ವಿಗೆ ತನುಮನಧನದಿಂದ ಸೇವೆ ಸಲ್ಲಿಸಬೇಕೆಂದು ಮನವಿ ಮಾಡಿದರು.


[ays_poll id=3]