
K2 ಹೆಲ್ತ್ ಟಿಪ್ : ಮಳೆಗಾಲ ಆರಂಭವಾದರೆ ಸಾಕು ನಮ್ಮ ಆರೋಗ್ಯದಲ್ಲಿ ಏರುಪೇರು ಆರಂಭವಾಗುತ್ತದೆ. ಚಿಕ್ಕ ಚಿಕ್ಕ ಸೋಂಕುಗಳಿಂದ ನೆಗಡಿ, ಕೆಮ್ಮು ಮತ್ತು ಜ್ವರದ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಅಗತ್ಯವಾಗಿದ್ದು, ಅವುಗಳನ್ನು ಹೆಚ್ಚಿಸುವ ಆಹಾರದ ಕಡೆಗೆ ಗಮನ ಕೊಡುವುದು ಅಗತ್ಯವಾಗಿದೆ. ಅದರ ಜೊತೆಗೆ ಗಿಡಮೂಲಿಕೆಗಳಿಂದಲೂ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನಮ್ಮ ಮನೆಯ ಮುಂದೆ ಹಿತ್ತಲಲ್ಲಿ ಸಿಗುವ ತುಳಸಿ ಎಲೆಗಳೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಕೆಮ್ಮು ನೆಗಡಿ ಹಾಗೂ ಜ್ವರವನ್ನು ದೂರಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಆಗಾಗ ತುಳಸಿ ಎಲೆಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಅಮೃತಬಳ್ಳಿಗೆ ನಮ್ಮ ಆರೋಗ್ಯದ ಸ್ಥಿರತೆಯನ್ನು ಕಾಪಾಡುವಲ್ಲಿ ಮುಂದೆ ಇದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಆಂಟಿ ಮೈಕ್ರೋಬಿಯಲ್ ಗುಣವಿದೆ. ಇದು ದೇಹದಲ್ಲಿರುವ ವಿಷಗಳನ್ನು ಹೊರಹಾಕುತ್ತದೆ. ಮತ್ತು ಆರೋಗ್ಯ ಸ್ಥಿರತೆ ಕಾಪಾಡಲು ಈ ಒಂದು ಅಮೃತಬಳ್ಳಿಯ ಎಲೆಯನ್ನ ಸೇವಿಸಿ.
ತಂಪು ಹೆಚ್ಚಾಗುವುದರಿಂದ ಮಕ್ಕಳು ದೊಡ್ಡ ಬರಲಿ ಇಬ್ಬರಲ್ಲೂ ಕೆಮ್ಮು ಕಾಡುತ್ತದೆ. ಇದಕ್ಕೆ ಜೇಷ್ಠಮಧು ಸೇವನೆಯಿಂದ ಗಂಟಲು ನೋವು ಶೀತ ದೂರವಾಗುತ್ತದೆ. ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ರಾತ್ರಿ ವೇಳೆ ಕಾಡುವ ಕೆಮ್ಮಿನ ಸಮಸ್ಯೆಯಿಂದಲೂ ಮುಕ್ತಿ ಹೊಂದಬಹುದು.
![]() |
![]() |
![]() |
![]() |
![]() |
[ays_poll id=3]