ಪೆಟ್ರೋಲ್ ಬಂಕ್ ನಲ್ಲಿ 10 ರೂಪಾಯಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಪ್ರಕರಣ
ರಾಯಚೂರಿನ ಇಡಪನೂರು ಪೊಲೀಸರಿಂದ 6 ಜನ ಆರೋಪಿಗಳ ಬಂಧನ
ಹೊಡೆದಾಟದ ದೃಶ್ಯ ಪೆಟ್ರೋಲ್ ಬಂಕ್ ಸಿಸಿ ಕ್ಯಾಮೆರಾದಲ್ಲಿ ಸೆರೆ
ರಾಯಚೂರು ತಾಲೂಕಿನ ಹಂಚಿನಾಳ ಕ್ಯಾಂಪ್ ಬಳಿ ನಿನ್ನೆ ನಡೆದ ಕೊಲೆ ಪ್ರಕರಣ
ಜಗಳ ಬಿಡಿಸಲು ಹೋದ ಮೇಘನಾಥ್ (42) ಕೊಲೆಯಾದ ವ್ಯಕ್ತಿ
ಗಿಲ್ಲೆಸುಗೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೇಘನಾಥ್ ಕೊಲೆಯಾದ ವ್ಯಕ್ತಿ
ಮಹೇಶ್, ನಾಗರಾಜ್ ಎಂಬುವವರು ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಬಂಕ್‌ನ ಸಿಬ್ಬಂದಿ ಜೊತೆ ಜಗಳ
110 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು 100 ರೂಪಾಯಿ ಮಾತ್ರ ಕೊಟ್ಟಿದ್ದ ಮಹೇಶ್, ನಾಗರಾಜ್
ಬಾಕಿ 10 ರೂಪಾಯಿಗಾಗಿ ನಡೆದ ಜಗಳ ಕೊನೆಯಲ್ಲಿ ಅಂತ್ಯ
ದೊಣ್ಣೆಯಿಂದ ಹೊಡೆದ ಪೆಟ್ರೋಲ್ ಬಂಕ್ ಸಿಬ್ಬಂದಿ ಗಲಾಟೆ ಬಿಡಿಸಲು ಬಂದ ವ್ಯಕ್ತಿ ಕೊಲೆ
ರವಿ ,ವೀರೇಶ , ನರಸಿಂಹ , ಮಾರೆಪ್ಪ, ರಮೇಶ್,ಪ್ರವೀಣ ಬಂಧಿತ ಆರೋಪಿಗಳು
ಇಡಪನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣ