LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೆಯ ಹೊರಗಡೆ ಮಲಗಿದ್ದ ಮಹಿಳೆಗೆ ಸದ್ದಿಲ್ಲದೇ ಕಚ್ಚಿ ಹೋದ ಹಾವು..

 

https://youtu.be/qqdgFq9SoBk?si=Dzw5Dnyjw1EcgtXX

ಬೇಸಿಗೆ ಶಕೆ ಎಂದು ನೀವು ಹೊರಗಡೆ ಮಲಗ್ತೀರಾ? ಹಾಗಾದ್ರೆ ಹಾಗೆ ಮನೆಯ ಮುಂದೆ ಮಲಗುವ ಮುನ್ನ ಎಚ್ಚರ.. ಯಾಕಂದ್ರೆ ಇಲ್ಲೊಬ್ಬ ಮಹಿಳೆಗೆ ಮನೆ ಮುಂದೆ ನೆಮ್ಮದಿಯಾಗಿ ಮಲಗಿ ನಿದ್ರೆ ಮಾಡ್ತಿದ್ದಾಗ ಬೃಹತ್ ಗಾತ್ರದ ಹಾವೊಂದು ಬಂದು ಸದ್ದಿಲ್ಲದೇ ಕಚ್ಚಿ ಮಾಯವಾಗಿದೆ. ಹಾವು ಕಚ್ಚಿ ಹೋಗುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ರಾಯಚೂರು ಜಿಲ್ಲೆ ಹೇಳಿ ಕೇಳಿ ಮೊದಲೇ ಬಿಸಿಲೂರು. ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ ದಾಖಲಾಗುವ ಜಿಲ್ಲೆ. ಹೀಗಾಗಿ ಇಲ್ಲಿನ ಜನ ಮನೆಯೊಳಗೆ ಕೂತರೂ ಶಕೆ. ಹೊರಗಡೆ ಓಡಾಡಿದರೂ ಶಕೆ. ಹೀಗಾಗಿ ಜನ ರಾತ್ರಿಯಾದರೆ ಗಾಳಿ ಬಯಸಿ ಮನೆಯ ಹೊರಗಡೆ ಬಂದು ಮಲಗ್ತಾರೆ. ಹಾಗೆ ಸಿಂಧನೂರು ತಾಲ್ಲೂಕಿನ ಉಮಲೂಟಿ ಗ್ರಾಮದ ಯಲ್ಲಮ್ಮ ಎಂಬ ಮಹಿಳೆ ನಿನ್ನೆ ರಾತ್ರಿ ಊಟ ಮಾಡಿ ಮನೆಯ ಹೊರಗಡೆ ಬಂದು ಬೆಚ್ಚಗೆ ಮಲಗಿದಾಳೆ. ಸಮಯ ರಾತ್ರಿ 8:15 ನಿಮಿಷ ಆಗಿರಬಹುದು.‌ಕಪ್ಪೆಯನ್ನು ಅಟ್ಟಿಸಿಕೊಂಡು ಬಂದ ಬೃಹತ್ ಗಾತ್ರದ ಹಾವೊಂದು ವೇಗವಾಗಿ ಬಂದು ಮಲಗಿದ್ದ ಯಲ್ಲಮ್ಮಳ ಕಚ್ಚಿ ಹೋಗಿದೆ.

ಯಾವುದೋ ಹುಳವೊಂದು ಕಾಲಿಗೆ ಕಚ್ಚಿದೆ ಅನ್ನೋದು ಯಲ್ಲಮ್ಮಳ ಅರಿವಿಗೆ ಬಂದಿದೆ. ಆದ್ರೆ ಹಾವೇ ಕಚ್ಚಿದೆ ಅನ್ನೋದು ತತ್ ಕ್ಷಣಕ್ಕೆ ಯಲ್ಲಮ್ಮಳಿಗೆ ಗೊತ್ತಾಗಿಲ್ಲ. ಆದ್ರೆ ಹೀಗೆ ಏನೋ ನನ್ನ ಕಾಲಿಗೆ ಕಡಿದಿದೆ ಅಂತ ಮನೆಯವರಿಗೆ ತಿಳಿಸಿದಾಳೆ. ಆಗ ಮನೆಯವ್ರು ಸಿಸಿ ಕ್ಯಾಮರ ಚೆಕ್ ಮಾಡಿದಾಗ ಬೃಹತ್ ಗಾತ್ರದ ಹಾವೊಂದು ಯಲ್ಲಮ್ಮಳ ಕಾಲಿಗೆ ಕಚ್ಚಿರೋದು ಗೊತ್ತಾಗಿದೆ. ಕೂಡಲೇ ಯಲ್ಲಮ್ಮಳನ್ನು ಸಿಂಧನೂರು ಖಾಸಗೀ ಆಸ್ಪತ್ರೆಗೆ ದಾಖಲಿಸಿದಾರೆ. ಬೇಗ ಚಿಕಿತ್ಸೆ ದೊರೆತಿರೋದ್ರಿಂದ ಯಲ್ಲಮ್ಮ ಪ್ರಾಣಾಪಾಯದಿಂದ ಪಾರಾಗಿದಾಳೆ.

ಬೇಸಿಗೆ ಬೇಗೆ ರಾಯಚೂರಲ್ಲಿ ಏನೆಲ್ಲಾ ಅವಾಂತರಗಳಿಗೆ ಕಾರಣ ಆಗುತ್ತೆ ಅನ್ನೋದನ್ನ ನೋಡಿದ್ರಲ್ಲ. ಏನೇ ಆದರೂ ಗ್ರಾಮೀಣ ಭಾಗದಲ್ಲಿ ಮನೆಯ ಹೊರಗಡೆ ಮಲಗುವ ಜನ ಇಂತಹ ವಿಷಜಂತುಗಳ ವಿಚಾರದಲ್ಲಿ ಎಚ್ಚರ ವಹಿಸೋದು ಉತ್ತಮ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಸಯ್ಯದ್ ಯಾಸೀನ್ ವಿಧಿವಶಕೊಲೆ ಆರೋಪಿಗಳನ್ನು ಬಂಧಿಸಲು ಜು.13ರಂದು ದೇವದುರ್ಗದಲ್ಲಿ ರೈತ ಸಂಘದಿಂದ ಧರಣಿ ಸತ್ಯಾಗ್ರಹ..ಹಂಚಿನಾಳ ಪೆಟ್ರೊಲ್ ಬಂಕ್ ಕೊಲೆ ಪ್ರಕರಣ ರಾಯಚೂರು ಎಸ್ಪಿ ಅವರು ಹೇಳಿದ್ದಿಷ್ಟು..!ಹಂಚಿನಾಳ ಪೆಟ್ರೋಲ್ ಬಂಕ್ ನಲ್ಲಿ ಹಲ್ಲೆ ಕೊಲೆ..10 ರೂಪಾಯಿಗಾಗಿ ಮಾರಾಮಾರಿ : ಜಗಳ ಬಿಡಸಲು ಹೋದವನನ್ನೆ ಕೊಂದರುಕುಡಿದ ಮತ್ತಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಚುಡಾಯಿಸಿದ ಚಾಲಕ..7 ತಂಡಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಇದೇ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ..ಬೆಳ್ಳಂ ಬೆಳಗ್ಗೆ ರಾಯಚೂರು ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..ವಿವಿಧಿ ಯೋಜನೆಗೆ ಆಗ್ರಹಿಸಿ ಜುಲೈ 4ರಂದು ಕವಿತಾಳದಲ್ಲಿ ಸಂಕಲ್ಪ ಸಮಾಗಮಎಸ್ ಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ..