ರಾಯಚೂರು : ಸಮಗ್ರ ನೀರಾವರಿ ಹಾಗೂ ನವಲಿ ಜಲಾಶಯ ನಿರ್ಮಾಣ, ತಿಂಥಣಿ ಬ್ರಿಜ್ ಬಳಿ ಜಲಾಶಯ ನಿರ್ಮಾಣ ಹಾಗೂ ರಾಯಚೂರು ಜಿಲ್ಲೆಯ ಸಾರ್ವಜನಿಕರ ಒತ್ತಾಯವಾಗಿರುವ ಏಮ್ಸ್ ಮಂಜೂರಾತಿಗಾಗಿ ಕೆ ಎಸ್ ಎನ್ ರವರ 49ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ಸಂಕಲ್ಪ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಮ್ಮಾರೆಡ್ಡಿ ಗೌಡ ಬೋಗಾವತಿ ಹೇಳಿದರು.
ರಾಯಚೂರು ನಗರದಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, 2009 ರಿಂದ ಕೆ ಎಸ್ ಎನ್ ಜನ ಕಲ್ಯಾಣ ಸಮಿತಿ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ನಮ್ಮ ಸಮಿತಿ ವತಿಯಿಂದ ಜುಲೈ 14ರಂದು ನಾಲ್ಕು ಜಿಲ್ಲೆಯ ರೈತರ ಬಹುದಿನಗಳ ಕನಸಾಗಿರುವ ಜುಲೈ 14ರಂದು ಸಂಜೆ 4 ಗಂಟೆಗೆ ಕವಿತಾಳ ಪಟ್ಟಣದ ಮಸ್ಕಿ, ಕ್ರಾಸ್ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಪ್ಪಳ ರಾಯಚೂರು ಯಾದಗಿರಿ, ಗುಲ್ಬರ್ಗ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ, ಜಾರಿಯಾಗಬೇಕಾದ ಅನಿವಾರ್ಯತೆ ಇದೆ ಹಾಗಾಗಿ ನವಲಿ ಜಲಾಶಯ ನಿರ್ಮಾಣ ಆಗಬೇಕು, ಅದರಿಂದ ಕೊಪ್ಪಳ ರಾಯಚೂರು ಜಿಲ್ಲೆಗೆ ಉಪಯೋಗವಾಗಲಿದ್ದು ತಿಂಥಣಿ ಬ್ರಿಜ್ ಬಳಿ ಜಲಾಶಯ ಆದರೆ ಯಾದಗಿರಿ ಕಲಬುರ್ಗಿ ರಾಯಚೂರು ಜಿಲ್ಲೆಗೂ ಉಪಯೋಗವಾಗಲಿದ್ದು ಹಾಗಾಗಿ ಮುಖ್ಯವಾಗಿ ಈ ಎರಡು ಜಲಾಶಯಗಳು ನಿರ್ಮಾಣ ಆಗಬೇಕು ಹಾಗೂ ಹಿಂದುಳಿದಿರುವ ನಮ್ಮ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರಾತಿ ಕಾರ್ಯಕ್ರಮದ ಮೂಲಕ ಸರಕಾರವನ್ನು ಆಗ್ರಹಿಸಲಾಗುವುದು.
ನವಲಿ ಜಲಾಶಯ ನಿರ್ಮಾಣಕ್ಕೆ ಹಾಗೂ ತಿಂಥಣಿ ಬ್ರಿಜ್ ಬಳಿ ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಹಾಗೂ ಏಮ್ಸ್ ಮಂಜೂರಾತಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಇದು ಪಕ್ಷಾತೀತವಾಗಿ ಮಾಡುತ್ತಿರುವ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮವನ್ನು ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಅವಧೂತ ವಿನಯ ಗುರೂಜಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ತುರವಿಹಾಳದ ಅಮೋಘಸಿದ್ಧೇಶ್ವರ ಮಠದ ಶ್ರೀ ಮಾದಯ್ಯ ಗುರುವಿನ್ ವಹಿಸಿಕೊಳ್ಳಲಿದ್ದಾರೆ ಘನ ಉಪಸ್ಥಿತಿಯಲ್ಲಿ ಕವಿತಾಳ ಕಲ್ಮಟ ಮಹಾಸ್ವಾಮಿಗಳಾದ ಮ. ನಿ.ಪ್‌ರ ಅಭಿನವ ಸಿದ್ಧಲಿಂಗ ಸ್ವಾಮಿಗಳು ಹಾಗೂ ಮುಂಡರಗಿಯ ಶಿವಣ್ಣ ತಾತನವರು ವಹಿಸಿಕೊಳ್ಳಲಿದ್ದಾರೆ. ರಾಯಚೂರು ಜಿಲ್ಲೆ ಸೇರಿದಂತೆ ಯಾದಗಿರಿ, ಕೊಪ್ಪಳ ಗುಲ್ಬರ್ಗದಿಂದ ಕೂಡ ಅನೇಕರು ಆಗಮಿಸುತ್ತಿದ್ದು ಸುಮಾರು 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಈ ಪತ್ರಿಕಾಗೋಷ್ಠಿಯಲ್ಲಿ ಕೆ ಎಸ್ ಎನ್ ಜನ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತಿಮ್ಮರೆಡ್ಡಿ ಗೌಡ ಬೋಗವತಿ,ಮಲ್ಲನಗೌಡ ನಕ್ಕುಂದಿ,ಉಮಕಾಂತ ಸಾಹುಕಾರ್ ಸೀಕಲ್,ನರಸಿಂಹರಾವ್ ಕುಲಕರ್ಣಿ.ಮಲ್ಲಿಕಾರ್ಜುನ ಜಕ್ಕಲದಿನ್ನಿ,ಉಮೇಶ್ ಸಾಹುಕಾರ್.ಜೇಗರಕಲ್,ವೀರನಗೌಡ ಗಣದಿನ್ನಿ,ರಾಜಗೋಪಾಲ್ ನಾಯಕ್ ಕುರುಕುಂದ,ವಿನಯ್ ಕುಮಾರ್ ಸಿರವಾರ,ನಾಗರಾಜ್ ಗೌಡ ಮಾಲಿ ಪಾಟೀಲ,ಮೌಲಾಸಾಬ ಗಣದಿನ್ನಿ,ಪರ್ವತಪ್ಪ ಸಾಹುಕಾರ ಕಲ್ಲೂರು, ಮಹೇಶ್ ಕಲ್ಲೂರು, ಪಂಪನಗೌಡ ಶಾಖಾಪುರ್.ಬಸವರಾಜ ಅತ್ತನೂರು. ಮಲ್ಲಿಕಾರ್ಜುನ್ ಗೌಡ, ಅಮರಯ್ಯ ಸ್ವಾಮಿ.ವೀರೇಶ್ ನಾಯಕ್,ಬೆಟ್ಟದೂರ,ನಾಗಲಿಂಗಯ್ಯ ಸ್ವಾಮಿ,ಕೆ ಎಸ್ ಎನ್ ಸಮಿತಿಯ ದೇವದುರ್ಗ ತಾಲೂಕು ಅಧ್ಯಕ್ಷರು ಜಾಹಿರ್ ಪಾಷಾ ಇಡಪನೂರು, ಶರಣಪ್ಪ ಸಾಹುಕಾರ್ ಹೆಗ್ಗಡದಿನ್ನಿ,ಶರಣಬಸವ ನಾಯಕ್ ಜಾನೇಕಲ್,ಬಸವರಾಜ ನಕ್ಕುಂದಿ,ರಾಹುಲ್ ಕಲ್ಲಂಗರ,ನವೀನ್ ಕುಮಾರ್.ಚಂದ್ರಶೇಖರ್ ನಾಯಕ,ಮಾಳಿಂಗರಾಯ ಪಾತಾಪುರ ಉಪಸ್ಥಿತರಿದ್ದರು.