This is the title of the web page
This is the title of the web page
Local NewsSports News

ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ


ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನಿಂದ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪತ್ರಕರ್ತರು, ಪೋಲೀಸ್, ಕಂದಾಯ ಇಲಾಖೆ ತಂಡಗಳ ನಡುವೆ ಭಾನುವಾರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಈ ವೇಳೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಸದಾ ಕೆಲಸದಲ್ಲಿ ತೊಡಗಿರುವ ಪತ್ರಕರ್ತರು, ಪೊಲೀಸರು, ಆಡಳಿತ ವಿಭಾಗ ಇಂದು ಸೌಹಾರ್ದ ಕ್ರೀಡಾಕೂಟ ಆಡುತ್ತಿರುವುದು ಸಂತೋಷ. ಎಲ್ಲರೂ ಕ್ರೀಡಾಭಾವನೆಯಿಂದ ಸ್ಪರ್ಧಾತ್ಮಕವಾಗಿ, ಗೆಲುವಿಗಾಗಿ ಆಡಿ. ಒಟ್ಟಿಗೆ ಸಡೆರಿ ಆಡುವ ಸಂದರ್ಭದಲ್ಲಿ ಕಲಿಯುವುದು ಇರುತ್ತದೆ ಹಾಗಾಗಿ ಎಲ್ಲರೂ ಉತ್ತಮವಾಗಿ ಆಡಿ ಎಂದು ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ವರ್ಷದಲ್ಲಿ ಮಾತ್ರ ನಾವು ಒಟ್ಟಿಗೆ ಸೇರುತ್ತೇವೆ. ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತೀರಿ. ಬೈಕ್ ಮೇಲೆ ಓಡಾಡುವಾಗ ಹೆಲ್ಮೆಟ್ ಧರಿಸಿ ಓಡಾಡಿ ಎಂದು ಸಲಹೆ ನೀಡಿ ಮೂರು ತಂಡಗಳಿಗೆ ಶುಭಹಾರೈಸಿದರು.

ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ರಿಪೋರ್ಟರ್ಸ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ಮತ್ತು ಪಾಷ ಹಟ್ಟಿ, ಪತ್ರಕರ್ತರಾದ ಬಿ.ವೆಂಕಟಸಿಂಗ್, ಬಸವರಾಜ ನಾಗಡದಿನ್ನಿ ಉಪಸ್ಥಿತರಿದ್ದರು.


[ays_poll id=3]