![]() |
![]() |
![]() |
![]() |
![]() |
K2 ಹೆಲ್ತ್ ಟಿಪ್ : ಬೆಲ್ಲವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಗುಣಗಳನ್ನು ಹೊಂದಿದ್ದು ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು ಅನೇಕ ಜೀವಸತ್ವಗಳಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿ ಊಟದ ನಂತರ ಬೆಲ್ಲವನ್ನು ತಿನ್ನುವುದು ಹೆಚ್ಚು ಒಳ್ಳೆಯದು. ನಮ್ಮ ಪೂರ್ವಜರು ಇದೆ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದರು.
ಹೌದು ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಬೆಲ್ಲವು ಕ್ಯಾಲ್ಸಿಯಂ ಮತ್ತು ರಂಜಕದಂತಹ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಮೂಳೆಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಬೆಲ್ಲವು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದು ಗ್ಯಾಸ್, ಉಬ್ಬುವುದು, ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಅಲ್ಲದೆ, ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಅಷ್ಟಕ್ಕೆ ಸೀಮಿತವಾಗದ ಬೆಲ್ಲದ ಮಹಿಮೆ ಊಟದ ನಂತರ ಬೆಲ್ಲ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಲ್ಲವು ರಕ್ತದೊತ್ತಡ ರೋಗಿಗಳಿಗೆ ಔಷಧವಾಗಿದೆ. ಬೆಲ್ಲವನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ನಿತ್ಯವೂ ಬೆಲ್ಲ ತಿನ್ನುವುದರಿಂದ ದೇಹದಲ್ಲಿ ರಕ್ತಹೀನತೆ ಉಂಟಾಗುವುದಿಲ್ಲ. ರಕ್ತಹೀನತೆ ಇರುವವರಿಗೆ ಬೆಲ್ಲ ತಿನ್ನುವುದು ತುಂಬಾ ಪ್ರಯೋಜನಕಾರಿ. ಬೆಲ್ಲವು ಕಬ್ಬಿಣ ಮತ್ತು ರಂಜಕದಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತ ಕಡಿಮೆ ಇರುವವರು ಬೆಲ್ಲವನ್ನು ಖಂಡಿತಾ ತಿನ್ನಬಹುದು. ಪ್ರತಿನಿತ್ಯ ಬೆಲ್ಲ ತಿನ್ನುವ ಅಭ್ಯಾಸ ಮಾಡಿಕೊಂಡರೇ ಇಷ್ಟೆಎ ಲಾಭಗಳು ನಿಮಗೆ ದೊರೆಯಲಿದೆ.
![]() |
![]() |
![]() |
![]() |
![]() |
[ays_poll id=3]