This is the title of the web page
This is the title of the web page
Crime NewsState News

ಎನರ್ಜಿ ಡ್ರಿಂಕ್‌ ಕುಡಿದ ಯುವಕ ಆಸ್ಪತ್ರೆ ಪಾಲು : ನೀವು ಕುಡೀತಿದ್ರೆ ಎಚ್ಚರ..!


K2kannadanews.in

Energy Drink : ಪೇಯ ರೆಡ್ ಬುಲ್ ಎನರ್ಜಿ ಡ್ರಿಂಕ್ (Redbull Energy Drink) ಸೇವಿಸಿದ ಯುವಕನೊಬ್ಬ ಅಸ್ವಸ್ಥನಾಗಿ ಆಸ್ಪತ್ರೆ ಪಾಲಾಗಿ, ಚಿಕಿತ್ಸೆ(Young Man Hospitalized) ಚಿಕಿತ್ಸೆ ಪಡೆಯುತ್ತಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ.

ಕೊಡಗು ಜಿಲ್ಲೆಯ (Kodagu) ಮಡಿಕೇರಿಯಲ್ಲಿ ಘಟನೆ ಜರುಗಿದೆ. ಜನರಲ್ ತಿಮ್ಮಯ್ಯ ವೃತ್ತದ (General Thimmaiah Circle) ಸಮೀಪ ಇರುವ ಅಂಗಡಿಯಲ್ಲಿ ಜೋತಿ ನಗರದ ವಿನೋದ್ ಎಂಬವರು ಖ್ಯಾತ ಎನರ್ಜಿ ಡ್ರಿಂಕ್ ರೆಡ್ ಬುಲ್ (red bull) ಖರೀದಿ ಮಾಡಿ ಕುಡಿದಿದ್ದಾರೆ. ಕೂಡಲೇ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಾಂತಿ ಶುರುವಾಗಿದೆ. ಹೀಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎನರ್ಜಿ ಡ್ರಿಂಕ್ ಟಿನ್ ತೆರೆಯುತ್ತಿದ್ದಂತೆ ಕೆಟ್ಟ ವಾಸನೆ ಬಂದಿದ್ದು, ಅದನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಕುದಿಯುತ್ತಿದ್ದಂತೆ ಲೋಳೆಯಂಥ ವಸ್ತು ಪತ್ತೆಯಾಗಿತ್ತು ಎನ್ನಲಾಗಿದೆ. ವಿನೋದ್ ಕುಡಿದಿರುವ ರೆಡ್‌ ಬುಲ್‌ ಟಿನ್ ನ ಎಕ್ಸ್‌ ಪೈಯರಿ ಡೇಟ್ ಮುಗಿದಿಲ್ಲ. ಆದರೆ ಟಿನ್ ಒಳಗೆ ಮಾತ್ರ ಫಂಗಸ್ ನಂತಹ ಗಟ್ಟಿ ವಸ್ತು ಕಂಡು ಬಂದಿದೆ. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಲಾಗಿದೆ. ಎನರ್ಜಿ ಡಿಂಕ್ ನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ವರದಿ ಬಂದ ಬಳಿಕ ಕಾರಣ ಏನೆಂಬುದು ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


[ays_poll id=3]