This is the title of the web page
This is the title of the web page
Local News

ಬದುಕಿದ್ದ ಮಹಿಳೆ ಸತ್ತಂತೆ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ


ರಾಯಚೂರು : ಬದುಕಿದ್ದ ಮಹಿಳೆ ಸತ್ತಿದ್ದಾಳೆ ಎಂದು ನಕಲಿ ದಾಖಲೆ ಸೃಷ್ಟಿಸಿ 6 ಎಕರೆ ಜಮೀನು ಕಬಳಿಸಲಾಗಿದೆ. ಅಚ್ಚರಿಯೆಂದರೆ ತಹಶಿಲ್ದಾರ್ ಕಚೇರಿಯ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಠಿಸಿ ಭೂಮಿಯನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾಯಚೂರು ತಾಲ್ಲೂಕಿನ ಪೋತಗಲ್ ಗ್ರಾಮದ ಸರ್ವೆ ನಂ.172/3ರ, 6 ಎಕರೆ ಜಮೀನು ಗ್ರಾಮದ ಗೋವಿಂದಪ್ಪ ಎನ್ನುವವರ ಹೇಸರಿನಲ್ಲಿತ್ತು, ಅವರ ಮರಣದ ನಂತರ ಪತ್ನಿ ಸುಶೀಲಮ್ಮ ಅವರ ಹೆಸರಿಗೆ ನೊಂದಾಣಿಯಾಗಿತ್ತು. ಕಳೆದ 15 ವರ್ಷಗಳಿಂದ ಭೂಮಿ ಇದೆ, ಆದರೆ ಸುಶೀಲಮ್ಮ ಮೃತಪಟ್ಟಿದ್ದಾರೆ, ಅವರಿಗೆ ಮಕ್ಕಳಿಲ್ಲವೆಂದು ತಹಶಿಲ್ದಾರ್ ಕಚೇರಿಯ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ದಾಖಲೆ ಸೃಷ್ಟಿಸಿ ಎಸ್‌.ಕೆ ನಾಗಿರೆಡ್ಡಿ ಎಂಬುವರ ಹೆಸರಿಗೆ ನೊಂದಾಣಿ ಮಾಡಿದ್ದಾರೆ. ತಮ್ಮ ಆಸ್ತಿ ಅಕ್ರಮವಾಗಿ ಮಾರಾಟ ಆಗಿರುವ ಮಾಹಿತಿ ತಿಳಿದು, ಸುಶೀಲಮ್ಮ ತಮ್ಮ ಮಕ್ಕಳೊಂದಿಗೆ ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದಾರೆ, ಸುಶೀಲಮ್ಮ(68) ಅವರು ಬದುಕಿದ್ದು, ಅವರಿಗೆ ಮಕ್ಕಳಿದ್ದಾರೆ, ಆದರೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನು ಕಬಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ, ಇದರ ಹಿಂದೆ ಬ್ರೋಕರ್‌ಗಳ ಕೈವಾಡವಿದೆ ಎಂದು ಆರೋಪಿ ಸಲಾಗಿದೆ.


[ays_poll id=3]