This is the title of the web page
This is the title of the web page
Local News

ಗ್ಯಾರೆಂಟಿ ಯೋಜನೆಗೆ SC/ST ಅನುದಾನ ಬಳಸಿದರೆ ಹೋರಾಟದ ಎಚ್ಚರಿಕೆ


ರಾಯಚೂರು : ಎಸ್.ಸಿ./ಎಸ್.ಟಿ. ಕಲ್ಯಾಣಕ್ಕಾಗಿ ಮೀಸಲಿಟ್ಟ 11,000 ಕೋಟಿ.ಅನುದಾನವನ್ನು ಕಾಂಗ್ರೇಸ್ ಪಕ್ಷದ 5-ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳಬಾರದೆಂದು ಸರ್ಕಾರಕ್ಕೆ ಬಳಸಿಕೊಳ್ಳುತ್ತೇವೆ ಎಂಬ ಹೇಳಿಕೆಯನ್ನು ಮುಖ್ಯಮಂತ್ರಿಗಳು ಹಿಂಪಡೆಯಬೇಕು ಎಂದು ಬಹುಜನ ದಲಿತ ಸಂಘರ್ಷದ ಜಿಲ್ಲಾಧ್ಯಕ್ಷರು ನರಸಿಂಹ ಗಧಾರ ಆಗ್ರಹಿಸಿದರು.

2023-24ನೇ ಸಾಲಿನ ಅನುದಾನದಲ್ಲಿ ಇಲಾಖಾವಾರು ಎಸ್.ಸಿ. ಎಸ್.ಪಿ-ಟಿ. ಎಸ್.ಪಿ.ಗೆ ಹಂಚಿಕೆ ಮಾಡಲಾದ ಅನುದಾನದಲ್ಲಿ ವಿವಿಧ ಇಲಾಖೆಗಳ ಮೂಲಕ ಎಸ್.ಸಿ. / ಎಸ್‌.ಟಿ. ಕಲ್ಯಾಣಕ್ಕಾಗಿ ಮೀಸಲಿಟ್ಟ ಸುಮಾರು 11,000/-ಕೋಟಿ ರೂಪಾಯಿಗಳ ಅನುದಾನವನ್ನು ಗ್ಯಾರಂಟಿಗಳಿಗಾಗಿ ಅದೂ ಕೂಡ ಎಸ್.ಸಿ./ಎಸ್.ಟಿ. ಅವರಿಗೆ ಅನ್ವಯಿಸುವಂತೆ ಬಳಕೆ ಮಾಡಲಾಗುತ್ತದೆಂದು ಹೇಳಿ ಉಳಿದ ಕಲ್ಯಾಣ ಕಾರ್ಯಕ್ರಮಗಳನ್ನು ಕುಂಠಿತಗೊಳಿಸುವುದು ಹಾಗೂ ಅನುದಾನವನ್ನು ಕಡಿತಗೊಳಿಸುವುದು ಮತ್ತು ರದ್ದುಪಡಿಸುವುದು ಒಳ್ಳೆಯ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರಶ್ನೆ ಮಾಡಬೇಕಾದ ಎಸ್.ಸಿ./ಎಸ್.ಟಿ.ಸಮುದಾಯದ ಶಾಸಕರು/ಸಚಿವರು ಮೌನಕ್ಕೆ ಶರಣಾಗಿರುವುದು ಅತ್ಯಂತ ನಾಚಿಕೆಗೇಡಿನ ನಡೆಯಾಗಿದೆ.‌ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ. ಮಹಾದೇವಪ್ಪನವರು, ಎಸ್.ಸಿ./ಎಸ್.ಟಿ.ಕಲ್ಯಾಣಕ್ಕಾಗಿ ಮೀಸಲಿಟ್ಟ ರೂ.11,000 ಕೋಟಿಗಳ (ಎಸ್.ಸಿ-ರೂ.7,570 ಕೋಟಿ, ಎಸ್.ಟಿ-ರೂ.3.430 ಕೋಟಿ) ಅನುದಾನವನ್ನು ಕಾಂಗ್ರೇಸ್ ಪಕ್ಷದ ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳಲು ಮಾಡಿದ ಈ ನಿರ್ಧಾರವನ್ನು ತಕ್ಷಣವೇ ಕೈಬಿಟ್ಟು ಉಳಿದ ಸಂಪನ್ಮೂಲಗಳ ಮೂಲಕ ಗ್ಯಾರಂಟಿಗಳಿಗಾಗಿ ಅನುದಾನವನ್ನು ಕ್ರೋಡೀಕರಿಸಿ ಬೆಳೆಸಿಕೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.


[ays_poll id=3]