
K2 ಟೆಕ್ ನ್ಯೂಸ್ : ಸದ್ಯ ಜಗತ್ತಿನಲ್ಲಿ ವಾಟ್ಸಪ್ ಅಂದ್ರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ಮೆಸೆಂಜರ್ ಆಗಿ ಮಾರ್ಪಟ್ಟಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವಂತಹ ಒಂದು ಮೆಸೆಂಜರ್ ವಾಟ್ಸಾಪ್. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಫೀಚರ್ಗಳನ್ನು ನೀಡುವ ಮುಖಾಂತರ ಮತ್ತಷ್ಟು ಜನರಿಗೆ ಹತ್ತಿರವಾಗಿತ್ತು. ಇವುಗಳ ಜೊತೆಗೆ ಮತ್ತೊಂದು ಹೊಸ ಫೀಚರ್ ಅನ್ನ ನೀಡಿದೆ.
ಮೆಸೇಜ್ ಎಡಿಟ್, ಚಾಟ್ ಲಾಕ್ ನಂತಹ ಫೀಚರ್ ಗಳನ್ನು ಪರಿಚಯಿಸಿರುವ ವಾಟ್ಸಾಪ್ ಸದ್ಯದಲ್ಲೇ ಮತ್ತೊಂದು ಹೊಸ ಆಯ್ಕೆ ಪರಿಚಯಿಸಲಿದೆ. ಜೂಮ್, ಗೂಗಲ್ ಮೀಟ್‌ನಂತೆ ವಿಡಿಯೋ ಕರೆಯಲ್ಲಿ ಸ್ಟೀನ್ ಹಂಚಿಕೆ ಆಯ್ಕೆಯನ್ನು ತರುತ್ತಿದೆ. ಇದು ಪ್ರಸ್ತುತ ಬೀಟಾ ಬಳಕೆದಾರರಿಗೆ ಲಭ್ಯವಿದ್ದು, ಶೀಘ್ರ ಎಲ್ಲರಿಗೂ ಲಭ್ಯಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ಈ ಫೀಚರ್ ಸ್ಕ್ರೀನ್ ಕೆಳಭಾಗದಲ್ಲಿ ಹೊಸ ಶೇರ್ ಬಟನ್ ಬರುತ್ತದೆ. ನಿಮ್ಮ ಸ್ಕ್ರೀನ್ ಅನ್ನು ಇತರರೊಂದಿಗೆ ಹಂಚಿಕೊಳ್ಳಲು ಇದನ್ನು ಕ್ಲಿಕ್ ಮಾಡಬೇಕು.
![]() |
![]() |
![]() |
![]() |
![]() |
[ays_poll id=3]