This is the title of the web page
This is the title of the web page
State News

ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್ : ಮುಖ್ಯ ಶಿಕ್ಷಕಿ ಮೇಲೆ ದೂರು


K2kannadanews.in

School News : ರಾಜ್ಯದ ಯಾವುದೇ ಶಾಲೆಗಳಲ್ಲಿ(School) ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸುವಂತೆ (Toilet Cleaning) ಇಲ್ಲ ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು (Direction) ಬಿಡುಗಡೆ ಮಾಡಿದ್ದರೂ ಮತ್ತೊಂದು ಪ್ರಕರಣ (Case) ಈಗ ಬೆಳಕಿಗೆ ಬಂದಿದ್ದು, ಸರಕಾರದ ಆದೇಶಕ್ಕೆ ಕಿಮ್ಮತ್ತೆ (No value) ಇಲ್ಲದಂತಾಗಿದೆ.

ಕಲಬುರಗಿಯಲ್ಲಿ ಖಾಸಗಿ ಶಾಲೆ (Kalaburagi Private School) ಮುಖ್ಯ ಶಿಕ್ಷಕಿಯೊಬ್ಬರು (headmistress) ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲಿನಿಂಗ್‌ ಹಾಗೂ ಕಸ ಗುಡಿಸಲು ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಶಾಲೆಯಲ್ಲಿ ಅಷ್ಟೆ ಅಲ್ಲದೆ, ಈ ಮುಖ್ಯ ಶಿಕ್ಷಕಿಯು ತನ್ನ ಮನೆಯಲ್ಲೂ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ದೂರು ದಾಖಲಾಗಿದೆ. ಕಲಬುರಗಿಯ ಮೌಲಾನಾ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.

ಮೌಲಾನ್ ಆಜಾದ್ (Molan Azad) ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ (English mediam school) ಮುಖ್ಯ ಶಿಕ್ಷಕಿ ಜೋಹರಾ ವಿರುದ್ಧ ಈ ಗಂಭಿರ ಆರೋಪ ಕೇಳಿಬಂದಿದೆ. ಕಲಬುರಗಿ (Klaburgi) ಹೊರವಲಯದ ಮಾಲಗತ್ತಿ ರೋಡ್‌ನ ಸೋನಿಯಾ ಗಾಂಧಿ (Soniya gandhi) ಕ್ವಾಟರ್ಸ್ ಬಳಿ ಈ ಶಾಲೆ ಇದೆ. 8ನೇ ತರಗತಿಯ ವಿದ್ಯಾರ್ಥಿ ಮಹಮದ್ ಪೈಜಾನ್‌ನಿಂದ ಈ ಕೆಲಸವನ್ನು ಅವರು ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಮಹಮ್ಮದ್ ಫೈಜನ್ ಜತೆ ಹಲವು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿ ಈ ಕೆಲಸವನ್ನು ಹೇಳಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ದೂರಿದ್ದಾರೆ. ಕಳೆದ ಹಲವು ದಿನಗಳಿಂದ ಶಾಲೆ ಮತ್ತು ಮನೆಯ ಕೆಲಸವನ್ನು ಇವರು ಮಾಡಿಸುತ್ತಿರುವುದಾಗಿ ಆರೋಪ ಮಾಡಿದ್ದಾರೆ. ಶನಿವಾರ ಶಾಲೆ ಬಿಟ್ಟ ಮೇಲೆ ಮಗ ಮನೆಗೆ ಬಾರದೆ ಇದ್ದಾಗ ಗಾಬರಿಗೊಂಡ ಮಹಮ್ಮದ್ ಫೈಜನ್‌ ತಂದೆ ಮಹಮ್ಮದ್ ಜಮೀರ್ ಮಗನ ಬಗ್ಗೆ ವಿಚಾರಿಸಲು ಶಾಲೆಗೆ ತೆರಳಿದ್ದಾರೆ.


[ays_poll id=3]