This is the title of the web page
This is the title of the web page
Crime NewsState News

ರಾಯಚೂರು ಆಯ್ತು, ಬಳ್ಳಾರಿಯಲ್ಲಿ 3640 ಗಾಂಜಾ ಚಾಕ್ಲೇಟ್ ವಶ..?


K2kannadanews.in

Crime news : ಅಪ್ರಾಪ್ತ ಮಕ್ಕಳನ್ನೇ ಟಾರ್ಗೆಟ್ ಮಾಡಿ ರಾಯಚೂರು ನಗರ ಮತ್ತು ಗ್ರಾಮಾಂತರ (Urban & rural) ಭಾಗದ ಹಲವು ಕಡೆ ಗಾಂಜಾ ಮಿಶ್ರಿತ ಚಾಕಲೇಟ್ (tobacco chocolate)ಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಮಾಸುವ ಮುನ್ನವೇ ಬಳ್ಳಾರಿಯಲ್ಲಿ (ballary) 3640 ಗಾಂಜಾ ಚಾಕ್ಲೇಟ್ ಸೀಜ್ ಮಾಡುವ ಮೂಲಕ ಆತಂಕ ಹೆಚ್ಚಿಸಿದೆ.

ಹೌದು ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ ಇದೆ ಒಂದು ಗಾಂಜಾ ಚಾಕ್ಲೇಟ್ ಭಾರಿ ಸದ್ದು ಮಾಡಿತ್ತು. ಇದೀಗ ಬಳ್ಳಾರಿಯಲ್ಲಿ ಇವತ್ತು ಗಾಂಜಾ ಚಾಕ್ಲೇಟ್ ದಾಳಿಯಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ. ಮತ್ಯಾವ ಜಿಲ್ಲೆಗಳಿಗೆ ಈ ಗಾಂಜಾ ಚಾಕ್ಲೆಟ್ ಹಬ್ಬಿದೆ ಎಂಬ ಭಯ ಕಾಡುತ್ತಿದೆ. ಸಂಡೂರು (sanduru) ತಾಲ್ಲೂಕಿನ ವಡ್ಡು ಗ್ರಾಮದ ಮುಖ್ಯರಸ್ತೆಯಲ್ಲಿರುವ ಪುನೀತ್‌ ಕುಮಾರ್‌ (punit) ಈತನಿಗೆ ಸೇರಿದ ಪಾನ್‌ ಶಾಪ್‌ನಲ್ಲಿ (pan shop) ಗಾಂಜಾ ಮಿಶ್ರಿತ ಚಾಕ್ಲೇಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ 3640 (19.050 ಕೆ.ಜಿ) ಗಾಂಜಾ ಮಿಶ್ರಿತ ಚಾಕ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಉತ್ತರ ಪ್ರದೇಶ ರಾಜ್ಯದ ಕೌಶಂಬಿ ಜಿಲ್ಲೆಯ ಚಾಯಲ್‌ ತಾಲ್ಲೂಕಿನ ಬಸೇಡಿ ಗ್ರಾಮದವನಾಗಿದ್ದು, ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದಲ್ಲಿ ಸುಮಾರು 01 ವರ್ಷದಿಂದ ಪಾನ್‌ಶಾಪ್‌ ನಡೆಸಿಕೊಂಡು ಹೋಗುತ್ತಿದ್ದಾನೆ.


[ays_poll id=3]