
K2 ಹೆಲ್ತ್ ಟಿಪ್: ಮೆಕ್ಕೆಜೋಳ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಮಾರುಕಟ್ಟೆಗೆ ಬಂದರೆ ವಿವಿಧ ರುಚಿಯ ಹುಳಿ-ಖಾರ ಮಿಶ್ರಿತ ಜೋಳ ತಿನ್ನುವುದು ಬಾಯಿಗೆ ರುಚಿ ಮಾತ್ರ ಅಂದುಕೊಳ್ಳಬೇಡಿ, ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
* ಜೋಳ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರು ಇದನ್ನು ಅವಶ್ಯಕವಾಗಿ ಸೇವಿಸಬೇಕು. ನಾರಿನಂಶ ಹೆಚ್ಚಿರುವ ಕಾರಣ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
* ಮೆಕ್ಕೆ ಜೋಳ ಕಣ್ಣಿಗೆ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಎ ಇರುವುದರಿಂದ ಇದು ದೃಷ್ಟಿ ಚುರುಕುಗೊಳಿಸುತ್ತದೆ. ಮೆಕ್ಕೆ ಜೋಳದಲ್ಲಿರುವ ಕ್ಯಾರೊಟಿನಾಯ್ಡ್ ಕಣ್ಣುಗಳಿಗೆ ಒಳ್ಳೆಯದು.
* ಮೆಕ್ಕೆ ಜೋಳದಲ್ಲಿ ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
*ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಬಿ ಇತ್ಯಾದಿಗಳು ಮೆಕ್ಕೆ ಜೋಳದಲ್ಲಿ ಸಾಕಷ್ಟು ಕಂಡುಬರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಅಗತ್ಯ. ಕ್ಯಾಲ್ಸಿಯಂ ಕೊರತೆಯಿದ್ದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಮೆಕ್ಕೆ ಜೋಳದಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
![]() |
![]() |
![]() |
![]() |
![]() |
[ays_poll id=3]