This is the title of the web page
This is the title of the web page
international News

ವಿಶ್ವದ ಅತ್ಯಂತ ದುಬಾರಿ ವಿಸ್ಕಿ : 22.7 ಕೋಟಿಗೆ ಮಾರಾಟ..!


K2kannadanews.in

ನ್ಯೂಸ್ ಡೆಸ್ಕ್ : ಮದ್ಯ ಪ್ರಿಯರಿಗೆ ದುಬಾರಿ ಮದ್ಯದ ಸವಿ ಅನುಭವಿಸಲು ಹಾತೊರೆಯುತ್ತಾರೆ. ಸಾವಿರ, ಲಕ್ಷ ರೂಪಾಯಿಗಳ ಮದ್ಯಗಳ ಗುಟುಕು(gulp) ಹೀರುವುದೇ ಸಂತಸ ಕ್ಷಣ(happy moment) ಎನ್ನುತ್ತಾರೆ. ಈ ಮದ್ಯಪ್ರೀಯರ ಸಂತಲ ಡಬಲ್ ಮಾಡಲು ಇಲ್ಲೊಂದು ವಿಸ್ಕೆ ಇದೆ. ‘ದಿ ಮಕಲನ್ ಅದಾಮಿ 1926′(The Macallan Adami) ಹೆಸರಿನ ಸ್ಕಾಚ್‌ ವಿಸ್ಕಿಯ ಒಂದು ಬಾಟಲಿಯು ₹22.48 ಕೋಟಿ (22 ಲಕ್ಷ ಪೌಂಡ್‌) ಮೊತ್ತಕ್ಕೆ ಹರಾಜಾಗಿದ್ದು (Auctioned),ಹೊಸ ದಾಖಲೆ ಬರೆದಿದೆ.

ಲಂಡನ್‌ನ(londan) ಹೆಸರಾಂತ ಹರಾಜು ಮನೆಯಾದ ಸೋಥೆಬೈಸ್‌ನಲ್ಲಿ ದೂರವಾಣಿ ಮೂಲಕ ಮತ್ತು ಕೊಠಡಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ಈ ಮದ್ಯದ ಬಾಟಲಿ ಖರೀದಿಸಲು ಪೈಪೋಟಿಗೆ ಬಿದ್ದರು. ಇದರ ಲೇಬಲ್‌ಗಳನ್ನು ಇಟಲಿಯ(Italian) ವರ್ಣಚಿತ್ರಕಾರ ವ್ಯಾಲೆರಿಯೊ ಅಡಾಮಿ ವಿನ್ಯಾಸಗೊಳಿಸಿದ್ದಾರೆ. ‌ಈ ವಿಸ್ಕಿಯನ್ನು ಬಟ್ಟಿ ಇಳಿಸಿದ್ದು 1926ರಲ್ಲಿ. 1986ರಲ್ಲಿ ಇದನ್ನು ಬಾಟಲಿಯಲ್ಲಿ ಸಂಗ್ರಹಿಸುವುದಕ್ಕೂ ಮೊದಲು ಅರವತ್ತು ವರ್ಷಗಳವರೆಗೆ ಶೆರ್ರಿ ಪೀಪಾಯಿಗಳಲ್ಲಿ ಪಕ್ವಗೊಳಿಸಲಾಗಿತ್ತು.

ಕೇವಲ 40 ಬಾಟಲಿಯಷ್ಟು ವಿಸ್ಕಿಯನ್ನಷ್ಟೇ ಉತ್ಪಾದಿಸಲಾಗಿದೆ. ಇದೇ ಪೀಪಾಯಿಯಿಂದ ಸಂಗ್ರಹಿಸಿದ್ದ ಮತ್ತೊಂದು ಬಾಟಲಿ ವಿಸ್ಕಿಯು 2019ರಲ್ಲಿ ನಡೆದ ಹರಾಜಿನಲ್ಲಿ ₹15.56 ಕೋಟಿಗೆ ಹರಾಜು ಆಗಿತ್ತು. ಈ ವಿಸ್ಕಿಯನ್ನು ಖರೀದಿಸಿ ಮಾರಾಟ ಮಾಡುವುದು ಹಾಗೂ ತಮ್ಮಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಪ್ರತಿಯೊಬ್ಬ ಮದ್ಯ ಹರಾಜುಗಾರನ ಹೆಬ್ಬಯಕೆಯಾಗಿದೆ ಎಂದು ಸೋಥೆಬೈಸ್‌ನ ಮುಖ್ಯಸ್ಥ ಜಾನಿ ಫೌಲ್ ಹೇಳಿದ್ದಾರೆ.


[ays_poll id=3]