This is the title of the web page
This is the title of the web page
State News

ಶಿಕ್ಷಕನಾಗಬೇಕಿದ್ದವನ ಬಲಿ ಪಡೆದ ನೇಮಕಾತಿ ವಿಳಂಬ ನೀತಿ.. ಖಿನ್ನತೆಯಿಂದ ಶಿಕ್ಷಕ ಸಾವು


K2kannadanews.in

ದೇವದುರ್ಗ : ನೇಮಕಾತಿ ವಿಳಂಬ ನೀತಿಯಿಂದ (Delay policy) ಆಯ್ಕೆಯಾದ ಅಭ್ಯರ್ಥಿ (Candidate) ಶಾಲೆಗೆ ಹಾಜರಾಗುವ ಮುನ್ನವೇ ಮಾನಸಿಕ ಖಿನ್ನತೆಯಿಂದ (Mental depression) ಮಿದುಳು ಸಂಬಂಧಿ ಕಾಯಿಲೆಗೆ ತುತ್ತಾಗಿ ಮೃತಪಟ್ಟ ದಾರುಣ ಘಟನೆ ಮುಂಡರಗಿ ಗ್ರಾಮದಲ್ಲಿ ನಡೆದಿದೆ.

ಹೌದು ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಮುಂಡರಗಿ ಗ್ರಾಮದ ನಿವಾಸಿಯೊಬ್ಬ ಪದವೀಧರ ಶಿಕ್ಷಕರ (Degree teachers) ನೇಮಕದಲ್ಲಿ ಆಯ್ಕೆಯಾದ ಶಿಕ್ಷಕ, ಶಾಲೆಗೆ ಹಾಜರಾಗುವ ಮುನ್ನವೇ ಮಾನಸಿಕ ಖಿನ್ನತೆಯಿಂದ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಮೃತ ದುರಗಪ್ಪ ನರಸಪ್ಪ ಪೂಲಭಾವಿ (33) ಪದವೀಧರರ ಶಿಕ್ಷಕರ ನೇಮಕಾತಿಯ ಎರಡನೇ ಹಂತದಲ್ಲಿ ನಡೆದ, ಕಲ್ಯಾಣ ಕರ್ನಾಟಕ (Kalyana Karnataka) ಉಳಿಕೆ ವೃಂದದ ಹುದ್ದೆಗೆ ಆಯ್ಕೆಯಾಗಿದ್ದರು. ಈಚೆಗೆ ಕೌನ್ಸೆಲಿಂಗ್‌ನಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ (documents Verification) ಭಾಗಿಯಾಗಿದ್ದರು. ಆದರೆ, ಮೊದಲ ಹಂತದಲ್ಲಿ ಆಯ್ಕೆಯಾಗದ್ದರಿಂದ ಮತ್ತು ದೀರ್ಘಕಾಲ ನೇಮಕಾತಿ ವಿಳಂಬ ಸೇರಿ, ಹಲವು ಕಾರಣಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಎರಡನೇ ಹಂತದಲ್ಲಿ ಆಯ್ಕೆಯಾದರೂ ಪರಿಶೀಲನೆಗೆ ಮೆಡಿಕಲ್‌ ಸರ್ಟಿಫಿಕೆಟ್ (Medical certificate) ಪಡೆಯಲು ಪರದಾಡಿದ್ದಾರೆ. ನಂತರದ ದಿನಗಳಿಂದ ನಿರಂತರ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಕೊನೆಗೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ನಿಮಾನ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಇವರಿಗೆ ನಾಲ್ಕು ತಿಂಗಳ ಮಗು, ಪತ್ನಿ, ತಂದೆ, ತಾಯಿ ಇದ್ದಾರೆ. ಸೋಮವಾರ ಅಂತ್ಯಕ್ರಿಯೆ ಜರುಗಿತು. KPSC ಮತ್ತು ಸರಕಾರದ ನೇಮಕಾತಿ ವಿಳಂಬ ನೀತಿಯಿಂದ ಅದೆಷ್ಟೋ ಅಭ್ಯರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


[ays_poll id=3]