This is the title of the web page
This is the title of the web page
Sports NewsVideo News

ಮುಳುಗಿದ ಶೀಲಹಳ್ಳಿ ಸೇತುವೆ, ಸಂಚಾರ ಸ್ಥಗಿತ


ರಾಯಚೂರು(ಲಿಂಗಸಗೂರು) : ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1,65,595 ಕ್ಯೂಸೆಕ್ ನೀರು ನರಿಗೆ ಬಿಡಲಾಗಿದ್ದು, ಪ್ರವಾಹ ಭೀತಿ ಎದುರಾಗಿದೆ ಈಗಾಗಲೇ ಶೀಲಹಳ್ಳಿ ಸೇತುವೆ ಮುಳುಗಡೆಯಾದಗಿದೆ.

ನಾರಾಯಣಪುರ ಜಲಾಶಯದ 24 ಗೇಟುಗಳ ಮುಖಾಂತರ 1,65,595 ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದೆ. ಪ್ರಸ್ತುತ ನಾರಾಯಣಪುರ ಜಲಾಶಯಕ್ಕೆ 1,55,297 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

 

ಈ ಹಿನ್ನೆಲೆಯಲ್ಲಿ ಅಧಿಕಾರಿ, ಸಿಬ್ಬಂಧಿಗಳು ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿಗಳು ಶೀಲಹಳ್ಳಿ ಸೇತುವೆ ಹತ್ತಿರ ಸೂಕ್ತ ಭದ್ರತೆ ನೀಡಲಾಗಿದೆ. ಒಟ್ಟಾರೆ 33.31 TMC ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ 26.74 TMC ನೀರು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲದೆ ಜನ-ಜಾನುವಾರುಗಳು ಕೃಷ್ಣ ನದಿಗೆ ತೆರಳದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪ್ರವಾಹದ ಮುನ್ನೆಚ್ಚರಿಕೆ ಕುರಿತು ಗ್ರಾಮಗಳಲ್ಲಿ, ಟಾಮ್-ಟಾಮ್, ಮೈಕ್ ಡಂಗೂರ ಸಾರಲಾಗುತ್ತಿದೆ. ಲಿಂಗಸುಗೂರು ಸಹಾಯಕ ಆಯುಕ್ತರು ಸೀಲಹಳ್ಳಿ ಸೇತುವೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಯಾರನ್ನು ಕೂಡ ಸೇತುವೆ ಮೇಲೆ ಪ್ರಯಾಣಿಸಿದಂತೆ ಪೊಲೀಸ್ ನಿಯೋಜನೆ ಮಾಡಿಸಿದ್ದಾರೆ.


[ays_poll id=3]