LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಡವರ ಅಕ್ಕಿಗೆ ಕನ್ನ ಹಾಕುತ್ತಿರುವ ಮಾನ್ವಿ ಅಕ್ಕಿ ಕಳ್ಳ ಯಾರು..?

ಆಹಾರ ಇಲಾಖೆ, ಪೊಲೀಸರಿಂದ ದಾಳಿ ಪಡಿತರ ಅಕ್ಕಿ ವಶ, ಪ್ರಕರಣ ದಾಖಲು..

ದೇವದುರ್ಗ: ಬಡ ಕುಟುಂಬಗಳ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವದುರ್ಗ ಪಟ್ಟಣದಲ್ಲಿ ಗುರುವಾರ ರಾತ್ರಿ ಅಶೋಕ್ ಲೇಲ್ಯಾಂಡ್ ವಾಹನದ No KA 34 B 7723 ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎಫ್ ಐ ಆರ್ ಪ್ರಕಾರ 45 ಕ್ವಿಂಟಲ್ ಅಕ್ಕಿಯನ್ನು ಅಶೋಕ್ ಲೇಲ್ಯಾಂಡ್ ವಾಹನದ ಮೂಲಕ ವೀರೇಶ್ ಶಿವಪ್ಪ ನಾಯಕ್ ಬಾಲನಗರ ಮಾನ್ವಿ ವಯಸ್ಸು 24  A1 ಆರೋಪಿ ಮತ್ತು ಡ್ರೈವರ್  ಹಾಗೂ ಮಹೇಶ್ ತಂದೆ ಹನುಮಂತ  ಬಾಲನಗರ A2 ಆರೋಪಿ ಹಾಗು ಲೇಬರ್ ಹಾಗೂ ಎಂದು ತೋರಿಸಿದ್ದಾರೆ 
ಇದು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯ ಹೊರಬರಲಿದೆ. 

ರಾಜ್ಯ ಸರ್ಕಾರವು ಬಿಪಿಎಲ್ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸುತ್ತಿದೆ. ಆದರೆ, ಕೆಲವರು ಈ ಯೋಜನೆಯನ್ನೇ ದುರುಪಯೋಗ ಪಡಿಸಿಕೊಂಡು, ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿ ಪಡೆದ ಫಲಾನುಭವಿಗಳಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ಅವರಿಂದ ಅಕ್ಕಿಯನ್ನು ಖರೀದಿಸಿ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ನಂತರ ಈ ಅಕ್ಕಿಯನ್ನು ರಾತ್ರಿ ವೇಳೆ ವಾಹನಗಳ ಮೂಲಕ ಮಾನ್ವಿ ಪಟ್ಟಣಕ್ಕೆ ಸಾಗಿಸಲಾಗುತ್ತಿದೆ ಎನ್ನಲಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

ಅಕ್ಕಿ ಯಾರಿಗೆ ಸೇರಿದ್ದು? ಮಾನ್ವಿಯಲ್ಲಿ ಸ್ವೀಕರಿಸುವವರು ಯಾರು?

ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕಿ ಎಲ್ಲಿಂದ ಸಂಗ್ರಹಿಸಲಾಗಿದೆ, ಅದರ ಮೂಲ ಯಾವುದು, ಮಾನ್ವಿ ಪಟ್ಟಣದಲ್ಲಿ ಅಕ್ಕಿಯನ್ನು ಸ್ವೀಕರಿಸಲು ಉದ್ದೇಶಿಸಿದ್ದವರು ಯಾರು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ. ಎಫ್‌ಐಆರ್‌ನಲ್ಲಿ ಅಕ್ಕಿಯನ್ನು ಮಾನ್ವಿ ಪಟ್ಟಣಕ್ಕೆ ಸಾಗಿಸಲಾಗುತ್ತಿತ್ತು ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದ್ದರೂ, ಅಲ್ಲಿ ಅಕ್ಕಿಯನ್ನು ಸ್ವೀಕರಿಸಬೇಕಿದ್ದ ವ್ಯಕ್ತಿಗಳು ಅಥವಾ ಅದರ ಹಿಂದಿರುವ ಜಾಲದ ಬಗ್ಗೆ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

ವಾಹನದ ಮಾಲೀಕರು, ಬಾಡಿಗೆ ವಾಹನದ ವ್ಯವಸ್ಥೆ ಮಾಡಿದವರು ಹಾಗೂ ಅಕ್ಕಿ ಸಾಗಾಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳ ಪಾತ್ರದ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕಿದೆ. ಪ್ರಕರಣದಲ್ಲಿ ಯಾರ ಪಾತ್ರ ಎಷ್ಟಿದೆ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಬಡವರಿಗೆ ತಲುಪಬೇಕಾದ ಸರ್ಕಾರದ ಪಡಿತರ ಅಕ್ಕಿ ಅಕ್ರಮವಾಗಿ ಖಾಸಗಿ ವ್ಯಾಪಾರಕ್ಕೆ ಬಳಕೆಯಾಗುತ್ತಿದ್ದರೆ ಅದು ಗಂಭೀರ ವಿಚಾರವಾಗಿದೆ. ಆದ್ದರಿಂದ ಅಕ್ಕಿಯ ಮೂಲ, ಅದನ್ನು ಸಂಗ್ರಹಿಸಿದವರು, ಸಾಗಾಟಕ್ಕೆ ಬಳಸಿದ ವಾಹನದ ವ್ಯವಸ್ಥೆ ಮಾಡಿದವರು ಹಾಗೂ ಮಾನ್ವಿಯಲ್ಲಿ ಅಕ್ಕಿಯನ್ನು ಸ್ವೀಕರಿಸಬೇಕಿದ್ದವರ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.

ಅಲ್ಲದೆ, ಈ ಅಕ್ರಮದ ಹಿಂದೆ ಯಾರೇ ಇದ್ದರೂ ಅವರ ಪಾತ್ರವನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಬಡ ಫಲಾನುಭವಿಗಳಿಗೆ ತಲುಪಬೇಕಾದ ಅನ್ನಭಾಗ್ಯ ಯೋಜನೆಯ ಅಕ್ಕಿ ದುರುಪಯೋಗವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST