LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೆದಿಕಿನಾಳದಲ್ಲಿ PACS ಮುಖ್ಯ ಕಾರ್ಯದರ್ಶಿ ಆತ್ಮಹತ್ಯೆ

ಸಾಲಗಾರರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣು..

ರಾಯಚೂರು: ಮಾನಸಿಕ ಕಿರುಕುಳದಿಂದ ಬೇಸತ್ತು PACS ಬ್ಯಾಂಕ್‌ನ ಮುಖ್ಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮೆದಿಕಿನಾಳದಲ್ಲಿ ನಡೆದಿದೆ.

ಮೃತರನ್ನು ಬಸವರಾಜ ಎಂದು ಗುರುತಿಸಲಾಗಿದೆ. ಮೆದಿಕಿನಾಳದ ಪಿಎಸಿಎಸ್ ಬ್ಯಾಂಕ್‌ನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಬಸವರಾಜ, ಸಾಲದ ಹಣ ವಾಪಸ್ ನೀಡುವಂತೆ ಕೆಲವರು ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಸಾಲ ತೀರಿಸಲು ಸಾಧ್ಯವಾಗದಿದ್ದರೆ ಸಾಯುವಂತೆ ಪ್ರಚೋದನೆ ನೀಡಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ವ್ಯಾಪಾರ ಸಂಬಂಧ ಹಣ ನೀಡಿದ್ದ ಕೆಲವರಿಂದಲೂ ಹಣ ವಾಪಸ್ ನೀಡಲು ನಿರಾಕರಣೆ ಹಾಗೂ ಅವಹೇಳನಕಾರಿ ಮಾತುಗಳಿಂದ ತೊಂದರೆ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಆರ್‌ಡಿಸಿಸಿ ಬ್ಯಾಂಕ್ ಮಸ್ಕಿ ಘಟಕದ ಮ್ಯಾನೇಜರ್ ನಾಗರತ್ನ ಅವರು ಕೆಲಸ ಕೊಡಿಸುವುದಾಗಿ ಹಣ ಪಡೆದು, ಬಳಿಕ ಕೆಲಸ ಹಾಗೂ ಹಣದ ವಿಚಾರದಲ್ಲಿ ಮನಸ್ಸಿಗೆ ನೋವಾಗುವಂತೆ ಮಾತನಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳಿಂದ ಮನನೊಂದ ಬಸವರಾಜ, ಆರೋಪಿತರ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು, ಸೆ.21ರಂದು ಮುಂಜಾನೆ 4ರಿಂದ 7.30ರ ಮಧ್ಯೆ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST