LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು ಜಿಲ್ಲೆಯಲ್ಲಿ ಕಂದಮ್ಮಗಳ‌ ಮೇಲೆ ಕಾಮುಕನ ಅಟ್ಟಹಾಸ

30‌ ವರ್ಷದ ವ್ಯಕ್ತಿ 8 ಮತ್ತು 9 ವರ್ಷದ ಬಾಲಕೀಯರ ಮೇಲೆ.... ಛೇ..

 

ಜಗತ್ತನ್ನೇ ಕಾಣದ ಪುಟ್ಟ ಕಂದಮ್ಮಗಳ ಮೇಲೆ ಕುಟುಂಬಕ್ಕೆ ಪರಿಚಯ ಇರುವ ವ್ಯಕ್ತಿಯೇ ಕಾಮುಕ ಕೃತ್ಯ ಎಸಗಿದ್ದಾನೆ. ಎರಡು ಮತ್ತು ಮೂರನೇ ತರಗತಿ ಓದುತ್ತಿದ್ದ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ಹೌದು ಪ್ರಸ್ತುತ ಕಾಲದಲ್ಲಿ ಯಾರನ್ನು ನಂಬುವುದು? ಯಾರನ್ನ ಬಿಡುವುದು ಎನ್ನುವಂತಾಗಿದೆ. ಕುಟುಂಬಕ್ಕೆ ಪರಿಚಯ ಇರುವ ವ್ಯಕ್ತಿಯೊಬ್ಬ ಅದೇ ಕುಟುಂಬದ ಎರಡು ಪುಟ್ಟ ಕಂದಮ್ಮಗಳ ಮೇಲೆ ಅತ್ಯಾಚಾರ ಎದೆಗೆ ಇರುವ ಘಟನೆ ಬೆಳಕಿಗೆ ಬಂದಿದೆ.  ರಾಯಚೂರು ಜಿಲ್ಲೆಯ ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತ ಅಕ್ಕ ತಂಗಿಯ ಮೇಲೆ ಕಿರಾತಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. 8 ಹಾಗೂ 9 ವರ್ಷದ ಬಾಲಕಿಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಬಾಲಕಿಯರ ಕುಟುಂಬಕ್ಕೆ ಪರಿಚಯಸ್ಥ ವ್ಯಕ್ತಿಯಿಂದಲೇ ಅತ್ಯಾಚಾರ ನಡೆದಿದೆ.‌ ಐಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ 30 ವರ್ಷದ ಬಾಬಾನನ್ನ ಪೊಲೀಸರು  ಬಂಧಿಸಿದ್ದಾರೆ. 

ಇನ್ನೂ ಕೂಲಿ ನಾಲಿ ಮಾಡಿ ಅಂದಿನ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪಾಲಕರು ಮಕ್ಕಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋದ ಸಮಯ ನೋಡಿಕೊಂಡು ಅವರ ಶೆಡ್‌ಗೆ ಬಂದು ಕೃತ್ಯ ಎಸಗಿದ್ದಾನೆ. ಘಟನೆಯಿಂದ ಕೂಲಿ ಕೆಲಸ ಮಾಡಿಕೊಂಡು ಶೆಡ್‌ನಲ್ಲಿ ಜೀವನ ನಡೆಸುತ್ತಿರುವ ಬಡ ಕುಟುಂಬಕ್ಕೆ ಘಟನೆಯಿಂದ ಆಘಾತವಾಗಿದೆ. ಸಮಾಜವೇ ತಲೆತಗ್ಗಿಸುವಂತಹ ಘಟನೆ ಎಂದು ಜರುಗಿತು , ಘಟನೆಯಿಂದ ಸಿಂಧನೂರು ಬೆಚ್ಚಿಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೊ, ಅತ್ಯಾಚಾರ, ಜಾತಿನಿಂದನೆ ಪ್ರಕರಣ ದಾಖಲಾಗಿದ್ದು ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

 

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST