LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಊಟದ ಕವರ್‌ನಲ್ಲಿ ಹಾವಿನ ಮರಿ ಪ್ರತ್ಯಕ್ಷ..

ಕಾಲುವೆ ಗಸ್ತಿನಲ್ಲಿದ್ದ ಪೊಲೀಸರಿಗೆ ಶಾಕ್..!

 

ರಾಯಚೂರು: ರೈತರಿಗೆ ನೀರು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಕಾಲುವೆ ಗಸ್ತು ಕಾರ್ಯದಲ್ಲಿದ್ದ ಪೊಲೀಸರಿಗೆ ಊಟದ ಕವರ್‌ನೊಳಗೆ ಹಾವಿನ ಮರಿ ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಮೂಡಿಸಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಕಳೆದ ರಾತ್ರಿ ಕಾಲುವೆ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಊಟದ ಪೊಟ್ಟಣಗಳನ್ನು ಕವರ್‌ನಲ್ಲಿ ನೀಡಲಾಗಿತ್ತು. ಊಟ ಮಾಡಲು ಕವರ್ ತೆರೆಯುವ ಸಂದರ್ಭದಲ್ಲಿ ಅದರೊಳಗೆ ಹಾವಿನ ಮರಿ ಇರುವುದನ್ನು ಕಂಡು ಪೊಲೀಸರು ಗಾಬರಿಗೊಂಡಿದ್ದಾರೆ. ಕೂಡಲೇ ಹಾವಿನ ಮರಿಯನ್ನು ಸುರಕ್ಷಿತವಾಗಿ ಹೊರತೆಗೆದು, ಯಾವುದೇ ತೊಂದರೆಯಾಗದಂತೆ ಬಿಟ್ಟು ಬಳಿಕ ಪೊಲೀಸರು ಊಟ ಮಾಡಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ನಾಲೆಗಳ ಮೇಲೆ ಕಳೆದ ಎರಡು ತಿಂಗಳಿಂದ ಪೊಲೀಸರು ನಿರಂತರವಾಗಿ ಕಾಲುವೆ ಗಸ್ತು ಕಾರ್ಯ ನಡೆಸುತ್ತಿದ್ದಾರೆ. ಅಕ್ರಮವಾಗಿ ನೀರು ಬಳಕೆ ಮಾಡುವುದನ್ನು ತಡೆದು, ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಹಗಲು-ರಾತ್ರಿ ಎನ್ನದೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಶೇಷವಾಗಿ ರಾತ್ರಿ ವೇಳೆ ಕಾಲುವೆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಹಾವು, ಚೇಳು ಸೇರಿದಂತೆ ಕೆಲವೊಮ್ಮೆ ಕಾಡುಪ್ರಾಣಿಗಳ ದಿಢೀರ್‌ ಪ್ರತ್ಯಕ್ಷತೆಯ ಭಯವೂ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಪೊಲೀಸರು ಕರ್ತವ್ಯ ಮುಂದುವರಿಸುತ್ತಿದ್ದಾರೆ. ಪೊಲೀಸರ ಹಗಲಿರುಳು ಶ್ರಮದಿಂದ ಕೆಳಭಾಗದ ರೈತರಿಗೂ ನೀರು ತಲುಪುತ್ತಿದ್ದು, ಇದರಿಂದ ಪೊಲೀಸ್ ಕಾರ್ಯಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST