ರಾಯಚೂರು ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಸಿಂಧನೂರಿನಲ್ಲಿ ಕಂದಮ್ಮನ ಮೇಲೆ ನಡೆದ ದಾಳಿದ್ದವು ಹಾಗೂ ಮೊನ್ನೆಯಷ್ಟೇ ಮಲಿಯಾಬಾದ್ ಗ್ರಾಮದಲ್ಲಿ ಬಾಲಕನ ಮೇಲೆ ನಡೆದ ಭೀಕರ ದಾಳಿಯ ಬೆನ್ನಲ್ಲೇ, ಮಾನ್ವಿ ಪಟ್ಟಣದಲ್ಲಿ ಬೀದಿ ನಾಯಿ ದಾಳಿ ನಡೆದಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿ ಚೇತರಿಸಿಕೊಂಡಿದೆ.
ಮಾನ್ವಿ ಪಟ್ಟಣದ ನಿವಾಸಿ 3 ವರ್ಷದ ಹೀನಾ ಎಂಬ ಬಾಲಕಿ ಮನೆಯ ಕಾಂಪೌಂಡ್ ಒಳಗೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿ ಮಾರಣಾಂತಿಕವಾಗಿ ದಾಳಿ ನಡೆಸಿದೆ. ದಾಳಿಯಲ್ಲಿ ಬಾಲಕಿಯ ಮುಖದ ಕಣ್ಣಿನ ಪಕ್ಕ ಹಾಗೂ ಎದೆ ಭಾಗಕ್ಕೆ ಗಾಯಗಳಾಗಿವೆ. ಬಾಲಕಿಯ ಚೀರಾಟ ಕೇಳಿ ಸ್ಥಳೀಯರು ಹಾಗೂ ಪೋಷಕರು ಧಾವಿಸಿ ನಾಯಿಯನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ತಕ್ಷಣವೇ ಆಕೆಯನ್ನು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.