
ರಾಯಚೂರು : ಕೆಳಬಾಗದ ರೈತರಿಗೆ ಕಾಲುವೆಗಳಲ್ಲಿ ಗೀಜು ನಿರ್ವಹಣೆ ಮಾಡಲು ವಿಭಾಗಿಯ ಆಯುಕ್ತರಿಗೆ ಕೊಪ್ಪಳ ನೀರಾವರಿ ಅಧಿಕಾರಿಗಳು ತಪ್ಪದೆ ಮಾಹಿತಿ ನೀಡುತ್ತಿದ್ದಾರೆ ಎಂದು ರೈತ ಮುಖಂಡ ಚಾಮರಾಸ ಮಾಲಿಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಸಿರವಾರ ಮಾಲ್ವಿ ಮತ್ತು ರಾಯಚೂರು ತಾಲೂಕಿನ ಕೆಳಭಾಗದ ತುಂಗಭದ್ರಾ ನಾಲೆ ನಂಬಿಕೊಂಡಿರುವ ರೈತರಿಗೆ ಸರಿಯಾಗಿ ನಿರೂ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪಕ್ಷಾತೀತ ಹೋರಾಟ ಮಾಡಲಾಗುತ್ತಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಿದಂತೆ ನಾಲೆಗಳಲ್ಲಿ ಗೇಜ್ ನಿರ್ವಹಣೆ ಮಾಡುತ್ತಿಲ್ಲ. ಕೆಳಬಾಗದ ಭತ್ತ, ಹತ್ತಿ, ಮೆಣಸಿನ ಕಾಯಿ ಸೇರಿ ಎಲ್ಲಾ ಬೆಳೆಗೆ ನೀರು ಅಗತ್ಯವಾಗಿ ಬೇಕಿದೆ. ಸಿರವಾರ, ಮಾನ್ವಿ ರಾಯಚೂರು ಭಾಗಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ. ನೀರಾವರಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಎಸ್ಪಿ ಅವರಿಗೆ ನೀರು ತರಲು ಆಗುತ್ತಿಲ್ಲ. ಪಕ್ಷಾತೀತ ಪ್ರತಿಭಟನೆಗೆ ಮಣಿದು ವಿಭಾಗೀಯ ಆಯುಕ್ತರೊಂದಿಗೆ ಸಭೆ ನಡೆಸುವ ಭರವಸೆ ನೀಡಿದ್ದರು. ಇದೀಗ ಅದಕ್ಕೂ ಕೂಡ ಜಿಲ್ಲಾಧಿಕಾರಿಗಳು.
ಮೇಲ್ಭಾಗದ ನೀರಾವರಿ ಅಧಿಕಾರಿಗಳು ವಿಭಾಗೀಯ ಆಯುಕ್ತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪ್ರಮುಖವಾಗಿ ನಾಲೆಗಳ ಮುಖಾಂತರ ರೈತರಿಗೆ ಕೇವಲ ಕಡತಗಳಲ್ಲಿ 4200 ಕ್ಯೂ ಸೆಕ್ ನೀರು ಕೊಟ್ಟಿದ್ದಾರೆ. ಆದರೆ ವಾಸ್ತವವಾಗಿ ಇಲ್ಲಿ ನೀರು ತಲುಪಿಲ್ಲ.ಇದಕ್ಕೆ ಕೊಪ್ಪಳ ಮೇಲ್ಭಾಗದ ರೈತರು ಮತ್ತು ಅಧಿಕಾರಿಗಳು ಕೆಳಭಾಗಕ್ಕೆ ನೀರು ಸಿಗಲು ಸಹಕರಿಸುತ್ತಿಲ್ಲ. ಅಕ್ರಮ ನೀರಾವರಿಯಿಂದ ಮಾನ್ವಿ, ರಾಯಚೂರು ಮುಳುವಾಗಿದೆ.
ನೀರಾವರಿ ಸಚಿವರು ಕೂಡ ಇಷ್ಟೆಲ್ಲಾ ಹೋರಾಟಗಳಾಗುತ್ತಿದ್ದರು, ಸಭೆ ಕರೆದು ವಿಚಾರಣೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿತ್ತು. ಆದರೆ ಆ ಒಂದು ಕೆಲಸ ಮಾಡುತ್ತಿಲ್ಲ ಎಂದು ಸಮಾಧಾನವಾಯಿತು. ಸಂಜೆಯ ವೇಳೆಗೆ ಒಂದು ನಿರ್ಧಾರ ತೆಗೆದುಕೊಳ್ಳದಿದ್ದರೆ ನಾಳೆಯಿಂದ ಉಗ್ರ ಹೋರಾಟ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
![]() |
![]() |
![]() |
![]() |
![]() |
[ays_poll id=3]