
K2 ಸ್ಪೋರ್ಟ್ಸ್ ನ್ಯೂಸ್ : ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಟೂರ್ನಿ ಸೀಸನ್-2 ಗಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ರಾಯಚೂರಿನ 4 ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.
ಹೌದು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಆಯೋಜಿಸುವ ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ-20 ಟೂರ್ನಿ ಸೀಸನ್-1 ಯಶಸ್ವಿಯಾಗಿ ನಡೆಯಿತು. ಇದೀಗ ಸೀಸನ್-2ಕ್ಕೆ ನಡೆದ ಆಟಗಾರರ ಹರಾಜು ಪ್ರಕ್ರಿಯೆ ರಾಯಚೂರು ಜೋನ್‌ನ 8 ಆಟಗಾರರು, ಅದರಲ್ಲೂ ರಾಯಚೂರಿನ 4 ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರಿನ ಮನೋಜ ಭಾಂಡಗೆ, ಯರಮರಸ್ ಕ್ಯಾಂಪ್‌ನ ವಿದ್ಯಾಧರ ಪಾಟೀಲ್, ರಾಯಚೂರು ಸಿಟಿಯ ತಿಪ್ಪಾರೆಡ್ಡಿ, ಶರಣಗೌಡ ಭಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇನ್ನೂ ಕಲಬುರಗಿ ಜಿಲ್ಲೆ ಶಹಾಬಾದ್‌ನ ಆನಂದ ದೊಡ್ಡಮನಿ, ಯಾದಗಿರಿಯ ಅವಿನಾಶ ದೊಡ್ಡಮನಿ, ಕಲಬುರಗಿಯ ಶಶಿಕುಮಾರ ಕಾಂಬ್ಳೆ, ಶ್ರೇಯಷ್ ಪುರಾಣಿಕ ಹರಾಜಿನಲ್ಲಿ ವಿವಿಧ ತಂಡ ಸೇರಿಕೊಂಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]