This is the title of the web page
This is the title of the web page
State News

ಚುನಾವಣೆ ಕರ್ತವ್ಯಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಗೃಹರಕ್ಷಕ ಸಿಬ್ಬಂದಿಗಳ ಗೋಳಾಟ


K2kannadanews.in

ನ್ಯೂಸ್ ಡೆಸ್ಕ್ : ಮಧ್ಯಪ್ರದೇಶ(madhy Pradesh) ಚುನಾವಣೆ ಕರ್ತವ್ಯಕ್ಕೆ(election duty) ತೆರಳಿದ್ದ, ಗೃಹರಕ್ಷಕ ದಳದ(homegard) ಸಿಬ್ಬಂದಿಗಳನ್ನು ಕರ್ತವ್ಯ ಮುಗಿದು ನಾಲ್ಕು ದಿನ ಕಳೆದರೂ, ವಾಪಸ್ ಕಳಿಸುವಲ್ಲಿ ಮಧ್ಯಪ್ರದೇಶದ ಸಂಬಂದಪಟ್ಟ ಅಧಿಕಾರಿಗಳ(officer’s) ನಿರ್ಲಕ್ಷ್ಯ ವಹಿಸಿದ್ದು, ಸಿಬ್ಬಂದಿಗಳ ಗೋಳಾಟ ಕೇಳುವವರಿಲ್ಲದಂತಾಗಿದೆ.

ಹೌದು ಮಧ್ಯಪ್ರದೇಶ ಸೇವೂರು ಜಿಲ್ಲೆ(sevuru district) ಸೇರಿ ವಿವಿಧ ಪ್ರದೇಶಗಳಿಗೆ ಚುನಾವಣೆ ಕರ್ತವ್ಯಕ್ಕಾಗಿ ಕರ್ನಾಟಕದಿಂದ 4000 ಸಾವಿರ ಗೃಹರಕ್ಷಕದಳ ಸಿಬ್ಬಂದಿಗಳು ತೆರಳಿದ್ದರು. ರಾಯಚೂರು(Raichur) ಜಿಲ್ಲೆಯಿಂದೂ 130 ಗೃಹರಕ್ಷಕ ದಳ ಸಿಬ್ಬಂದಿಗಳು(staff) ತೆರಳಿದ್ದು, ಇದೇ ತಿಂಗಳು 12ಕ್ಕೆ ಮದ್ಯಪ್ರದೇಶಕ್ಕೆ ತೆರಳಿದ್ದರು,17ರಂದು ಕರ್ತವ್ಯ ಮುಗಿದಿದೆ, 18 ವಾಪಾಸ್ಸಾಗಬೇಕು. ಆದ್ರೆ ಇಲ್ಲಿಂದ ನಮ್ಮನ್ನು ಕಳುಹಿಸಲು ಯಾರು ಮುತುವರ್ಜಿ ತೋರಿಸುತ್ತಿಲ್ಲ ಎಂಬುದೇ ಸಿಬ್ಬಂದಿಗಳ ಅಳಲಾಗಿದೆ. ಅಲ್ಲಿನ ಡಿಜಿ(DG) , ಎಲೆಕ್ಷನ್ ಕಮಿಷನರ್(election Commissioner) ಅವರಿಗೆ ಕೇಳಿದರೆ ನಮಗೆ ಸಂಬಂದವಿಲ್ಲ ಎನ್ನುತ್ತಿದ್ದಾರೆ.

ಚುನಾವಣೆ ಮುಗಿದೆ ನಾಲ್ಕು ದಿನವಾದ್ರು ವಾಪಸ್ ಕಳಿಸುವ ವ್ಯವಸ್ಥೆ ಮಾಡುತ್ತಿಲ್ಲ.‌ಈ ಮಧ್ಯ ಕುಟುಂಬಸ್ಥರಿಗೆ ಚುನಾವಣೆ ಕರ್ತವ್ಯ ಕೇತ್ರಳಿದವರನ್ನು ಜೈಲಿಗೆ ಹಾಕಿದ್ದಾರೆ ಎಂಬ ವದಂತಿ ಹರಡಿದೆ. ವದಂತಿಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಉಳಿಯಲು ನೀಡಿದ್ದ ಕಲ್ಯಾಣಮಂಟಪದವರು ಮದುವೆ ಸಮಾರಂಭಗಳಿಗೆ ಎಂದು ಹೊರಗೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.


[ays_poll id=3]