This is the title of the web page
This is the title of the web page
Crime NewsState NewsVideo News

ತುಂಬಿದ ಟ್ರ್ಯಾಕ್ಟರ್ ಪಲ್ಟಿ : ಒಂದು ಗಂಟೆ ಟ್ರಾಫಿಕ್ ಜಾಮ್


K2kannadanews.in

ರಾಯಚೂರು : ಹೆದ್ದಾರಿ(highway) ಮಧ್ಯದಲ್ಲಿ ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್(tractor) ಪಲ್ಟಿಯಾಗಿ, ಒಂದು ಗಂಟೆಗೂ(one hour) ಹೆಚ್ಚು ಕಾಲ ಟ್ರಾಫಿಕ್ ಜಾಮ್(traffic jam) ಉಂಟಾಗಿ, ಸಂಚಾರ ಅಸ್ತವ್ಯಸ್ತವಾದ ಘಟನೆ ಕುರುಡಿ ಕ್ರಾಸ್ ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿ(manvi) ತಾಲೂಕಿನ ಕುರಡಿ ಕ್ರಾಸ್ ಬಳಿ ಘಟನೆ ನಡೆದಿದೆ. ಮಾನ್ವಿ ಕಡೆಯಿಂದ ರಾಯಚೂರು ಕಡೆ ಹುಲ್ಲು ಹೊತ್ತು ಸಾಗುತ್ತಿದ್ದ, ಟ್ರ್ಯಾಕ್ಟರ್ ಕುರುಡಿ ಕ್ರಾಸ್ ಬಳಿ ಚಾಲಕನ(driver) ನಿಯಂತ್ರಣ ತಪ್ಪಿ, ಹಿಂಭಾಗದ ಟ್ರ್ಯಾಲಿ ಪಲ್ಟಿಯಾಗಿದೆ. ಟ್ರಾಲಿ ನಡು ರಸ್ತೆಯಲ್ಲಿ ಪಲ್ಟಿಯಾಗಿರುವ ಹಿನ್ನೆಲೆಯಲ್ಲಿ, ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ನಲ್ಲಿದ್ದ ಕೆಲವರು, ಸಣ್ಣಪುಟ್ಟ ಗಾಯಗಳಿಂದ(small injuries) ಪಾರಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಮಾನ್ವಿ ಪೊಲೀಸ್ ಠಾಣಾ(manvi police station) ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


[ays_poll id=3]