This is the title of the web page
This is the title of the web page
Feature Articleinternational NewsVideo News

ಮೂತ್ರ ಪರೀಕ್ಷೆ ಸಾಮರ್ಥ್ಯ ಹೊಂದಿರುವ ಹೈಟೆಕ್ ಟಾಯ್ಲೆಟ್ : ವಿಡಿಯೋ ವೈರಲ್


K2kannadanews.in

Viral video news : ಸದಾ ಹೊಸ ತಂತ್ರಜ್ಞಾನ (technology) ಆವಿಷ್ಕಾರ ಮಾಡಿ ಸುದ್ದಿಯಲ್ಲಿ ಬರುವ ಚೀನಾ ಸ್ಮಾರ್ಟ್ ಟಾಯ್ಲೆಟ್ (smart toilet) ಒಂದನ್ನು ಅಭಿವೃದ್ಧಿ ಪಡಿಸಿದೆ. ಈ ಶೌಚಾಲಯ ಮೂತ್ರ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದ್ದು, ಇದರಿಂದ ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳ ಲಕ್ಷಣಗಳನ್ನು ಮೊದಲೇ ತಿಳಿದುಕೊಳ್ಳಬಹುದಂತೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಎತ್ತಿದ ಕೈ. ಹೌದು ಒಂದು ಕಾಲದಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿಯ ಓಟದಲ್ಲಿ ಅಮೇರಿಕಾ, ಜರ್ಮನಿ, ಜಪಾನ್, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮುಂಚೂಣಿಯಲ್ಲಿದ್ದವು. ಆದರೆ ಇಂದು ಚೀನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಇದೀಗ ಚೀನಾದ ಕಂಪೆನಿಯೊಂದು ಸ್ಮಾರ್ಟ್ ಟಾಯ್ಲೆಟ್ ಅನ್ನು ಸಹ ಅಭಿವೃದ್ಧಿಪಡಿಸಿದ್ದು, ಇದು ಮೂತ್ರ ಪರೀಕ್ಷೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳ ಲಕ್ಷಣಗಳನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ. ಈ ವಿಶಿಷ್ಟ ಶೌಚಾಲಯದಲ್ಲಿ ಹಿಡನ್ ಸೆನ್ಸರ್ ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ಕ್ಯಾಲ್ಸಿಯಂ, ಗ್ಲೂಕೋಸ್, ಪ್ರೋಟೀನ್ ಲೆವೆಲ್ ಗಳನ್ನು ಪರೀಕ್ಷಿಸಬಹುದು. ಅಷ್ಟೇ ಅಲ್ಲದೆ ಹೃದ್ರೋಗ, ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳ ಲಕ್ಷಣಗಳನ್ನೂ ಮೊದಲೇ ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ.


[ays_poll id=3]