This is the title of the web page
This is the title of the web page
State News

ಗ್ಯಾರಂಟಿ ಕಾರ್ಡ್ : ಉಚಿತ ಪ್ರಯಾಣ..ಬಸ್ ಇಲ್ಲ..?


K2 ನ್ಯೂಸ್ ಡೆಸ್ಕ್ : ನೂತನ ಸಿದ್ದರಾಮಯ್ಯ ಸರಕಾರ 5 ಗ್ಯಾರಂಟಿ ಕಾರ್ಡ್ ಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ಜೂ.11 ರಿಂದ ರಾಜ್ಯದಲ್ಲಿ ಮಹಿಳೆಯರಿಗೆ ಲಕ್ಸುರಿ, ಸ್ಲಿಪರ್ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 11ರಿಂದ ರಾಜ್ಯದ ಎಲ್ಲಾ ನಿಗಮಗಳ ಸಾಮಾನ್ಯ ಬಸ್ಸುಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ. ಇದರಿಂದ 4 ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘ ಹೇಳಿದೆ. ಸರ್ಕಾರದ ಬಳಿ ಒಟ್ಟು 23,978 ಬಸ್ ಇದೆ. ಈ ಪೈಕಿ 11,000 ಸಾಮಾನ್ಯ ಬಸ್ ಇದ್ದು, ಸದ್ಯ 40 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ.ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ 10,000 ಬಸ್‌ಗಳು ಹೆಚ್ಚು ಬೇಕು ಎಂದು ಅದು ಹೇಳಿದೆ.


[ays_poll id=3]